“ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅಪ್ರತಿಮ ಶೌರ್ಯ ಮತ್ತು ಬಲಿದಾನದ ಅವಿಸ್ಮರಣಿಯ: ಚಿದಾನಂದ ಸವದಿ

Hasiru Kranti
“ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅಪ್ರತಿಮ ಶೌರ್ಯ ಮತ್ತು ಬಲಿದಾನದ ಅವಿಸ್ಮರಣಿಯ: ಚಿದಾನಂದ ಸವದಿ
Oplus_131072
WhatsApp Group Join Now
Telegram Group Join Now

ಅಥಣಿ: ಸಂಗೊಳ್ಳಿ ರಾಯಣ್ಣ ಉತ್ಸವವು ಸಂದರ್ಭದಲ್ಲಿ ಮಾತ್ರವಲ್ಲ, ರಾಯಣ್ಣನ ಧೈರ್ಯ, ಸ್ವಾತಂತ್ರ‍್ಯಕ್ಕಾಗಿ ಮಾಡಿದ ಯೋಧನ ಬಲಿದಾನದ ಸ್ಮರಣಾರ್ಥ ಕೂಡ ಆಗಿದೆ. ಉತ್ಸವ ಜ್ಯೋತಿ ಇದು ಕೇವಲ ದೀಪ ಬೆಳಕು ಮಾತ್ರವಲ್ಲ, ಅದು ಯುವಜನ, ಗ್ರಾಮೀಣ ಸಮುದಾಯ ಹಾಗೂ ಕನ್ನಡಿಗರ ಹೃದಯದಲ್ಲಿ ರಾಯಣ್ಣನ ಹೋರಾಟದ ಬೆಳಕಾಗಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಕರೆ ನೀಡಿದರು.
ಅಥಣಿ ಪಟ್ಟಣದ ಸಂಗೋಳ್ಳಿ ರಾಯಣ್ನ ವೃತ್ತದ ಬಳಿ ಆಗಮಿಸಿದ ‘ಸಂಗೊಳ್ಳಿ ರಾಯಣ್ಣ ಉತ್ಸವ ಜ್ಯೋತಿ’ಯನ್ನು ತಾಲೂಕು ಆಡಳಿತ ದ ವತಿಯಿಂದ ಬರಮಾಡಿಕೊಂಡು, ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ‍್ಯದ ಅನವರತ ಹೋರಾಟಗಾರ, ಕಿತ್ತೂರು ರಾಣಿ ಚೆನ್ನಮ್ಮನ ಆಧ್ಯಕ್ಷತೆಯಲ್ಲಿ ಬ್ರಿಟೀಶರ ವಿರುದ್ಧ ಹೋರಾಟ ಮಾಡಿದ ಧೀರ ಯೋಧ. ತನ್ನ ದೇಶಭಕ್ತಿಗೆ ಜೀವನಪರ್ಯಂತ ನೀಡಿದ ಅವರ ಸಾಹಸ ಇಂದಿಗೂ ಕನ್ನಡಿಗರ ಮನದಾಳದಲ್ಲಿ ಜೀವಂತವಾಗಿದೆ ಎಂದರು.
ಈ ವೇಳೆ ಮಾತನಾಡಿದ ಅಥಣಿ ತಾಲೂಕು ತಹಶೀಲ್ದಾರ್ ಸಿದ್ರಾಯ ಬೋಸಗಿ ಇಂದು ನಮ್ಮ ಅಥಣಿ ತಾಲ್ಲೂಕಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೀರ ಜ್ಯೋತಿಯು ಆಗಮಿಸಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ರಾಯಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಈ ನಾಡಿನ ಸ್ವಾಭಿಮಾನ ಮತ್ತು ದೇಶಪ್ರೇಮದ ಸಂಕೇತವಾಗಿದ್ದಾರೆ ಎಂದು ಹೇಳಿದರು.
ಅಥಣಿ ಪಟ್ಟಣಕ್ಕೆ ಆಗಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿಯ ರಥಕ್ಕೆ ಗಣ್ಯಮಾನ್ಯರಿಂದ ಪೂಜಿ ಸಲ್ಲಿಸಿದ ನಂತರ ವಿವಿಧ ವಾದ್ಯ ಮೇಳಗಳೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶಿವಯೋಗಿ ವೃತ್ತದ ವರೆಗೆ ಮೆರವಣಿಗೆಯ ಮೂಲಕ ರಾಯಬಾಗ ತಾಲೂಕಿಗೆ ಬಿಳ್ಕೊಡಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ತಹಸೀಲ್ದಾರ ಸಿದ್ರಾಯ ಬೋಸಗಿ, ಶಿಕ್ಷಣ ಸಂಯೋಜಕ ಎಸ್ ಎಸ್ ಗಸ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ, ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ, ಜಗನ್ನಾಥ ಬಾಮನೆ, ಉದಯ ಮಾಕಾಣಿ, ಶಬ್ಬೀರ ಸಾತಬಚ್ಚಿ, ವಿಲಾಸ ಕುಲಕರ್ಣಿ, ಅನಿಲ್ ಒಡೆಯರ, ಸುಕುಮಾರ ಮಾದರ, ಎಸ್ ಎಸ್ ಹೂಟಿ, ಸುರೇಶ್ ವಾಘಮೋರೆ, ಬೀರಪ್ಪ ಯಕ್ಕಂಚಿ, ಕಲ್ಲಪ್ಪ ಮೇತ್ರಿ, ವಿಠಲ ತಟ್ರಿ, ಅಪ್ಪು ಪೂಜಾರಿ, ಕಲ್ಲಪ್ಪ ಲಂಗುಟಿ, ಬೀರಪ್ಪ ಇಚಾರೆ ಸೇರಿದಂತೆ ಅಂಗನವಾಡಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article