ಕಿತ್ತೂರು ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಸಿಇಒ ರಾಹುಲ್‌ ಶಿಂಧೆ ಭೇಟಿ; ಕಾಮಗಾರಿಗಳ ಪರಿಶೀಲನೆ

Ravi Talawar
ಕಿತ್ತೂರು ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಸಿಇಒ ರಾಹುಲ್‌ ಶಿಂಧೆ ಭೇಟಿ; ಕಾಮಗಾರಿಗಳ ಪರಿಶೀಲನೆ
WhatsApp Group Join Now
Telegram Group Join Now

ಹಸಿರು ಕ್ರಾಂತಿ :ಎಂ.ಕೆ.ಹುಬ್ಬಳ್ಳಿ: ಚ.ಕಿತ್ತೂರು ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ ಬೆಳಗಾವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ನೀಡಿ, ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳಯನ್ನು ಪರೀಶಿಲಿಸಿದರು.

ತಾಲೂಕಿನ ದಾಸ್ತಿಕೊಪ್ಪ, ದೇವರಶೀಗಿಹಳ್ಳಿ, ಮಾರ್ಗನಕೊಪ್ಪ,ತಿಗಡೊಳ್ಳಿ, ತೇಗೂರು, ನಿಚ್ಚಣಕಿ, ಡೊಂಬರಕೊಪ್ಪ ಹಾಗೂ ದೇಗಾಂವ  ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ ಯೋಜನೆಯ ಕಾಮಗಾರಿಗಳನ್ನು ಬೆಳಗಾವಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂದೆ ಪರಿಶೀಲಿಸಿ ಮಾತನಾಡಿ, ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು.  ನೀರಿನ ಟ್ಯಾಂಕಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಿ. ಜಲ ಜೀವನ ಯೋಜನೆಯಡಿ ಇನ್ನೂ ಎಲ್ಲಿ ಕಾಮಗಾರಿ ಬಾಕಿ ಉಳಿದಿವೆ ಅವುಗಳನ್ನು ಶಿಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಿ ಎಂದು  ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಎನ್.ಆರ್. ಎಲ್. ಎಂ ನ ಟಿ.ಪಿ.ಎಂ  ಹಾಗೂ ಗ್ರಾಪಂ ಸಿಬ್ಬಂದಿಯೊಂದಿಗೆ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಸಂಘದ ಮಹಿಳೆಯರು  ಕೋಳಿ ಶೆಡ್ ಮಾಡಿಕೊಳ್ಳಲು ಅವಕಾಶ ಇರುವ ಬಗ್ಗೆ ಚರ್ಚಿಸಿ ಕಾಮಗಾರಿಗೆ ಸ್ಥಳ ನಿಗದಿ ಪಡಿಸಲು ತಿಳಿಸಿದರು. ಡೊಂಬರಕೊಪ್ಪ ಅಂಗನವಾಡಿ ಕೇಂದ್ರ ಹಾಗೂ ದಾಸ್ತಿಕೊಪ್ಪ , ತಿಗಡೊಳ್ಳಿ ಗ್ರಾಮಗಳ ಡಿಜಿಟಲ್ ಗ್ರಂಥಾಲಯಲ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿಯ ಜಿಪಂ ಗ್ರಾಕುನೀ ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಕಿರಣ ಗೋರ್ಪಡೆ, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಹೂಲಿ, ಸಹಾಯಕ ನಿರ್ದೇಶಕ ಮಹಮ್ಮದ ಗೌಸ ರಿಸಲ್ದಾರ್, ಸುರೇಶ ನಾಗೋಜಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು  ಇದ್ದರು.

WhatsApp Group Join Now
Telegram Group Join Now
Share This Article