ಮುರಕೀಭಾವಿ ಗ್ರಾ.ಪಂ ಅಧ್ಯಕ್ಷರಾಗಿ ಚಾಂದಬಿ ನದಾಫ ಅವಿರೋಧ ಆಯ್ಕೆ

Ravi Talawar
ಮುರಕೀಭಾವಿ ಗ್ರಾ.ಪಂ ಅಧ್ಯಕ್ಷರಾಗಿ ಚಾಂದಬಿ ನದಾಫ ಅವಿರೋಧ ಆಯ್ಕೆ
WhatsApp Group Join Now
Telegram Group Join Now
ನೇಸರಗಿ: ಸಮೀಪದ ಮುರಕೀಭಾವಿ ಗ್ರಾಮ   ಪಂಚಾಯತಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ  ಮದನಬಾವಿ ಗ್ರಾಮದ ಶ್ರೀಮತಿ  ಚಾಂದಬಿ ಗೌಲಿಸಾಬ್. ನದಾಫ ಅವರು ಉಳಿದ ಕೊನೆಯ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರ  ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆಯಾದರು.
  ನೂತನ ಅಧ್ಯಕ್ಷೆ ಚಾಂದಬಿ ನದಾಫ ಮಾತನಾಡಿ ಮುರಕೀಬಾವಿ, ಮದನಬಾವಿ ಗ್ರಾಮಗಳ ಅಭಿವೃದ್ಧಿಗೆ ಎಲ್ಲ ಸದಸ್ಯರ, ಹಿರಿಯರ  ಸಹಕಾರದಿಂದ ಕೆಲಸ ಕಾರ್ಯ ಮಾಡಲಾಗುವದು ಎಂದರು.
    ಈ ಸಂದರ್ಭದಲ್ಲಿ ಗ್ರಾ ಪಂ. ಸದಸ್ಯರಾದ ರಾಮನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ, ಶಿವಾನಂದ ಪಾಟೀಲ, ಆಡಿವಪ್ಪ ಮೋದಗಿ, ಗಂಗಪ್ಪ ಸಂಗಮ್ಮನವರ, ಶ್ರೀಮತಿ ಕಸ್ತೂರಿ ಕುರಬರ, ಶ್ರೀಮತಿ ಅನಸೂಯಾ ತಳವಾರ, ಪಿಡಿಓ ಶಕುಂತಲಾ ಮರಕುಂಬಿ, ಗಣ್ಯರಾದ ಈರನಗೌಡ ದೊಡಗೌಡರ, ಪ್ರಕಾಶ ಹೊಸಮನಿ, ಬಾಬುಗೌಡ ದೊಡ್ಡಗೌಡರ, ರುದ್ರಪ್ಪ ಕೊಳದೂರ ಶಿವಪ್ಪ ಗುಜನಾಳ,  ನಭಿ ನದಾಫ್,ಅಣ್ಣಯ್ಯ ನಂಜರಗಿ, ಕೆಂಚಪ್ಪ ಕುರಬರ, ಗಂಗಪ್ಪ , ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಮುರಕೀಬಾವಿ, ಮದನಬಾವಿ ಗ್ರಾಮಗಳ  ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಚುನಾವಣೆ ಅಧಿಕಾರಿಯಾಗಿ ಕಿರಣ ಘೋರ್ಪಡೆ ಕಾರ್ಯನಿರ್ವಹಿಸಿದರು.
WhatsApp Group Join Now
Telegram Group Join Now
Share This Article