ಅಥಣಿ: ಬಿಡಿಸಿಸಿ ಬ್ಯಾಂಕಿನ ಸಿಬ್ಬಂದಿ ಗಳಿಂದ ಕಾರ್ಮಿಕ ಅಧ್ಯಕ್ಷ ನಿಂಗಪ್ಪ ಕರೇಣ್ಣವರ ಹೊಸ ವಾಹನ ಖರಿದಿಗೆ ಪ್ರತಿಯೊಬ್ಬರಿಂದ ೧೦ ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು. ಹಣ ಕೊಡದೆ ಇದ್ದದ್ದಕ್ಕೆ ನಮ್ಮ ಮನೆಗೆ ಬಂದು ನಿಮ್ಮನ್ನು ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದೆ ವಿಚಾರವಾಗಿ ಬ್ಯಾಂಕಿನ ನಿರ್ದೇಶಕರಾದ ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಹೋಗಿದ್ದಾಗ ನಿಮ್ಮ ಸಮಸ್ಯೆಯನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗಮನಕ್ಕೆ ತನ್ನಿ ಎಂದು ಹೊರಗೆ ಕಳುಹಿಸಿದ್ದರು. ಆದರೆ ಶಾಸಕ ಹಾಗೂ ಅವರ ಪತ್ರರು ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಅಥಣಿ ಬ್ಯಾಂಕಿನ ಸಿಬ್ಬಂದಿ ಚೇತನಕುಮಾರ ದಳವಾಯಿ ಹೇಳಿದರು
ಅಥಣಿ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅಥಣಿ ಬಿಡಿಸಿಸಿ ಬ್ಯಾಂಕಿನ ಸಿಬ್ಬಂದಿ ಚೇತನ ದಳವಾಯಿ ಮಾತನಾಡಿ ನಿನ್ನೆ ಶಾಸಕರ ಮನೆಯಲ್ಲಿ ನಡೆದಿದೆ ಎನ್ನಲದ ಘಟನೆ ವಯಕ್ತಿಕ ಕಾರಣದಿಂದ ಆಗಿದೆ ಹೊರತು ಶಾಸಕರು ಮತ್ತು ಅವರ ಪುತ್ರರು ಯಾವುದೆ ತರಹದ ಹಲ್ಲೆಯನ್ನು ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ಮಾಡಿಲ್ಲಾ, ಆದರೆ ಹೊರಗೆ ಬಂದ ಅಧ್ಯಕ್ಷ ನಿಂಗಪ್ಪ ಅವರು ಅಲ್ಲಿದ್ದ ದಲಿತ ಮುಖಂಡನಿಗೆ ಅವಾಚ್ಚ ಶಬ್ದಗಳಿಂದ ನಿಂದನೆ ಮಾಡಿದ್ದರಿಂಧ ನೂಕಾಟದಲ್ಲಿ ಅವರ ತೆಲೆಗೆ ಗಾಯವಾಗಿತ್ತು. ಆದರೆ ಮಾದ್ಯಮಗಳ ಮುಂದೆ ಶಾಸಕರು ಹಲ್ಲೆ ಮಾಡಿದ್ದಾಗಿ ನಿಂಗಪ್ಪ ಕರೆಣ್ಣವರ ಹೇಳಿಕೆ ನೀಡಿದ್ದರು. ಶಾಸಕರ ಮನೆಗೆ ಅಧ್ಯಕ್ಷರನ್ನು ಬರಲು ಯಾರು ಹೇಳಿರಲಿಲ್ಲಾ, ಅವರೆ ಬಂದು ಅಲ್ಲಿ ಗಲಾಟೆ ಮಾಡಿಕೊಂಡರು ಎಂದು ಹೇಳಿದರು
ಬಿಡಿಸಿಸಿ ಬ್ಯಾಂಕಿನ ಅಧಿಕಾರಿ ಮಾಯಪ್ಪ ಅಡಲಗಿ ಮಾತನಾಡಿ, ನಿನ್ನೆ ಶಾಸಕರ ಮನೆಯಲ್ಲಿ ನಡೆದಿದೆ ಎನ್ನಲಾಗುವ ಘಟನೆಯಲ್ಲಿ ಶಾಸಕರ ಯಾವುದೆ ಹಸ್ತಕ್ಷೇಪ ಇಲ್ಲ, ಅಧ್ಯಕ್ಷರ ವಾಹನ ಖರಿದಿಗೆ ೧೦ ಸಾವಿರ ಹಣ ನೀಡದೆ ಇದ್ದದ್ದರಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಇದರ ಬಗ್ಗೆ ಈಗಾಗಲೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ ಎಂದು ಹೇಳಿದರು
ಈ ವೇಳೆ ಬಿಡಿಸಿಸಿ ಸಿಬ್ಬಂದಿಗಳಾದ ಮಹೇಶ ಮಾಳಿ, ಶಿವಾನಂದ ಬುರುಡ, ಹಣಮಂತ ಸಂಕ್ರಟ್ಟಿ, ಗೈಬುಸಾ ಮಕಾಂದಾರ, ಸಿದ್ದಾರೂಢ ಗುಮತಾಜ, ಮಹಾದೇವ ಉಳ್ಳಾಗಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು
ಕಾರ್ಮಿಕ ಅಧ್ಯಕ್ಷ ನಿಂಗಪ್ಪ ಕರೇಣ್ಣವರ ಹೊಸ ವಾಹನ ಖರಿದಿಗೆ ಪ್ರತಿಯೊಬ್ಬರಿಂದ ೧೦ ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ : ಚೇತನಕುಮಾರ ದಳವಾಯಿ ಆರೋಪ


