ಬೆಂಗಳೂರು: ಪ್ರತಿ ವರ್ಷ ಕೊಡ ಮಾಡುವ ಕೇಂದ್ರದ ಗೃಹಮಂತ್ರಿ ದಕ್ಷತಾ ಪದಕಕ್ಕೆ ಈ ಬಾರಿ ರಾಜ್ಯದ ಏಳು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಕ್ಲಿಷ್ಟ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಪ್ರತಿ ವರ್ಷ ಕೇಂದ್ರ ಗೃಹ ಸಚಿವಾಲಯವು ಗೃಹ ಮಂತ್ರಿ ಹೆಸರಿನಲ್ಲಿ ಪದಕ ನೀಡುತ್ತದೆ. ಇದೇ ರೀತಿ, ಈ ವರ್ಷ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ತನಿಖೆ ನಡೆಸಿದ್ದ ಇಬ್ಬರು ಡಿವೈಎಸ್ಪಿ ಸೇರಿ 7 ಮಂದಿ ಅಧಿಕಾರಿಗಳಿಗೆ ಪದಕ ಲಭಿಸಿವೆ.