“ಹರ್ಷ ಟ್ರೋಫಿ – ಸೀಸನ್ 6” ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಚನ್ನರಾಜ

Sandeep Malannavar
“ಹರ್ಷ ಟ್ರೋಫಿ – ಸೀಸನ್ 6” ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಚನ್ನರಾಜ
WhatsApp Group Join Now
Telegram Group Join Now
ಬೆಳಗಾವಿ :  ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಬಿ.ಕೆ. ಗ್ರಾಮದ ವೈರಲೆಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ *“ಹರ್ಷ ಟ್ರೋಫಿ”* ಲಾಂಗ್ ಪಿಚ್ ಕ್ರಿಕೆಟ್ ಪಂದ್ಯಾವಳಿಯ 6ನೇ ಆವೃತ್ತಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು.
 ಅದ್ಧೂರಿಯಾಗಿ ಶುರುವಾದ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡಗಳಿಗೆ ಶುಭ ಹಾರೈಸಿದ ಅವರು, ಈ ಪಂದ್ಯಾವಳಿ ಆಯೋಜಿಸುತ್ತಿರುವುದಕ್ಕೆ ಮತ್ತು ಉದ್ಘಾಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದರು. ಕ್ರೀಡಾ ಮನೋಭಾವದಿಂದ, ಸೌಹಾರ್ದಯುತವಾಗಿ ಆಡುವ ಮೂಲಕ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿ ಎಂದು ಅವರು ಕರ ನೀಡಿದರು.
 ಈ ವೇಳೆ ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ಅಬ್ದುಲ್ ಬಾಗವಾನ್ ರಾಕೇಶ್ ಪಾಟೀಲ, ಮಹೇಶ್ ಸುಗ್ನೆಣ್ಣವರ, ನಿಲೇಶ್ ಚಂದಗಡ್ಕರ್, ಅಪ್ಸರ್ ಜಮಾದಾರ್, ಜಮೀಲ್ ಖಾಜಿ, ಅರ್ಬಾಜ್, ನೂರ್ ಜಮಾದಾರ, ನಿಹಾಲ್, ಪ್ರಹ್ಲಾದ, ಕ್ರಿಕೆಟ್ ಪ್ರಿಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article