ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಇಂದು ಪ್ರಮಾಣ ವಚನ: ಸೂಪರ್​ ಸ್ಟಾರ್​ ರಜಿನಿಕಾಂತ್ ಭಾಗಿ

Ravi Talawar
ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಇಂದು ಪ್ರಮಾಣ ವಚನ: ಸೂಪರ್​ ಸ್ಟಾರ್​ ರಜಿನಿಕಾಂತ್ ಭಾಗಿ
WhatsApp Group Join Now
Telegram Group Join Now

ವಿಜಯವಾಡ: ಆಂಧ್ರಪ್ರದೇಶದ ಸಿಎಂ ಆಗಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸೂಪರ್​ ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ನಟ ರಜನಿಕಾಂತ್​ ಕೂಡ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಮಂಗಳವಾರ ಅವರು ಪತ್ನಿ ಸಮೇತವಾಗಿ ವಿಜಯವಾಡಕ್ಕೆ ಆಗಮಿಸಿದ್ದಾರೆ. ಉಳಿದಂತೆ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್​ ಶಾ, ಜೆ.ಪಿ ನಡ್ಡಾ ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ.

ಚಂದ್ರಬಾಬು ನಾಯ್ಡು ಅವರು 11 ಗಂಟೆ 27ನಿಮಿಷಕ್ಕೆ 4ನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 23 ಜನರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ (ನಿನ್ನೆ) ಮುಂಜಾನೆ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ, ಟಿಡಿಪಿ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ ಹಾಜರಿದ್ದರು.

23 ಸಚಿವರ ಪ್ರಮಾಣ ವಚನ: ತೆಲುಗು ದೇಶಂ ನಾಯಕ ಚಂದ್ರಬಾಬು ಅವರು ಎಪಿ ಮುಖ್ಯಮಂತ್ರಿಯಾಗಿ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ 23 ಜನರು ಸಚಿವರಾಗಿ ಇದೇ ವೇಳೆ, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪವನ್ ಕಲ್ಯಾಣ್ ಸೇರಿದಂತೆ ಎಲ್ಲಾ 24 ಸಚಿವರ ಪಟ್ಟಿಯನ್ನು ನಿನ್ನೆ ಮಧ್ಯರಾತ್ರಿ ಪ್ರಕಟಿಸಲಾಗಿದೆ. ಇನ್ನೂ ಒಂದು ಸ್ಥಾನ ಖಾಲಿ ಉಳಿದು ಕೊಂಡಿದೆ.

ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ನಾರಾ ಲೋಕೇಶ್, ಕೊಳ್ಳು ರವೀಂದ್ರ, ನಾದೆಂದ್ಲ ಮನೋಹರ್, ಪಿ.ನಾರಾಯಣ, ವಂಗಲಪುಡಿ ಅನಿತಾ, ಸತ್ಯಕುಮಾರ್ ಯಾದವ್, ನಿಮ್ಮಾ ರಾಮಾನಾಯ್ಡು, ಎನ್.ಎಂ.ಡಿ.ಫಾರೂಕ್, ಆನಂ ರಾಮನಾರಾಯಣ ರೆಡ್ಡಿ, ಪಯ್ಯಾವುಳ ಕೇಶವ್, ಅಗಣಿ ಸತ್ಯಪ್ರಸಾದ್, ದೋಸ್ತಿ ಪಾರ್ಥಸ್ವಾಮಿ, ಕೊಲುಸು ಪಾರ್ಥಸ್ವಾಮಿ ರವಿ, ಕಂದುಲ ದುರ್ಗೇಶ್, ಗುಮ್ಮಡಿ ಸಂಧ್ಯಾರಾಣಿ, ಬಿ.ಸಿ.ಜನಾರ್ದನರೆಡ್ಡಿ, ಟಿ.ಜಿ.ಭರತ್, ಎಸ್.ಸವಿತಾ, ವಾಸಮಶೆಟ್ಟಿ ಸುಭಾಷ್, ಕೊಂಡಪಲ್ಲಿ ಶ್ರೀನಿವಾಸ್, ಮಂಡಿಪಲ್ಲಿ ರಾಮ್ ಪ್ರಸಾದ್ ರೆಡ್ಡಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಆಂಧ್ರ ಚುನಾವಣಾ ಫಲಿತಾಂಶ (ವಿಧಾನಸಭೆ ಮತ್ತು ಲೋಕಸಭೆ): ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಒಳಗೊಂಡ ಎನ್‌ಡಿಎ ಕೂಟ 164 ವಿಧಾನಸಭೆ ಮತ್ತು 21 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಜಗನ್​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಕೇವಲ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ.

 

 

 

 

 

 

WhatsApp Group Join Now
Telegram Group Join Now
Share This Article