ಯರಗಟ್ಟಿ: ಹಿಂದುಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು ಹಿಂದುಗಳಿಗೆ ಸರ್ವಶ್ರೇ?ರು. ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡಿದಾಗ ಬದುಕು ಸಾರ್ಥಕಗೊಳ್ಳಲಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಸತ್ತಿಗೇರಿ ಗ್ರಾಮದ ಮಳಿಮಲ್ಲೇಶ್ವರ ಶ್ರೀಮಠದಲ್ಲಿ ಶ್ರಾವಣಮಾಸ ನಿಮಿತ್ತ ಹಮ್ಮಿಕೊಂಡ ಪುರಾಣ ಮಹಾಮಂಗಲ ಹಾಗೂ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಆಶೀರ್ವಚನ ನೀಡಿದರು.
ಯುವ ಮುಖಂಡ ಪ್ರಕಾಶ ವಾಲಿ ಮಾತನಾಡಿದ ಅವರು ಶ್ರಾವಣ ಮಾಸದಲ್ಲಿ ಶ್ರದ್ದೆ, ಭಕ್ತಿಯಿಂದ ಪೂಜೆ ಮಾಡಿದರೆ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ. ಹುಟ್ಟು ಸಾವುಗಳ ಮಧ್ಯೆ ಶ್ರೇ?ವಾದ ಬದುಕು ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಗುರುವಿನ ಮೂಲಕ ಸಂಸ್ಕಾರ ಮತ್ತು ಶಿವದೀಕ್ಷೆ ಪಡೆದು ಬಾಳಿದರೆ ಹುಟ್ಟು ಸಾವುಗಳ ಬಂಧನದಿಂದ ಮುಕ್ತನಾಗಲು ಸಾಧ್ಯ. ಧರ್ಮದ ಬಗ್ಗೆ ಅಂತರಾಳದಿಂದ ಕೆಲಸ ಮಾಡಬೇಕು. ಸತ್ಕರ್ಮಗಳ ಮೂಲಕ ನಡೆದರೆ ಲೋಕ ಕಲ್ಯಾಣವಾಗುವುದು. ಸಮಾಜದಲ್ಲಿ ಪುಣ್ಯದ ಕೆಲಸಗಳು ಹೆಚ್ಚು ನಡೆಯಬೇಕು ಎಂದರು.
ಈ ವೇಳೆ ಮಹಾಂತೇಶ ಗೋಡಿ, ಉಮೇಶ ಮಾಗುಂಡನವರ, ಈರಣ್ಣಾ ಹೊಸಮನಿ, ಎಸ್. ಟಿ. ಕರಲಿಂಗಪ್ಪನವರ, ಅರವಿಂದಗೌಡ ಪಾಟೀಲಿ, ಮಹಾದೇವ ಅವರಾದಿ, ಉಮೇಶ ಪಾಟೀಲ, ಗೌಡಪ್ಪ ಸವದತ್ತಿ, ಸುರೇಶ ಸವದತ್ತಿ, ಯಲ್ಲಪ್ಪ ಬಾಂಗಿ, ಸತೀಶ ಯಡ್ಡಹಳ್ಳಿ, ಈರಪ್ಪ ಮಿರ್ಜಿ, ಬಸವಂತಪ್ಪ ಹೊಂಗಲ ಸೇರಿದಂತೆ ಅನೇಕರು ಇದ್ದರು.