ಆಂಗ್ಲರ ವಿರುಧ್ಧ ಸ್ವಾತಂತ್ರ್ಯಕ್ಕಾಗಿ ಕಹಳೆ ಊದಿದ ಮೊದಲ ಮಹಿಳೆ ಚೆನ್ನಮ್ಮಾಜಿ!

Ravi Talawar
ಆಂಗ್ಲರ ವಿರುಧ್ಧ ಸ್ವಾತಂತ್ರ್ಯಕ್ಕಾಗಿ ಕಹಳೆ ಊದಿದ ಮೊದಲ ಮಹಿಳೆ ಚೆನ್ನಮ್ಮಾಜಿ!
WhatsApp Group Join Now
Telegram Group Join Now

ಕನ್ನಡ ನಾಡಿನ ಇತಿಹಾಸದ ಪುಟಗಳುದ್ದಕ್ಕೂ ನಾವು ಕಾನುವುದು ಶೌರ್ಯ, ತ್ಯಾಗ, ಹೋರಾಟ ಮತ್ತು ಸಹನಶೀಲತೆ. ಕನ್ನಡ ನಾಡು ಪುಣ್ಯ ಪುರುಷರು ಮತ್ತು ವೀರರು ವೀರಾಜಿಸಿದ ಪುಣ್ಯ ಭೂಮಿ. ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಶಿಲ್ಪ ಕಲೆಗಳ ವೈಭವದ ಬೀಡಾಗಿದೆ. ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿ ವಿಶಾಲ ದೃಷ್ಟಿಕೋನ ಶಾಂತಿಯುತವಾದ ಸಹಜೀವನದ ಆದರ್ಶವನ್ನು ನನಸಾಗಿಸಿದ ಪುಣ್ಯಭೂಮಿಯಾಗಿದೆ. ಕಾಲ ಚಕ್ರಕ್ಕೆ ಸಿಲುಕಿ ಆಂಗ್ಲರ ದಾಶ್ಯಕ್ಕೆ ಕಟ್ಟುಬಿದ್ದ ನಂತರ ಅವರ ವಿರುದ್ಧ ಮೊದಲು ಸಿಡಿದೆದ್ದವರು ಕನ್ನಡಿಗರೇ, ಅದರಲ್ಲೂ ಮೊಟ್ಟ ಮೊದಲು ಬೆಂಕಿಯಂತೆ ಸಿಡಿದೆದದ್ದು ನಾನು ಜೀವಂತವಿರುವವರೆಗೂ ನನ್ನ ನಾಡಿನ ಹಿಡಿ ಮಣ್ಣು ಪರಕೀಯರ ಪಾಲಾಗಲು ಬಿಡುವುದಿಲ್ಲ ಎಂದು ಫನ ತೊಟ್ಟು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಕಿತ್ತೂರು ಚನ್ನಮ್ಮಾಜೀಯನ್ನು ನಾವೆಂದೂ ಮರೆಯುವಂತಿಲ್ಲ.

ಹೌದು ದೇಶದ ಸ್ವಾತಂತ್ರ್ಯ, ಸಂಸ್ಕೃತಿ ಉಳಿವಿಗಾಗಿ ಅನೇಕ ಮಹಿಳಿಯರು ತಮ್ಮ ಜೀವನವನ್ನೇ ಮೂಡುಪಾಗಿಟ್ಟಿದ್ದಾರೆ ಅಂತಹ ದಿಟ್ಟ ಮಹಿಳೆಯರನ್ನು ನೆನೆಯುವುದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಅಂತಹ ಸಾಲಿಗೆ ಬರುವ ಮಹಿಳೆಯರು ಕೆಳದಿಯ ಚೆನ್ನಮ್ಮಾಜಿ, ಬೆಳವಡಿಯ ಮಲ್ಲಮ್ಮಾಜಿ, ಒನಕೆಯ ಓಬವ್ವ, ಕಿತ್ತೂರು ರುದ್ರಸರ್ಜನ ಪತ್ನಿ ಮಲ್ಲಮ್ಮ, ರಾಣಿ ಲಕ್ಷ್ಮೀಬಾಯಿ, ಉಲ್ಲಾಳದ ರಾಣಿ ಅಬ್ಬಕ್ಕದೇವಿ, ಸೇರಿದಂತೆ ಇನ್ನು ಅನೇಕರು ಸತ್ಯ ಸೇವೆ, ಪ್ರೇಮ, ತ್ಯಾಗ, ಅಹಿಂಸೆ, ಭಕ್ತಿ, ಹಾಗು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಬಲಿದಾನ ಮಾಡುವ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದ್ದಾರೆ. ಇಂತಹ ಅರ್ಗಸ್ಥಾನದ ಸಾಲಿಗೆ ಸೇರಿದವರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಜಿ ಸಹ ಓರ್ವಳು.

ದೇಶದ ಭವ್ಯ ಪರಂಪರೆಯಲ್ಲಿ ಕಿತ್ತೂರು ಸಹ ಗುರುತಿಸಿಕೊಂಡಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಾನತೆಯ ಪ್ರತಿಬಿಂಬ ಕಿತ್ತೂರು. ೧೮೨೪ ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಆಂಗ್ಲರ ವಿರುಧ್ಧ ದೇಶದ ಸ್ವಾತಂತ್ರ್ಯಕ್ಕೆ ಪ್ರಪ್ರಥಮವಾಗಿ ನಾಂಧಿ ಬರೆದ ಏಕೈಕ ದಿಟ್ಟ ಮಹಿಳೆ ಮಾತೆ ಚೆನ್ನಮ್ಮಾಜಿ. ಸತಿಸಹಗಮನ ಪದ್ಧತಿ ಕಾಲದಲ್ಲಿ ಪತಿ ಕಳೆದುಕೊಂಡ ಚೆನ್ನಮ್ಮಾಜಿ ವಾತ್ಸಲ್ಯ, ಮಮಕಾರ, ಧೈರ್ಯ, ಸಾಹಸ, ಪ್ರೀತಿ ಮೂಲಕ ಕಾಕತಿಯ ಮಗಳು ಕಿತ್ತೂರಿನ ಸೊಸೆ ಧೈರ್ಯದ ಪ್ರತಿರೂಪವಾಗಿದ್ದಾಳೆ. ಕಿತ್ತೂರಿನ ಜನತೆ ತಮ್ಮ ಮಕ್ಕಳು ಅಣ್ಣತಮ್ಮಂದಿರು, ತಂದೆ ತಾಯಿ ಎಂದು ಚೆನ್ನಮ್ಮಾಜಿ ಅವರನ್ನು ಅಪ್ಪಿಕೊಂಡು ಕಿತ್ತೂರಿನ ಜನತೆಯಲ್ಲಿ ಪ್ರತಿ ಕ್ಷಣ ಸ್ವಾಭಿಮಾನದ ಕಿಚ್ಚನ್ನು ಹಚ್ಚುತ್ತ ಇನ್ನೊಬ್ಬರ ಕಪಿಮುಷ್ಠಿಯಲ್ಲಿ ಬಾಳುವೆ ಮಾಡುವುದು ಇದ್ದು ಸತ್ತಂತೆ ಎಂದು ಹೇಳುತ್ತ ಇರುವಷ್ಟು ದಿನ ಸ್ವಾಭಿಮಾನದ ಬದುಕು ಸಾಗಿಸೋಣ ಎಂದು ಕಿತ್ತೂರಿನ ಜನತೆಯಲ್ಲಿ ಆತ್ಮವಿಶ್ವಾಸ ತುಂಬಿ ದೇಶದ ಸ್ವಾತಂತ್ರ್ಯಕ್ಕಾಗಿ ಮೊಟ್ಟ ಮೊದಲು ವಿರುದ್ಧ ಕಹಳೆ ಊದಿದ ಮೊದಲ ಮಹಿಳೆ.

ಸಾಗರ ಪ್ರಾತಂದ ಸಹೋದರರಾದ ಹಿರೇಮಲ್ಲಶೆಟ್ಟಿ ಹಾಗೂ ಚಿಕ್ಕಮಲ್ಲಶೆಟ್ಟಿ ಕಿತ್ತೂರು ಸಂಸ್ಥಾನದ ಸ್ಥಾಪಕರು. ೧೨ ಜನ ದಕ್ಷ ಅರಸರು ಕಿತ್ತೂರು ಸಂಸ್ಥಾನವನ್ನು ಕ್ರಿ.ಶ. ೧೫೮೫ ರಿಂದ ೧೮೨೪ ರ ವರೆಗೆ ೨೩೯ ವರ್ಷ ಅತ್ಯಂತ ಸಮರ್ಥವಾಗಿ ವೈಭವದಿಂದ ಆಳಿದ್ದಾರೆ. ಈ ೧೨ ಜನ ದಕ್ಷ ಅರಸರಲ್ಲಿ ಮಲ್ಲಸರ್ಜ ದೊರೆ ಸರಿಗಟ್ಟುವವರಿರಲಿಲ್ಲ ಈ ದೊರೆಯ ಮೊದಲನೆ ಪತ್ನಿ ರುದ್ರಮ್ಮಾ. ಎರಡನೇ ಪತ್ನಿ ರಾಣಿ ಚೆನ್ನಮ್ಮಾ. ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಕಾಕತಿಯ ಪದ್ಮಾವತಿ ಹಾಗೂ ಧೂಳಪ್ಪ ದೇಸಾಯಿ ಉದರದಲ್ಲಿ ಕ್ರಿ.ಶ. ೧೭೭೮ ರಲ್ಲಿ ಜನಿಸಿದಳು. ಚೆನ್ನಮ್ಮಾಳಿಗೆ ದೇಸಾಯಿಯವರು ಚಿಕ್ಕ ವಯಸ್ಸಿನಿಂದಲ್ಲೇ ಇಬ್ಬರು ಗುರುಗಳನ್ನು ನೇಮಕ ಮಾಡಿ ಶಸ್ತ್ರಗಳ ಬಳಿಕೆ, ಶಿವ ಶರಣರ, ವೀರರ, ಜೀವನ ಶೈಲಿ ಪಾಠ ಹೋಳುವುದರೊಂದಿಗೆ ಸೈನಿಕ ತರಬೇತಿಯೊಂದಿಗೆ ಸಂಗೀತ, ಸಾಹಿತ್ಯ ಇತಿಹಾಸ ರಾಜನೀತಿ ಕಲಿಸುವ ವ್ಯವಸ್ಥೆ ಮಾಡಿದ್ದರು. ಕನ್ನಡ, ಮರಾಠಿ, ಉರ್ದು, ಕೊಂಕಣಿ, ಇಂಗ್ಲಿಷ್, ಫೋರ್ಚುಗೀಸ್ ಭಾಷೆ ಚೆನ್ನಮ್ಮಾ ತಿಳಿದಿದ್ದಳು ಹಾಗೂ ಕತ್ತಿವರಸೆ, ಬಿಲ್ವಿದ್ಯೆ, ಕುದುರೆ ಸವಾರಿ, ಈಜು ಬೇಟೆಯಾಡುವುದರಲ್ಲಿ ಪ್ರಭುಧ್ವತೆ ಪಡೆದಿದ್ದಳು. ಚೆನ್ನಮ್ಮಾ ಹುಲಿ ಬೇಟೆಯಾಡುವ ವೇಳೆಯೇ ದೊರೆ ಮಲಸರ್ಜ ದೊರೆಗೆ ಬೇಟಿಯಾದದ್ದೂ ನಂತರ ವಿವಾಹವಾಹಿತು. ವಿವಾಹದ ನಂತರ ರುದ್ರಮ್ಮಾ ಮತ್ತು ಚೆನ್ನಮ್ಮಾ ಅಕ್ಕತಂಗಿಯರಂತಿದ್ದು ಕಿತ್ತೂರು ರಾಜ್ಯದ ಆಗುಹೋಗು, ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ದೊರೆ ಮಲ್ಲಸರ್ಜ ದೇಸಾಯಿಗೆ ಹೇಗಲಿಗೆ ಹೇಗಲುಕೊಟ್ಟು ನಿಂತರು.

ಚೆನ್ನಮ್ಮಾಳಿಗೆ ಮೊದಲು ಗಂಡು ಮಗುವಾಯಿತು ಅವನಿಗೆ ಶಿವಬಸವ ಸರ್ಜ ಎಂದು ನಾಮಕರಣ ಮಾಡಿ ಪ್ರೀತಿಯಿಂದ ಬಾಳಾಸಾಹೇಬ ಎಂದು ಕರೆಯಲಾಗುತ್ತಿತ್ತು. ಕೆಲ ವರ್ಷಗಳ ಬಳಿಕ ಮೊದಲ ಪತ್ನಿ ರುದ್ರಮ್ಮಳಿಗೂ ಗಂಡು ಮಗುವಾಯಿತು ಅವನಿಗೆ ಶಿವಲಿಂಗ ರುದ್ರಸರ್ಜನೆಂದೂ ಪ್ರೀತಿಯಿಂದ ಬಾಪೂಸಾಹೇಬ ಎಂದೂ ಕರೆದರು. ರುದ್ರಮ್ಮಳಿಗೆ ಕೆಲ ವರ್ಷಗಳ ಬಳಿಕ ವೀರಪ್ಪ ಸರ್ಜ ಎಂಬ ಮತ್ತೊಬ್ಬ ಮಗ ಜನಿಸಿದನು. ಸೊಲ್ಲಾಪೂರ ಕನ್ಯೆ ಜಾನಕಿಯೊಂದಿಗೆ ಬಾಳಾಸಾಹೇಬ ಹಾಗು ಚಂದ್ರಗುತ್ತಿ ರಾಜನ ಮಗಳಾದ ವೀರಮ್ಮಳೊಂದಿಗೆ ಬಾಪೂಸಾಹೇಬನ ವಿವಾಹವಾಯಿತು.

ಟಿಪ್ಪು ನಂತರ ೨ ನೇ ಬಾಜೀರಾಯ ಮಲ್ಲಸರ್ಜ ದೊರೆಯನ್ನು ಮೋಸದಿಂದ ಹಿಡಿದು ೦೩ ವರ್ಷ ಸೆರೆಯಲ್ಲಿ ಇಡುತ್ತಾನೆ. ಚೆನ್ನಮ್ಮಾ ರಾಜ್ಯವನ್ನು ಆಳುತ್ತಾಳೆ ಅಕ್ಕ ರುದ್ರಮ್ಮಳೂ ತಂಗಿಯ ಕೈ ಜೋಡಿಸುತ್ತಾಳೆ. ದೊರೆ ಸೆರೆಯಲ್ಲಿ ಇದ್ದಾಗ ಅನಾರೋಗ್ಯ ಫೀಡಿತನಾದಾಗ ೧೮೧೬ ರಲ್ಲಿ ದೊರೆಯನ್ನು ಬಿಡುಗಡೆಗೊಳಿಸುತ್ತಾರೆ. ದೊರೆ ಕಿತ್ತೂರು ತಲುಪಿ ಒಂದೆರಡು ದಿನದಲ್ಲಿ ಕೊನೆಯುಸಿರೆಳೆಯುತ್ತಾನೆ.
ಅಧಿಕಾರಕ್ಕೆ ಆಶೆ ಪಡದ ಚೆನ್ನಮ್ಮಾ: ಮಲಸರ್ಜ ದೇಸಾಯಿ ನಿಧನದ ನಂತರ ಚೆನ್ನಮ್ಮ ತನ್ನ ಮಗ ಶಿವಬಸವ ಸರ್ಜನಿಗೆ ಪಟ್ಟಗಟ್ಬಹುದಾಗಿತ್ತು ಆದರೆ ಚೆನ್ನಮ್ಮ ಅಧಿಕಾರಕ್ಕೆ ಆಶೆಪಡದೆ, ಅಕ್ಕ ರುದ್ರಮ್ಮಾಳ ಮಗ ಶಿವಲಿಂಗರುದ್ರಸರ್ಜನನ್ನು ರಾಜನನ್ನಾಗಿ ಮಾಡಿ ತನ್ನ ಮಗನನ್ನು ರಾಜನ ಅಂಗರಕ್ಷಕಕನನ್ನಾಗಿ ಮಾಡಿದಳು. ಚೆನ್ನಮ್ಮಾಳ ಶೂರ ಧೀರ ಸಾಹಾಸಿ ಮಗ ತಾಯಿಯ ಆಜ್ಞೆಯತೆ ರಾಜನ ಅಂಗ ರಕ್ಷಕನಾಗಿ ಕಾರ್ಯ ನಿರ್ವಹಿಸಿದನು.

ಚೆನ್ನಮ್ಮಾಜಿಯ ಮಾರ್ಗದರ್ಶನದಲ್ಲಿ ಶಿವಲಿಂಗರುದ್ರಸರ್ಜ ಕ್ರಿ.ಶ ೧೮೧೬ ರಿಂದ ೧೮೨೪ ರವರೆಗೆ ರಾಜ್ಯಭಾರ ಮಾಡಿದನು. ರಾಜ್ಯ ಆಳುವಾಗ ಕ್ಷಯರೋಗಕ್ಕೆ ಒಳಗಾಗಿದರಿಂದ ಸಂಸ್ಥಾನದ ಹಿರಿಯರ ಸಲಹೆಯಂತೆ ಮಾಸ್ತಮರಡಿ ಗೌಡರ ಮಗನಾದ ಶಿವಲಿಂಗಪ್ಪನ್ನು ದತ್ತಕ ಮಾಡಿಕೊಂಡು ಆತನನ್ನು ಸವಾಯಿ ಮಲ್ಲಸರ್ಜನೆಂದು ಕರೆದರು. ಇತ ಇನ್ನು ಚಿಕ್ಕವನ್ನಾಗಿದರಿಂದ ಅವನ ಹೆಸರಿನಲ್ಲಿಯೇ ತಾನೇ ರಾಜ್ಯಭಾರ ನಡೆಸಿದಳು. ದತ್ತಕವಾದ ಬಳಿಕ ರಾಜ್ಯದಲ್ಲಿ ಎರಡು ಪಕ್ಷಗಳು ಆದಾವು. ಒಂದು ಗುಂಪಿನಲ್ಲಿ ಸರದಾರ ಗುರುಸಿದ್ಧಪ್ಪ ,ವೆಂಕಣ್ಣ, ಅಪ್ಪಣ್ಣ ದೇಶಗಾಂವ, ಸಂಗೊಳ್ಳಿ ರಾಯಣ್ಣ, ಬಿಚ್ಚಗತ್ತಿ ಚೆನ್ನಬಸಪ್ಪ, ಗಜವೀರ ಒಂದು ಗುಂಪಾದರೇ, ಇನ್ನೊಂದರಲ್ಲಿ ಸರದಾರ ಮಲ್ಲಪ್ಪಶೆಟ್ಟಿ, ಕನ್ನೂರ ವೀರಸಂಗಪ್ಪ, ಹುರಕಡ್ಲಿ ಮಲ್ಲಪ್ಪ ಸೇರಿದಂತೆ ಮತ್ತೊಂದು ಗುಂಪಾಯಿತು. ಈ ಸಂದರ್ಭದಲ್ಲಿಯೇ ಮಲ್ಲಸರ್ಜ ದೊರೆ ಮೊದಲ ಪತ್ನಿ ರುದ್ರಮ್ಮ ಪತಿ, ಮಕ್ಕಳ ಮರಣದಿಂದ ಮನನೊಂದು ಕೊನೆ ದಿನಗಳನ್ನು ತಲ್ಲೂರಿನಲ್ಲಿ ಕಳೆದಳು. ಅಲ್ಲಿಂದ ಮರಳಿ ಕಿತ್ತೂರಿಗೆ ಬರುವಾಗ ಸಂಗೊಳ್ಳಿಯಲ್ಲಿ ಮರಣ ಹೊಂದಿದಳು ಇವಳ ಸಮಾಧಿ ಸಂಗೊಳ್ಳಿಯಲ್ಲಿಯೇ ಇದೆ.

ಕಿತ್ತೂರು ಅರಮನೆಯಲ್ಲಿ ಅಪಾರ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಬ್ರಿಟಿಷ್ ಅಧಿಕಾರಿ ಥ್ಯಾಕರೆಯು ದತ್ತಕದ ನೆಪಮಾಡಿಕೊಂಡು ಕಿತ್ತೂರನ್ನು ಕೈವಶ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಹಾಗೂ ಯೋಜನೆಗಳನ್ನು ಕೈಗೊಂಡರು ಚೆನ್ನಮ್ಮಾಜೀ ರಾಜ್ಯಾಡಳಿತವನ್ನು ಕೈಯಲ್ಲಿ ಹಿಡಿದು ಸೂರ್ಯ ಮುಳುಗದ ಸಾಮಾಜ್ಯವೆಂದು ಬೀಗುತ್ತಿದ್ದ ಬ್ರಿಟಿಷರಿಗೆ ಚೆನ್ನಮ್ಮಾ ಹಾಗೂ ಅವಳ ಬಂಟರು ತಲೆಬಾಗದೆ ಸವಾಲಾದರು.

ಥ್ಯಾಕರೆ ಸೈನ್ಯ ೧೮೨೪ ಅಕ್ಟೋಬರ್ ೨೩ ರಂದು ಕಿತ್ತೂರಿನ ಮೇಲೆ ದಾಳಿ ಮಾಡಲು ಕೋಟೆ ಮುಂದೆ ಬ್ರಟಿಷ್ ಸೈನ್ಯ ಬಂದು ನಿಂತು ಥ್ಯಾಕರೆ ೨೪ ನಿವಿಷದಲ್ಲಿ ಕೋಟೆ ಬಾಗಿಲು ತೆಗೆಯುವಂತೆ ಆದೇಶಿಸಿದನು ಆದರೆ ಕೊನೇ ನಿಮೀಷದಲ್ಲಿ ಕಿತ್ತೂರು ಸೈನಿಕರು ಕೋಟೆ ಬಾಗಿಲು ತೆಗದು ಬ್ರಟಿಷ್ ಸೈನಿಕರ ಮೇಲೆ ಮಿಂಚಿನಂತೆ ಎರಗಿದರು. ಚೆನ್ನಮ್ಮಾಜೀ ಶರಣಾಗುವರೆಂದು ಭಾವಿಸಿದ್ದ ಥ್ಯಾಕರೆ ಕಿತ್ತೂರಿನ ಸೈನಿಕರ ದಾಳಿಯನ್ನು ಕಂಡು ನಡುಗಿದನು. ಚೆನ್ನಮ್ಮಾ ಕೋಟೆ ಮೇಲ್ಭಾಗದಲ್ಲಿ ನಿಂತು ಸೈನಿಕರನ್ನು ಹುರಿದುಂಬಿಸುತ್ತ ಮಾರ್ಗದರ್ಶನ ಮಾಡುತ್ತಿದ್ದಳು. ಥ್ಯಾಕರೆ ಇದನ್ನು ಗಮನಿಸಿ ಚೆನ್ನಮ್ಮಳ ಕಡೆ ಧಾವಿಸಿದನು. ಅಮಟೂರು ಬಾಳಪ್ಪ ಇದನ್ನು ಗಮನಿಸಿ ಥ್ಯಾಕರೆಯ ಮೇಲೆ ಗುಂಡು ಹಾರಿಸಿ ಕೊಂದನು. ಹಬಸಿ ಗಜಬಾ ಥ್ಯಾಕರೇಯ ರುಂಡವನ್ನು ಭಾತಿಗೆ ಸಿಕ್ಕಿಸಿ ಕುಣಿದಾಡಿದನು. ಇದು ಬ್ರಟಿಷ್ರಿಗೆ ಮೊದಲ ಸೋಲಾಗಿತ್ತು. ಬ್ರಿಟಿಷ್ ಅಧೀಕಾರಿಗಳು, ಸೈನಿಕರು, ಅನೇಕ ಹೆಣ್ಣುಮಕ್ಕಳು ಹಾಗೂ ಚಿಕ್ಕಮಕ್ಕಳು ಸೆರೆಸಿಕ್ಕರು. ವೈರಿಯ ಮಕ್ಕಳು ವೈರಿಗಳಲ್ಲ ಎಂದು ತಿಳಿದ ಚೆನ್ನಮ್ಮ ರಾಣಿ ಹೆಣ್ಣು ಮಕ್ಕಳು ಹಾಗು ಚಿಕ್ಕಮಕ್ಕಳನ್ನು ಅರಮನೆಯಲ್ಲಿ ಇಟ್ಟುಕೊಂಡು ರಕ್ಷಿಸಿದಳು. ಉಳಿದವರನ್ನು ಸೆರೆಯಲ್ಲಿಟ್ಟಳು.

ಈ ಸೋಲಿನಿಂದ ಬ್ರಿಟಿಷ್‌ರ ರಕ್ತ ಕುದಿಯತೊಡಗಿತು. ಈ ವೇಳೆ ಮಲ್ಲಪ್ಪಶೆಟ್ಟಿ, ವೆಂಕಟರಾವ್, ವೀರಸಂಗಪ್ಪ ಬ್ರಿಟಿಷ್‌ರಿಗೆ ಸಹಾಯ ಮಾಡಿದರು. ಮಹಾಂತವ್ವ ಗೆಜ್ಜಿ ಎನ್ನುವವಳ ಸಹಾಯದಿಂದ ಮದ್ದು ಗುಂಡು, ತೋಪು ಹಾರದಂತೆ ಮಾಡಿದರು. ಅರಮನೆಯಲ್ಲಿ ಅಡುಗೆ ಮಾಡುವವಳಿಗೆ ಬಂಗಾರ ಕೊಟ್ಟು ಪಾಯಸದಲ್ಲಿ ವಿಷ ಬೆರಸಿ ಅದನ್ನು ಚೆನ್ನಮ್ಮಾಜೀಗೆ ಕುಡಿಸಲು ಒಪ್ಪಿಸದರು. ಈ ವಿಷಯ ಮಲ್ಲಪ್ಪಶೆಟ್ಟಿಯ ಆಪ್ತಳಾದ ಕಲಾವತಿಗೆ ತಿಳಿದು ಅವಳು ಅದನ್ನು ಸದಾಶಿವಶಾಸ್ತ್ರಿಗೆ ತಿಳಿಸಿದಳು. ವಿಷಯ ಚೆನ್ನಮ್ಮಾಜಿಗೆ ತಿಳಿದು, ಚೆನ್ನಮ್ಮಾ ವಿಷ ಹಾಕಿದ ಪಾಯಸವನ್ನು ಮೊದಲು ಮಹಾಂತವ್ವಳಿಗೆ ಕುಡಿಸಿದಳು. ಮಹಾಂತವ್ವ ಸಾಯಿವ ಮುನ್ನ ಈ ಕುತಂತ್ರ ನಡೆಸಲು ಮಲ್ಲಪ್ಪಶೆಟ್ಟಿ, ಮತ್ತು ವೆಂಕಟರಾವ ಕಾರಣರೆಂದು ಹೇಳಿದಳು.

ಮದ್ದು ಕೆಡಿಸಲು ಮತ್ತು ವಿಷ ಹಾಕಲು ಕಾರಣರಾದ ಇಬ್ಬರನ್ನು ಆನೆ ಕಾಲಿಗೆ ಕಟ್ಟಿ ಶಿಕ್ಷಿಸಿದಳು. ಆದರೆ ಕಾಲ ಮಿಂಚಿತ್ತು ೧೮೨೪ ರ ಡಿಸೆಂಬರ್ ೦೩ ರಂದು ಬ್ರಟಿಷ್ ಸೈನ್ಯವು ಮತ್ತೆ ಕಿತ್ತೂರಿನ ಮೇಲೆ ದಾಳಿ ಮಾಡಿತ್ತು ಕಿತ್ತೂರು ಸೈನಿಕರು ಸಾಹಸದಿಂದ ಮುನ್ನುಗ್ಗಿ ಅಸಾಧಾರಣ ಶೌರ್ಯವನ್ನು ಮೆರೆದರು ಸಹ ಬ್ರಟಿಷ್‌ರ ಬಹುದೊಡ್ಡ ಸೈನ್ಯಕ್ಕೆ ಕಿತ್ತೂರು ಸೈನಿಕರು ಬಲಿಯಾಗಿ ವೀರಮರಣವನ್ನಪ್ಪಿದರು. ಡಿಸೆಂಬರ್ ೦೪ ರಂದು ರಾತ್ರಿ ಕಿತ್ತೂರು ಕೋಟೆ ಭೇದಿಸಲ್ಪಟ್ಟಿತು. ಕಿತ್ತೂರು ಆಂಗ್ಲರ ವಶವಾಯಿತು. ಡಿಸೆಂಬರ್ ೦೫ ರಂದು ಕಿತ್ತೂರು ತನ್ನ ಸ್ವಾತಂತ್ರ್ಯ ಕಳೆದುಕೊಂಡು ೨೩೯ ವರ್ಷಗಳ ಭವ್ಯ ಇತಿಹಾಸ ಕೊನೆಗೊಂಡಿತು. ಕಿತ್ತೂರಿಗೆ ಸೋಲಾಗಿ ಚೆನ್ನಮ್ಮಾಜಿಯ ಸೆರೆಯಾದಾಗ ಕಿತ್ತೂರು ನಾಡಿಗೆ ನಾಡೆ ಕಣ್ಣಿರಿಟ್ಟಿತು.

ಯುದ್ಧದಲ್ಲಿ ಸೆರೆಸಿಕ್ಕ ರಾಣಿ ಚೆನ್ನಮ್ಮಳನ್ನು ಆಕೆಯ ಇಬ್ಬರು ಸೊಸೆಯಂದಿರೊಂದಿಗೆ ಬೈಲಹೊಂಗಲದ ಸೆರೆ ಇಟ್ಟರು. ಸೆರೆ ಮನೆಯಲ್ಲಿ ಚೆನ್ನಮ್ಮಾ ಲಿಂಗಪೂಜೆ, ಅನ್ನದಾನ, ಜಂಗಮರ ಸೇವೆಯಲ್ಲಿ ಸಾಮಾನ್ಯಳಂತೆ ಬದುಕಿದಳು. ಸ್ವಾತಂತ್ರ್ಯದ ಕನಸು ಕಾಣುತ್ತಾ ಮತ್ತೆ ಬ್ರಟಿಷ್‌ರೊಡನೆ ಹೋರಾಡುವ ಅವಕಾಶಕ್ಕೆ ಕಾಯುತ್ತ ಸೆರೆಯಲ್ಲಿ ೦೫ ವರ್ಷ ಕಾಲ ಕಳೆದಳು. ಜಂಗಮ ವೇಷದಲ್ಲಿ ಬಂದ ಬಂಟ ರಾಯಣ್ಣ
ಗೆದ್ದ ಕಿತ್ತೂರು ತಂದು ಉದ್ದ ಬೀಳುವೆ
ಕದ್ದ ಮಾತಲ್ಲ ನಿಮ್ಮಾಣೆ
ಕದ್ದ ಮಾತಲ್ಲ ನಿಮ್ಮಾಣೆ| ಇರದಿರಕ
ಬಿದ್ದ ಹೋಗುವೆ ರಣದಾಗ

ಎಂದು ಹೇಳಿ ಹೋದನು. ಚೆನ್ನಮ್ಮಳಲ್ಲಿ ಮತ್ತೆ ಆಶಾಕಿರಣವು ಮುಡಿತು. ಆದರೆ ರಾಯಣ್ಣ ಸೋದರ ಮಾವ ನೇಗಿನಹಾಳದ ಹಳಬ ಲಕ್ಕಪ್ಪ, ವೆಂಕನಗೌಡ, ಖೋದಾನಪೂರ ಲಿಂಗನಗೌಡ ಸ್ವಾರ್ಥಿಗಳ ಪಿತೂರಿಯಿಂದ ರಾಯಣ್ಣನನ್ನು ಸೆರೆಹಿಡಿದು ನಂದಗಡದಲ್ಲಿ ನೇಣು ಹಾಕಿದರು. ವಿಷಯ ತಿಳಿದ ಚೆನ್ನಮ್ಮಾ ಹತಾಶಳಾಗಿ ೧೮೨೪ ಫೆಬ್ರವರಿ ೦೨ ರಂದು ಲಿಂಗೈಕ್ಯಳಾದಳು. ಅವಳ ಸಮಾದಿ ಬೈಲಹೊಂಗಲದಲ್ಲಿ ಇದೆ. ಕೆಲವು ದಿನಗಳಲ್ಲಿಯೇ ಸೊಸೆ ಜಾನಕಿಬಾಯಿಯೂ ಬೈಲಹೊಂಗಲದ ಸೆರೆಮನೆಯಲ್ಲಿಯೇ ಮರಣ ಹೊಂದಿದಳು. ಇನ್ನೊಬ್ಬ ಸೊಸೆ ವೀರಮ್ಮಳಿಗೆ ಧಾರವಾಡದ ಕಲೆಕ್ಟರ್ ವಿಷಪ್ರಾಶನ ಮಾಡಿಸಿದನೆಂದು ತಿಳಿದುಬರುತ್ತದೆ. ಈ ರೀತಿ ಕಿತ್ತೂರು ಸಾಮ್ರಾಜ ಅವನತಿ ಕಂಡರು ಚೆನ್ನಮ್ಮ ವೀರ ಮಗಳಾಗಿ, ಶೂರ ಸತಿಯಾಗಿ, ಆದರ್ಶ ತಾಯಿಯಾಗಿ ವೀರವನಿತೆಯಾಗಿಯೇ ಮರಣ ಹೊಂದಿದಾಳೆ ಅವಳ ನೆನಪು ಸೂರ್ಯ ಚಂದ್ರರು ಇರುವ ವರೆಗೆ ಅಚ್ಚಳಿಯದೆ ಉಳಿದಿದೆ.

ಸಂಜೀವಕುಮಾರ ವೀ ತಿಲಗರ

 

WhatsApp Group Join Now
Telegram Group Join Now
Share This Article