ಹೆಚ್ಚಿನ ದರಕ್ಕೆ ಅಡಿಗೆ ಅನೀಲ ಮಾರಾಟ ಜಾಲ ಪತ್ತೆ : ಸಿಲೆಂಡ್‌ರ ವಶ

Hasiru Kranti
ಹೆಚ್ಚಿನ ದರಕ್ಕೆ ಅಡಿಗೆ ಅನೀಲ ಮಾರಾಟ ಜಾಲ ಪತ್ತೆ : ಸಿಲೆಂಡ್‌ರ ವಶ
WhatsApp Group Join Now
Telegram Group Join Now

ಹುನಗುಂದ; ತಾಲೂಕಿನ ಕಂದಾಯ ಇಲಾಖೆ ಕಣ್ಣಿಗೆ ಮಣ್ಣೆರಚಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಹೆಚ್ಚಿನ ದರಕ್ಕೆ ಅಡಿಗೆ ಅನೀಲ ಮಾರಾಟ ಮಾಡುವ ಜಾಲವನ್ನು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ನೇತೃತ್ವದ ತಂಡ ಪತ್ತೆ ಹಚ್ಚಿ ಸಂಗ್ರಹಿಸಿಟ್ಟ ಅಕ್ರಮ ಅಡುಗೆ ಅನೀಲದ ಸಿಲೆಂಡ್‌ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಹುನಗುಂದ-ಇಲಕಲ್ಲ ಅವಳಿ ತಾಲೂಕಿನ ವ್ಯಾಪ್ತಿಯ ಅಕ್ರಮ ಸಿಲೆಂಡರ್ ಸಂಗ್ರಹದ ಜಾಲ ಪತ್ತೆ ಹಚ್ಚಿದ ಐಹೊಳೆ ಗ್ರಾಮದ ಸುತ್ತಲಿನ ಡಾಬಾ, ಹೊಟೆಲ್ ಮತ್ತು ಮನೆಗಳಲ್ಲಿ ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟ ಮನೆಬಳಕೆ ೨೭ ಮತ್ತು ೧ವಾಣಿಜ್ಯ ಸಿಲೆಂಡರಗಳ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ೨೮ ಸಿಲೆಂಡರ್‌ಗಳನ್ನು ವಸಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಿಲೆಂಡರ್ ಸಂಗ್ರಹಿಸಿಟ್ಟವರ ವಿರುದ್ದ ಕಾನೂನಾತ್ಮಕ ದೂರು ಮತ್ತು ದಂಡ ವಿಧಿಸುವ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ಸೆಲೆಂಡರಗಳನ್ನು ಹುನಗುಂದ ಎಲ್‌ಪಿಜಿ ಗ್ಯಾಸ್ ಸಂಗ್ರಹಣಾ ಸ್ಥಳಕ್ಕೆ ಒಪ್ಪಿಸಿ ಅಕ್ರಮದಲ್ಲಿದ್ದ ಸಿಲೆಂಡರ್ ನಂಬರಗಳನ್ನು ದಾಖಲಿಸಿ ಬಾಗಲಕೋಟ ಜಿಲ್ಲೆಯ ಉಪವಿಭಾಗಾಧಿಗಳ ವಶಕ್ಕೆ ಒಪ್ಪಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ತಿಳಿಸಿದರು. ಆಹಾರ ಶಿರಸ್ತೆದಾರಸ್.ಎಂ. ಬಡ್ಡಿ, ಆಹಾರ ನಿರೀಕ್ಷಕ ರಾಜಶೇಖರ ತುಂಬಗಿ ಮತ್ತು ಆನಂದ ನಿಡಗುಂದಿ ಕಾರ್‍ಯಾಚರಣೆಯಲ್ಲಿ ಪಾಲ್ಗೊಂಡದ್ದರು.

WhatsApp Group Join Now
Telegram Group Join Now
Share This Article