ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಎರ್ರಿತಾತ ರಥೋತ್ಸವ

Ravi Talawar
ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಎರ್ರಿತಾತ ರಥೋತ್ಸವ
WhatsApp Group Join Now
Telegram Group Join Now
ಬಳ್ಳಾರಿ  ಜೂ 12.    ಜಿಲ್ಲೆಯ‌ ಸುಕ್ಷೇತ್ರ ಶ್ರೀ ಎರ್ರಿತಾತನವರ ಮಹಾರಥೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತ ಸಮೂಹ ಮಧ್ಯೆ ಭಕ್ತಿ ಭಾವದಿಂದ ಬುಧವಾರ ಸಂಜೆ ನಡೆಯಿತು. ರಥಕ್ಕೆ ಭಕ್ತರು ಹೂವ ಹಣ್ಣು ಸಮರ್ಪಿಸುವ ಮೂಲಕ ಭಕ್ತಿ ಭಾವ ಮೆರೆದರು. ಮಳೆಯ ಮಧ್ಯೆ ರಥೋತ್ಸವ ಸಂಭ್ರಮದಿಂದ ನಡೆಯಿತು.
ಮಹಾರಥೋತ್ಸವದ ನಂತರ ಹರಕೆ ಹೊತ್ತ ಭಕ್ತರು ಕರ್ಪೂರ ಆರತಿಯೊಂದಿಗೆ ಪ್ರದಕ್ಷಿಣೆ ಮಾಡಿ ತಮ್ಮ ಹರಕೆ‌ ತೀರಿಸಿದರು. ಮಹಾರಥೋತ್ಸವದ ಅಂಗವಾಗಿ ಎರ್ರಿತಾತನವರ ಮೂರ್ತಿಗೆ ವಿಶೇಷ ಅಲಂಕಾರ ಮತ್ತು ವಿವಿಧ ಅಭಿಷೇಕ ಪೂಜೆ ಮಾಡಲಾಯಿತು.
ಬುಧವಾರ ಬೆಳಿಗ್ಗೆ ಮಹಾರಥೋತ್ಸವದ ಅಂಗವಾಗಿ ಸತತ ಏಳು ದಿನಗಳಿಂದ ಹಗಲಿರುಳು ನಡೆದ ಸಪ್ತಭಜನೆ ಮುಕ್ತಾಯ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಶ್ರೀ  ಎರ್ರಿತಾತನವರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉರವಕೊಂಡದ ಗವಿಮಠ ಸಂಸ್ಥಾನದ ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿ ಗಳು ಉದ್ಘಾಟಿಸಿದರು.
ನಂತರದಲ್ಲಿ ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ನ ಸಹಯೋಗದೊಂದಿಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಬಿರವನ್ನು ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿಗಳು ಉದ್ಘಾಟನೆ ಮಾಡಿ, ರಕ್ತದಾನದ ಮಹತ್ವ ತಿಳಿಸಿಕೊಟ್ಟರು. ಜೂ.13ರಂದು ಸಂಜೆ 7 ಗಂಟೆಗೆ ಹೂವಿನ ರಥೋತ್ಸವ ಗಂಟೆ. ನಂತರದಲ್ಲಿ ಬಾಣೋತ್ಸವ ನಡೆಯಲಿದೆ.
WhatsApp Group Join Now
Telegram Group Join Now
Share This Article