ಚಿಯಾ ಸೂಪರ್ ಫುಡ್-ಪರ್ಯಾಯ ಬೆಳೆ

Ravi Talawar
ಚಿಯಾ ಸೂಪರ್ ಫುಡ್-ಪರ್ಯಾಯ ಬೆಳೆ
WhatsApp Group Join Now
Telegram Group Join Now
ನೇಸರಗಿ: ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಚಿಯಾ ಬೆಳೆಯ ಬೇಸಾಯ ತಂತ್ರಜ್ಞಾನಗಳ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೦೮.೧೦.೨೦೨೫ ರಂದು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಚಡಿ ಗ್ರಾಮದ ಪ್ರಗತಿಪರ ರೈತರಾದ ಶ್ರೀ ನಾಗರಾಜ ದೇಸಾಯಿ ನೆರೆವೇರಿಸಿದರು. ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಇವರು ಇವರು ಚಿಯಾ ಒಂದು ಸೂಪರ್ ಫುಡ್ ಬೆಳೆಯಾಗಿದ್ದು, ವಾತಾವರಣ ವೈಪರೀತ್ಯಗೆ ಒಂದು ಪರ್ಯಾಯ ಬೆಳೆಯಾಗಿ ಬೆಳೆಯಬಹುದು ಹಾಗೂ ನೂತನ ಮತ್ತು ಔಷಧೀಯ ಗುಣಗಳನ್ನು ಹೊಂದಿದ ಬೆಳೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಬೆಳೆಸಲು, ಹಿಂಗಾರು ಹಂಗಾಮಿನಲ್ಲಿ ಅಂತರ್ ಬೆಳೆಯಾಗಿ ಬೆಳೆಯಲು ಸಲಹೆ ನೀಡಿದರು.
ಕಾರ್ಯಕ್ರಮದ ಪರಿಚಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಕಾರ್ಯಕ್ರದಲ್ಲಿ ಪಾಲ್ಗೊಂಡ ಎಲ್ಲ ಗಣ್ಯರನ್ನು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ನುಡಿಯಲ್ಲಿ ಚಿಯಾ ಬೆಳೆಯನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ಸಿಫ್‌ಟಿಆರ್‌ಆಯ್, ಮೈಸೂರು ಸಂಸ್ಥೆಯಿಂದ ೨೦೧೪ ರಲ್ಲಿ ಈ ಬೆಳೆಯನ್ನು ಬೆಳೆಯಲು ಮೈಸೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆಸಲು ಪ್ರೋತ್ಸಾಹಿಸಿದ್ದರು.  ಈ ಬೆಳೆಯನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಳೆಯುವ ತಂತ್ರಜ್ಞಾನಗಳನ್ನು ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ರೈತರ ಆದಾಯ ದ್ವಿಗುಣಗೊಳಿಸಲು ಚಿಯಾ ಬೆಳೆಯ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಚಿಯಾ ಬೆಳೆಯ ಬೇಸಾಯ ಕ್ರಮಗಳನ್ನು ಕುರಿತು ಸವಿಸ್ತಾರವಾಗಿ ತಿಳಿಸಿದರು.  ಜಿ. ಬಿ. ವಿಶ್ವನಾಥ ವಿಜ್ಞಾನಿ (ಬೇಸಾಯ ಶಾಸ್ತ್ರ) ಇವರು ಚಿಯಾ ಬೆಳೆಯಲ್ಲಿ ಬಳಸಬಹುದಾದ ರಸಾವರಿ ಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗುಜರಾತನ ವೆನ್ ಇನ್‌ಕಾರ್ಪೋರೆಟೆಡ್ ಕಂಪನಿ ಲಿ. ವ್ಯವಸ್ಥಾಪಕ ನಿರ್ದೇಶಕ ಹಿತೇಶ ಫರೀಖ ಹಾಗೂ ಬೆಳಗಾವಿ ಉದ್ಯಮಿಗಳಾದ ಜೀತೇಂದ್ರ ಪುರೋಹಿತ, ಜೀತೆಂದ್ರ ಗೌರ್ ಇವರು ರೈತರೊಂದಿಗೆ ಚಿಯಾ ಬೆಳೆಯ ಗುಣಧರ್ಮ, ಶ್ರೇಣೀಕರಣ, ಮಾರುಕಟ್ಟೆ ಮತ್ತು ರಫ್ತು ಕುರಿತು ಸುದೀರ್ಘವಾಗಿ ಮುಖಾಮುಖಿ ಚರ್ಚೆ ನಡೆಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಎಸ್. ಎಮ್. ವಾರದ, ಡಾ. ಭಾವಿನಿ ಪಾಟೀಲ ಹಾಗೂ ಡಾ. ಗುರುರಾಜ ಕೌಜಲಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಕೇಂದ್ರದ ವಿಜ್ಞಾನಿ ಜಿ. ಬಿ. ವಿಶ್ವನಾಥ ಇವರು ವಂದಿಸಿದರು.
WhatsApp Group Join Now
Telegram Group Join Now
Share This Article