ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಕ್ರಮ ವಹಿಸಿ : ಸಿಇಒ ಕುರೇರ್

MK HasiruKranti
ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಕ್ರಮ ವಹಿಸಿ : ಸಿಇಒ ಕುರೇರ್
WhatsApp Group Join Now
Telegram Group Join Now

ಬಾಗಲಕೋಟೆ: ಮಾರ್ಚ ೨೪  : ಪ್ರಖರ ಬೇಸಿಗೆಯ ಕಾಲ ಪ್ರಾರಂಭವಾಗಿದ್ದು, ಮುಂದಿನ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಸುಚಿಸಿದರು.

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳೊಂದಿಗೆ ಕುಡಿಯುವ ನೀರು ಸರಬರಾಜು ಕುರಿತು ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು, ಯಾವ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿದುಕೊಂಡು ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ ನೋಡಿಕೊಳ್ಳಬೇಕು ಒಂದು ವೇಳೆ ದೂರು ಬಂದರು ಕೂಡಾ ೨೪ ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುವ ಕೆಲಸವಾಗಬೇಕು. ಪಂಚಾಯಿತಿ ಬೋರವೆಲ್ ಬಳಕೆಗೆ ಯೋಗ್ಯವಲ್ಲ ಎಂದು ಕಂಡು ಬಂದಲ್ಲಿ ಖಾಸಗಿ ಬೋರವೆಲ್ ಗಳನ್ನು ಗುರುತಿಸಿಕೊಂಡು ಅವುಗಳ ಮಾಲಿಕರೊಂದಿಗೆ ಕರಾರು ಪತ್ರ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಖಾಸಗಿ ಬೋರವೆಲ್ ಸಿಗದಿದ್ದ ಪಕ್ಷದಲ್ಲಿ ಟ್ಯಾಂಕರ್‌ಗಳನ್ನು ಬಳಸಿ ನೀರು ಪೊರೈಸುವ ಕೆಲಸ ಮಾಡಬೇಕು. ಒವರ್ ಹೆಡ್ ಟ್ಯಾಕ್ ಗಳು ದುರಸ್ತಿ ವ್ಯವಸ್ಥೆಯಲ್ಲಿದ್ದರೆ ದುರಸ್ತಿ ಮಾಡಿಸಿಕೊಡಲಾಗುವುದು. ಹೊಸ ಬೋರವೆಲ್‌ಗಳಿಗೆ ಅವಕಾಶವಿರುವದಿಲ್ಲ. ಕೇವ ಬೇಸಿಗೆ ಸಮಸ್ಯೆಗಾಗಿ ಹೊಸ ಕೊಳವೆ ಬಾವಿ ಕೊರೆಯಿಸುವ ಕಾರ್ಯ ಸೂಕ್ತವಲ್ಲ ಎಂದರು.

ಗ್ರಾಮಗಳಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಸುಸ್ಥಿಯಲ್ಲಿದ್ದು, ಜನಬಳಕೆಗೆ ಸದಾಕಾಲ ದೊರೆಯುವಂತೆ ಅಗತ್ಯ ಕ್ರಮವಹಿಸಿ, ಗ್ರಾಮಗಳಲ್ಲಿನ ಎಲ್ಲ ಜಲಮೂಲಗಳ ಸುತ್ತಲಿನ ಪ್ರದೇಶದಲ್ಲಿ ಇರಬಹುದಾದ ತಾಜ್ಯ ಹಾಗೂ ಚರಂಡಿ ನೀರನ್ನು ಸರಿಯಾಗಿ ವಿಲೆವಾರಿ ಮಾಡಿ ಕುಡಿಯುವ ನೀರು ಕಲುಷಿತಗೊಳ್ಳದಂತೆ ತಡೆಗಟ್ಟಬೇಕು, ಬಹುಗ್ರಾಮ ನೀರು ಸರಬರಾಜು ಮಾಡುವ ಒವರ್ ಹೆಡ್ ಟ್ಯಾಂಕ್ ಗಳನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸಿ, ಯಾವುದೇ ರೀತಿಯ ರೋಗಾಣು ಬ್ಯಾಕ್ಟೀರಿಯಾ ಅಥವಾ ಫಂಗಸ್ ಸೇರದಂತೆ ಬೆಳೆಯದಂತೆ ನಿಯಮಿತವಾಗಿ ಎಲ್ಲ ಬಗೆಯ ಜಲಸಂಗ್ರಹಾರಗಳನ್ನು ಸ್ವಚ್ಚಗೊಳಿಸಿ, ವೈಜ್ಷಾನಿಕ ರೀತಿಯಲ್ಲಿ ಕ್ಲೋರಿನೇಷನ್ ಮಾಡಿ ಸ್ವಚ್ಚಗೊಳಿಸತಕ್ಕದ್ದು ಎಂದು ಹೇಳಿದರು.
ಚಾಲ್ತಿಯಲ್ಲಿರುವಂತಹ ಕೊಳವೆ ಬಾವಿಗಳನ್ನು ಪರಿಶೀಲಿಸಿ, ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಿ ನೀರಿನ ಶುದ್ದತೆಯನ್ನು ಖಾತ್ರಿ ಪಡಿಸಿಕೊಳ್ಳಿ. ಒಟ್ಟಾರೆ ಗ್ರಾಮಸ್ಥರಿಗೆ ಅವರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ಕಲುಷಿತ ನೀರಿನ ಸೇವನೆಯಿಂದ ವಾಂತಿಭೇದಿ ಪ್ರಕರಣಗಳು, ಸಾವುನೋವು ಘಟಿಸದಂತೆ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್ ವಾಯ್ ಬಸರಿಗಿಡದ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಆಕಾಶ ಸೇರಿದಂತೆ ಇತರರು ಇದ್ದರು.

 

WhatsApp Group Join Now
Telegram Group Join Now
Share This Article