ಬಳ್ಳಾರಿ,ಸೆ.೦5.. ನೌಕರರ ನಿಯೋಜನೆ ರದ್ದುಪಡಿಸುವ ಕುರಿತು ಕ್ರಮ ಜಿಲ್ಲಾಧಿಕಾರಿಗಳ ಪತ್ರಕ್ಕೆ ವರದಿ ನೀಡಲು ಮೀನಾಮೇಷ ಎಣಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪರವರ ಮೇಲೆ ಕ್ರಮ ಜರುಗಿಸುವಂತೆ ಭೀಮ ಆರ್ಮಿ ಜಿಲ್ಲಾಧÀ್ಯಕ್ಷ ಸಿದ್ದೇಶ್ ಊಳೂರು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೌಕರರ ನಿಯೋಜನೆ ರದ್ದುಪಡಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಪತ್ರಕ್ಕೆ ವರದಿ ನೀಡಲು ಈ ಹಿಂದೆ ಜಿಲ್ಲಾಧಿಕಾರಿಗಳು ಪತ್ರ ನೀಡಿ, ಒಂದು ತಿಂಗಳು ಅಂದರೆ ದಿನಾಂಕ :೦೨.೦೮.೨೦೨೫ ಕಳೆದರೂ ಸಹ ಇದುವರೆಗೂ ಯಾವುದೇ ರೀತಿಯ ಜಿಲ್ಲಾಧಿಕಾರಿಗಳ ಪತ್ರಕ್ಕೆ ವರದಿಯನ್ನು ನೀಡಲು ಮೀನಾಮೇಷ ಎಣಿಸುತ್ತಿರುವುದು ಎಲ್ಲೊ ಒಂದು ಕಡೆ ಪ್ರಥಮ ದರ್ಜೆ ಸಹಾಯಕರನ್ನು ಉಳಿಸಲು ಪ್ರಯತ್ನಿಸುತ್ತಿರುವುದು ಮಲ್ನೋಟಕ್ಕೆ ಕಂಡು ಬಂದಿರುವುದರಿAದ ಸಮಾಜ ಕಲ್ಯಾಣ ಉಪನಿರ್ದೇಶಕರು, ಸರ್ಕಾರದ ಸುತ್ತೋಲೆಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ.ಆದ್ದರಿAದ ಇಂತಹ ನಿರ್ಲಕ್ಷ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಉಪನಿರ್ದೇಶಕರಾದ ಚಿದಾನಂದಪ್ಪ ಇವರ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಬೇಕೆಂದು ಹಾಗೂ ಪ್ರಥಮ ದರ್ಜೆ ಸಹಾಯಕರನ್ನು ನಿಯೋಜನೆ ರದ್ದು ಮಾಡಿ ಮೂಲ ಸ್ಥಳಕ್ಕೆ ವರ್ಗಾವಣೆ ಮಾಡಿ ಈ ಅರ್ಜಿಗೆ ಪ್ರತ್ರಿಕೆಯ ನೀಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ವೆಂಕಟೇಶ, ನಿತ್ಯಾನಂದ, ತಿರುಮಲ ಮತ್ತಿತರರು ಇದ್ದರು.