ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ‘ಭಾರತ್​ ಮಾತಾ ಕಿ ಜೈ’ ಜಪ ಶಿಕ್ಷೆ

Ravi Talawar
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ‘ಭಾರತ್​ ಮಾತಾ ಕಿ ಜೈ’ ಜಪ ಶಿಕ್ಷೆ
WhatsApp Group Join Now
Telegram Group Join Now

ಜಬಲ್ಪುರ, ಮಧ್ಯಪ್ರದೇಶ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ವಿಶಿಷ್ಟವಾದ ಶಿಕ್ಷೆಯನ್ನು ನೀಡಿದೆ. ಇನ್ನು ಮುಂದೆ ಆತನ ಬಾಯಲ್ಲಿ ತಿಂಗಳಲ್ಲಿ ಎರಡು ಕಂತಿನಂತೆ 42 ಬಾರಿ ‘ಭಾರತ್​ ಮಾತಾ ಕಿ ಜೈ’ ಎಂಬ ಘೋಷಣೆ ಮೊಳಗುವಂತೆ ಮಾಡಿದೆ.

ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ ಎಂಬ ವ್ಯಕ್ತಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹದ ಕೃತ್ಯ ಎಸಗಿದ್ದ. ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದೀಗ ಆತ ಜಾಮೀನು ಕೋರಿ ಮಧ್ಯಪ್ರದೇಶ ಹೈಕೋರ್ಟ್​ ಮೆಟ್ಟಿಲೇರಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಾಲಿವಾಲ್ ಅವರ ಪೀಠ, ಆರೋಪಿ ತಪ್ಪನ್ನು ಗುರುತಿಸಿದೆ. ಜೊತೆಗೆ, ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಪೊಲೀಸ್​​ ಠಾಣೆಗೆ ತೆರಳಿ, ರಾಷ್ಟ್ರಧ್ವಜಕ್ಕೆ ವಂದಿಸುವ ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿದೆ.

WhatsApp Group Join Now
Telegram Group Join Now
Share This Article