ಲೋಕೋ ಪೈಲೆಟ್ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡಲು ಮುಖ್ಯಮಂತ್ರಿ ಚಂದ್ರು ಆಗ್ರಹ

Ravi Talawar
ಲೋಕೋ ಪೈಲೆಟ್ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡಲು ಮುಖ್ಯಮಂತ್ರಿ ಚಂದ್ರು ಆಗ್ರಹ
WhatsApp Group Join Now
Telegram Group Join Now
ನೈರುತ್ಯ ರೈಲ್ವೆಯ ಸಹಾಯಕ ಲೋಕೋ ಪೈಲೆಟ್ ಹುದ್ದೆಗಳಿಗೆ ನಡೆಯುವ ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಅವಕಾಶ ನೀಡಿದ್ದು ಕನ್ನಡ ಭಾಷೆಗೆ ಆಯ್ಕೆಯ ಅವಕಾಶ ನೀಡದಿರುವುದು  ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿರುವಂತಹ ಅಪಮಾನ. ಈ ಕೂಡಲೇ ಕನ್ನಡದಲ್ಲಿಯೂ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣರವರಿಗೆ ಪತ್ರ ಬರೆಯುವ ಮೂಲಕ ಅಗ್ರಹಿಸಿದ್ದಾರೆ.
ಇದೇ ಹುದ್ದೆಗಳಿಗೆ ಮೇ ತಿಂಗಳಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಕನ್ನಡ ಭಾಷೆಗೂ ಸಹ ಅವಕಾಶವಿತ್ತು. ಈಗ ಹಿಂದಿ ಇಂಗ್ಲಿಷ್ ಜೊತೆಗೆ ತಮಿಳು ಭಾಷೆಗೆ ಮಾತ್ರ ಅವಕಾಶ ನೀಡಿ ಕನ್ನಡ ಭಾಷೆಯನ್ನು ಕೈ ಬಿಟ್ಟಿರುವುದು ನಿಜಕ್ಕೂ ದುರಂತ. ಎರಡು ತಿಂಗಳುಗಳಿಂದ ಕನ್ನಡ ಭಾಷೆಯಲ್ಲಿ ಅಭ್ಯಸಿಸಿ ಸಿದ್ಧತೆ ಮಾಡಿಕೊಂಡಿರುವ ಲಕ್ಷಾಂತರ ಅಭ್ಯರ್ಥಿಗಳು ಹತಾಶೆಯ ಸ್ಥಿತಿಯಲ್ಲಿದ್ದಾರೆ.  ಈ ಕೂಡಲೇ ರೈಲ್ವೆ ಖಾತೆ ಸಚಿವರು ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ ಎಂದು ಆಗ್ರಹಿಸಿದರು.
ಕೆ ಎ ಎಸ್ ಹುದ್ದೆಗೆ ನಡೆಯಲಿರುವ ಪರೀಕ್ಷಾ ದಿನಾಂಕವನ್ನು ಬದಲಿಸಿ: ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ  ಪತ್ರವನ್ನು ಬರೆದು , ಕರ್ನಾಟಕ   ಲೋಕಸೇವಾ ಆಯೋಗ ನಡೆಸುತ್ತಿರುವ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಇದೇ ತಿಂಗಳ ಆಗಸ್ಟ್ 25ರಂದು  ದಿನಾಂಕವನ್ನು ನಿಗದಿಪಡಿಸಿದ್ದಾರೆ. ಆದರೆ  ಕೇಂದ್ರ ಸರ್ಕಾರದ ಐಬಿಪಿಎಸ್ ಬ್ಯಾಂಕ್ ಕ್ಲರ್ಕ್ ಗಳ ಹುದ್ದೆಗಳಿಗಾಗಿ  ನಿಗದಿಪಡಿಸಿದ್ದಾರೆ ಇದೆ ಆಗಸ್ಟ್ ತಿಂಗಳ 24ರಂದು ನಿಗದಿಪಡಿಸಿದ್ದಾರೆ. ಎರಡು ಹುದ್ದೆಗಳಿಗೆ ಅಭ್ಯಾಸ ಮಾಡುತ್ತಿರುವ ಲಕ್ಷಾಂತರ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.  ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಕೆಎಎಸ್ ಪರೀಕ್ಷಾ ದಿನಾಂಕವನ್ನು ಮುಂದೂಡಬೇಕೆಂದು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದಲ್ಲದೆ ಪರೀಕ್ಷಾ ದಿನಾಂಕದಂದು ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸುವ ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಹಾಗೂ ರೈಲ್ವೆ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಸಹ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
WhatsApp Group Join Now
Telegram Group Join Now
Share This Article