ಬಾಗಲಕೋಟೆ, ಏಪ್ರಿಲ್ 17: ಸಮಾಜಮುಖಿ ಚಿಂತನೆ,ಸಮರ್ಪಕ ಯೋಜನೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾದ್ಯ ಎಂದು ಮಾಜಿ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬುಧವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ
ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು.
ಕಳೆದ ಹತ್ತು ವರ್ಷದಿಮದ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣ ಹಿಡಿದು, ವಿಶ್ವ ಮಟ್ಟದಲ್ಲಿ ದೇಶದ ಗೌರವನ್ನು ಹೆಚ್ಚಿಸುವಂತ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು, ಆಡಳಿತಾತ್ಮಕವಾಗಿ ಇಡೀ ದೇಶದಲ್ಲಿ ಸುಶಾಸನ ಜಾರಿಗೆ ಬಂದಿತು, ಇಂತಹ ಸಮರ್ಥ ನೇತೃತ್ವಕ್ಕೆ ಮತ್ತೆ ದೇಶದ ಚುಕ್ಕಾಣಿ ವಹಿಸುವ ಸದವಕಾಶ ತಮ್ಮ ಮುಂದಿದೆ, ಎಲ್ಲರೂ ಮೋದಿಯವರ ಜೊತೆಯಾಗೋಣ ಮತ್ತೊಮ್ಮೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಗೆ ಮತನೀಡಿ ಎಂದರು.
ಇದಕ್ಕೂ ಮುಂಚೆ ಶ್ರೀರಾಮನವಮಿಯ ನಿಮಿತ್ಯ ಹೋಳೆ ಆಂಜನೇಯ ದೇವಸ್ಥಾನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾಂಜಲಿ ೨
ಮೂಲಕ ಗೌರವ ನಮನ ಸಲ್ಲಿಸಿ, ನಂತರ ಶಿವಾನಂದ ಜೀನ ನಿಂದ ಪ್ರಾರಂಭವಾದ ಚುನಾವಣೆ ಪ್ರಚಾರದ ಪಾದಯಾತ್ರೆ ೧೬ ಹಾಗೂ
೧೫ ನೇ ವಾರ್ಡಗಳಲಿ ವಾರ್ಡಗಳಲ್ಲಿ ಸಂಚರಿಸಿ, ಪಾದಯಾತ್ರೆ ಮೂಲಕ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
ಮಾಡಲಾಯಿತು.
ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಸಟ್, ಗುರುಬಸವ ಸೂಳಿಭಾವಿ,ಶಿವಾನಂದ ಟವಳಿ,ಮುತ್ತಣ್ಣ
ಬೇಣ್ಣೂರ, ಕುಮಾರ ಯಳ್ಳಿಗುತ್ತಿ, ಜೆಡಿಎಸ್ಸಿನ ಸಲೀಂ ಮೊಮಿನ್,ಈರಣ್ಣ ಅಥಣಿ ,ನಗರಸಭೆ ಸದಸ್ಯ ಅಯ್ಯಪ್ಪ ವಾಲ್ಮೀಕಿ,ಪರಶುರಾಮ
ಗಳಕನ್ನವರ, ರಾಜು ಬಾಲಾಜಿ, ಬಸು ಅಂಬಿಗೇರ, ನಾಗರಾಜ ಕಟ್ಟಿಮನಿ,ಮಂಜು ಭಜನ್ನವರ್,ಈರಣ್ ದಿಡ್ಡಿ, ರವಿ ನಾಯಕ್, ಹನಮಂತ ಬಿಚ್ಚೆಲಿ, ಮಲ್ಲು ಕುರಬರ, ರಾಕೇಶ ಬಾಡದ, ಅನಿತಾ ಸರೋಧೆ,ಜ್ಯೋತಿ ಚವ್ಹಾಣ, ಮಂಜು ಚವ್ಹಾಣ, ಅನ್ಸರಾಜ ಗೋಡ,
ಕುಮಾರ ಪವಾರ ಪವಾರ ಸೇರಿದಂತೆ ಅನೇಕ ಜನ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.