ಸಮುದಾಯ ಭವನ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ

Ravi Talawar
ಸಮುದಾಯ ಭವನ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ಮುತ್ನಾಳ ಗ್ರಾಮದ ಶ್ರೀ 1008 ಚಂದ್ರಪ್ರಭು ತೀರ್ಥಂಕರ ಜಿನ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮುದಾಯ ಭವನ ಹಾಗೂ  ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಬೆಳಗ್ಗೆ ಉದ್ಘಾಟಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಸಮುದಾಯ ಭವನ  ನಿರ್ಮಾಣಗೊಂಡಿದೆ. ಕ್ಷೇತ್ರದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ-ಕಾರ್ಯಗಳಿಗೆ ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮೊದಲ ಪ್ರಾಶಸ್ತ್ಯ ನೀಡುತ್ತಿದ್ದು, ಸರ್ವ ಜನಾಂಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಸಹ ಕ್ಷೇತ್ರಕ್ಕೆ  ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಈ ವೇಳೆ ಆಚಾರ್ಯ ಶ್ರೀ 108 ವಿಮಲೇಶ್ವರ ಮುನಿ ಮಹಾರಾಜರು, ಮುತ್ನಾಳ ಕೇದಾರ ಶಾಖಾ ಪೀಠದ ಷ.ಬ್ರ.ಶ್ರೀ ಶಿವಾನಂದ ಶಿವಾಚಾರ್ಯರು, ಗ್ರಾಮದ ಹಿರಿಯರು ಸೇರಿದಂತೆ ಜೈನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article