ಅಥಣಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮತ್ತು ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು .ಕೃಷ್ಣಾ ನದಿಯ ದಡದಲ್ಲಿ ಇರುವ ಪ್ರವಾಹಬಾದಿತ ಗ್ರಾಮಗಳನ್ನು ಈಗಾಗಲೇ ತಾಲುಕ ಆಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಸಂತ್ರಸ್ತರು ಇರತಕ್ಕಂತ ಕಾಳಜಿ ಕೇಂದ್ರಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷಣ ಸವದಿ ಅವರ ಸುಪುತ್ರ ಚಿದಾನಂದ ಸವದಿ ಹಾಗೂ ಅವರ ಸಂಗಡಿಗರು ಅಥಣಿ ಪಟ್ಟಣದ ಪ್ರವಾಹಬಾದಿತ ಗ್ರಾಮಗಳನ್ನು ತಲುಪಿ ನಿರಾಶ್ರಿತರಿಗೆ ದವಸಧಾನ್ಯಗಳ ಕಿಟ್ಟಗಳನ್ನು ಸತ್ಯ ಸಂಗಮ ಗ್ರಾಮ ವಿಕಾಸ್ ಪ್ರತಿಷ್ಠಾನ ವತಿಯಿಂದ ವಿತರಿಸಿದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡ ಶಿವು ಗುಡ್ಡಾಪುರ ಮಾತನಾಡಿ ಮಾಜಿ ಡಿಸಿಎಂ. ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ಸೂಚನೆ ಹಾಗೂ ಅವರ ಮಾರ್ಗದರ್ಶನದ ಮೇರೆಗೆ ಅವರ ಹಿರಿಯ ಪುತ್ರ ಚಿದಾನಂದ ಸವದಿ ಅವರು ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಪ್ರವಾಹದಲ್ಲಿ ಬಾಧಿತ ಗ್ರಾಮಗಳ ಜನರು ಹಾಗೂ ಜಾನವಾರಿಗಳಿಗೆ ಕಾಳಜಿ ಕೇಂದ್ರಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಈಗಾಗಲೆ ಶಾಸಕರು ಎಲ್ಲ ಪ್ರವಾಹ ಪೀಡಿತ ಸಂತ್ರಸ್ತರಿಗೆ ಭೆಟ್ಟಿಯಾಗಿ ಅವರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಲಕ್ಷ್ಮಣ ಸವದಿ ಅವರು ಇಡಿ ಮತದಾರರನ್ನು ತಮ್ಮ ಕುಟುಂಬದವರಂತೆ ನೋಡಿ ಕೊಳ್ಳುವದು ಅವರ ಸ್ವಭಾವ ಪ್ರವಾಹದಲ್ಲಿ ಬಾಧಿತರು ಕೂಡ ಸ್ವಂತ ಕುಟುಂಬದ ಸದಸ್ಯರೇ ಅವರಿಗೆ ಯಾವುದೇ ಕಾರಣಕ್ಕೂ ತೊಂದರೆ ಯಾಗದಬಾರದು ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಅವರ ತಂದೆ ತಾಯಿಯ ಹೆಸರಿನಲ್ಲಿ ಇರುವ ಸತ್ಯ ಸಂಗಮ ಗ್ರಾಮ ವಿಕಾಸ್ ಪ್ರತಿಷ್ಠಾನ ವತಿಯಿಂದ ನಿರಾಶ್ರಿತರಿಗೆ ಆಹಾರ ಕಿಟ್ಟಗಳನ್ನು ಪೂರೈಸುವ ಮೂಲಕ ಪ್ರವಾಹ ಬಾಧಿತರಿಗೆ ಆಸರೆ ಯಾಗಿದ್ದಾರೆ ಎನ್ನಬಹುದು.