ಬೆಳಗಾವಿ: ಸತೀಶ್ ಸಮೂಹ ಸಂಸ್ಥೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿಗಳಾದ ಶ್ರೀ ಪ್ರದೀಪಕುಮಾರ ಎಂ ಇಂಡಿ ಅವರಿಗೆ 2025ನೇ ಸಾಲಿನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ʻಉದ್ಯಮ ಶ್ರೇಷ್ಠʼ ಪ್ರಶಸ್ತಿಯನ್ನು ದಿ.ಶುಗರ್ ಟೆಕ್ನಾಲಾಜಿಸ್ಟ್ಸಅಸೋಸಿಯೇಶನ್ ಆಫ್‍ಇಂಡಿಯಾ ನೀಡಿ ಗೌರವಿಸಿದೆ.
ಸಕ್ಕರೆ ಉದ್ಯಮದ ಕುರಿತು ವಿಶೇಷ ಅಧ್ಯಯನ, ತಾಂತ್ರಿಕತೆ ಅಭಿವೃದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರ ಏರ್ಪಡಿಸುವ ಮೂಲಕ ಸಕ್ಕರೆ ಉದ್ಯಮಕ್ಕೆಅತ್ಯಮೂಲ್ಯ ಕೊಡುಗೆ ಮತ್ತು ಪ್ರೋತ್ಸಾಹ ನೀಡುತ್ತಿರುವ ದಿ.ಶುಗರ್ ಟೆಕ್ನಾಲಾಜಿಸ್ಟ್ಸಅಸೋಸಿಯೇಶನ್ ಆಫ್‍ಇಂಡಿಯಾ ಸಂಸ್ಥೆಯು ಭಾರತ ಸರ್ಕಾರದಿಂದ ವೈಜ್ಞಾನಿಕ ಮತ್ತುಕೈಗಾರಿಕಾ ಸಂಶೋಧನಾ ಸಂಸ್ಥೆಯ ಮಾನ್ಯತೆ ಪಡೆದಿದೆ. ಇದು 1925 ನೇ ಸಾಲಿನಲ್ಲಿ ಸ್ಥಾಪಿತವಾಗಿದ್ದು, ಈ ವರ್ಷ ಶತಮಾನೊತ್ಸವವನ್ನುಆಚರಿಸುತ್ತಿದೆ. ಸಕ್ಕರೆ ಉದ್ಯಮದ ಅಭಿವೃದ್ದಿಗಾಗಿ ಶ್ರಮಿಸಿದ ಹಾಗೂ ಸಕ್ಕರೆ ಉದ್ಯಮದಲ್ಲಿ ಮಹತ್ವಪೂರ್ಣಕಾರ್ಯ ನಿರ್ವಹಿಸಿದ ಶ್ರೇಷ್ಠ ವ್ಯಕ್ತಿಗಳಿಗೆ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ.
ಸತೀಶ್ ಶುಗರ್ಸ್ ಲಿ. ಮತ್ತು ಬೆಳಗಾಂ ಶುಗರ್ಸ್ ಪ್ರೈ.ಲಿಕಾರ್ಖಾನೆಗಳ ಸಕ್ಕರೆಘಟಕ, ಸಹ-ವಿದ್ಯುತ್, ಎಥೆನಾಲ್,ಕಂಪ್ರೇಸ್ಡ್ ಬಯೋಗ್ಯಾಸ್(ಸಿ.ಬಿ.ಜಿ)ಮತ್ತುಸ್ಟೀಲ್ ಟಿ.ಎಮ್.ಟಿ ಬಾರ್ ಉತ್ಪಾದನಾ ಘಟಕಗಳ ಉತ್ತಮ ಕಾರ್ಯನಿರ್ವಹಣೆ, ಪೂರ್ಣ ಪ್ರಮಾಣದ ಸಾಮಥ್ರ್ಯದ ಬಳಕೆ, ದಕ್ಷತೆ ಮತ್ತುಕಾರ್ಯಕ್ಷಮತೆಯನ್ನು ಪರಿಗಣಿಸಿ ಹೊಸ ದೆಹಲಿಯ ದಿ. ಶುಗರ್ ಟೆಕ್ನೋಲಾಜಿಸ್ಟ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯು ದಿನಾಂಕ: 25.07.2025ರಂದು ಹೊಸ ದೆಹಲಿಯಲ್ಲಿ ನಡೆದ ತಮ್ಮ ಸಂಸ್ಥೆಯ 83ನೇ ವಾರ್ಷಿಕ ಸಮಾವೇಶದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಸೋಸಿಯೇಶನ್ ಅಧ್ಯಕ್ಷರಾದ ಸಂಜಯ ಅವಸ್ತಿ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಅಧ್ಯಕ್ಷ ಹರ್ಷವರ್ಧನ ಪಾಟೀಲ ಸೇರದಂತೆ ವಿವಿಧ ಗಣ್ಯರು ಸತೀಶ್ ಸಮೂಹ ಸಂಸ್ಥೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿಗಳಾದ ಶ್ರೀ.ಪ್ರದೀಪಕುಮಾರ ಎಂ.ಇಂಡಿ ಅವರಿಗೆ ʻಉದ್ಯಮ ಶ್ರೇಷ್ಠʼ ಪ್ರಶಸ್ತಿಯನ್ನುನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ರವರಾದ ಪ್ರದೀಪಕುಮಾರ ಇಂಡಿ ಅವರು ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಏಳ್ಗೆಯನ್ನು ಸಾಧಿಸುತ್ತಿದ್ದು, ಆಡಳಿತ ಮಂಡಳಿಯ ನಿರ್ಣಯ, ರೈತ ಭಾಂದವರ ಸಹಕಾರ, ಅಧಿಕಾರಿಗಳ ಮತ್ತುಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದಾಗಿಈ ಪ್ರಶಸ್ತಿ ದೊರಕಿದೆ ಎಂದರು.
ಈ ಸಾಧನೆಯಲ್ಲಿ ಕಾರ್ಖಾನೆಯ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಶ್ರದ್ದೆ ಮತ್ತು ಶ್ರಮವು ಶ್ಲಾಘನೀಯವಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ, ಸಂಸ್ಥೆಯಎಲ್ಲ ವಿಭಾಗಗಳ ಮುಖ್ಯಸ್ಥರಿಗೂ, ಆಧಿಕಾರಿ ವರ್ಗದವರಿಗೂ, ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಯ ಕಾರ್ಮಿಕ ವರ್ಗದವರಿಗೂ ಮತ್ತು ನಮ್ಮೆಲ್ಲ ರೈತ ಭಾಂದವರಿಗೂ, ಹಣಕಾಸು ಸಂಸ್ಥೆಗಳಿಗೂ, ಗ್ರಾಹಕರಿಗೂ ಮತ್ತುಕಾರ್ಖಾನೆಯ ಎಲ್ಲ ಶ್ರೇಯೋಭಿಲಾಷಿಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲಿಯೂ ಸಹ ನಮ್ಮೆಲ್ಲರೈತ ಭಾಂದವರು, ಕಾರ್ಮಿಕ ವ ಸಿಬ್ಬಂದಿ ವರ್ಗದವರು ಹಾಗೂ ಕಬ್ಬುತೋಡ್ನಿ ಮತ್ತು ಸಾರಿಗೆ ಮಕ್ತೆದಾರರು ಇನ್ನೂ ಹೆಚ್ಚಿನ ಸಹಕಾರವನ್ನು ನೀಡಿ ಸಂಸ್ಥೆಯ ಪ್ರಗತಿಗೆ ಶ್ರಮಿಸಲು ವಿನಂತಿಸಿದರು.