ಬಿಎಂಟಿಸಿಗೆ 4500 ಹೊಸ ಬಸ್ಸು ಒದಗಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

Ravi Talawar
ಬಿಎಂಟಿಸಿಗೆ 4500 ಹೊಸ ಬಸ್ಸು ಒದಗಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್ 6: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್​​ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಬಿಎಂಟಿಸಿಯ ಹಳೆಯ ಡಕೋಟಾ ಬಸ್ಸುಗಳು ಎಂಬ ಆರೋಪವಿದೆ. ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 44 ಜನ ಪ್ರಾಣ ಕಳೆದುಕೊಂಡಿದ್ದರೆ, ಕಳೆದ ಒಂದು ತಿಂಗಳಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿಎಂಟಿಸಿ ಸಾಕಷ್ಟು ಬಸ್ಸುಗಳಲ್ಲಿ ಹಾರ್ನ್ ಇಲ್ಲ, ಇಂಜಿನ್ ಸಮಸ್ಯೆ, ಗೇರ್ ಬಾಕ್ಸ್ ಬ್ರೇಕ್, ಕ್ಲಚ್ ಪ್ಯಾಡ್, ಹೀಗೆ ನಾನಾ ರೀತಿಯ ಸಮಸ್ಯೆ ಗಳಿದ್ದು, ಹೊಸ ಬಸ್​ಗಳಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

4100 ಸಾಮಾನ್ಯ ಎಲೆಕ್ಟ್ರಿಕ್ ಬಸ್, 400 ಎಸಿ ಎಲೆಕ್ಟ್ರಿಕ್ ಬಸ್ ಬರಲಿದ್ದು ಈಗಾಗಲೇ ಬಿಎಂಟಿಸಿ ನಿಗಮದ 15 ರಿಂದ 20 ಡಿಪೋ ಗಳಲ್ಲಿ ಚಾರ್ಜಿಂಗ್ ಸ್ಟೇಷನ್​ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿಯಲ್ಲಿ ಸದ್ಯ 1200 ಎಲೆಕ್ಟ್ರಿಕ್ ಬಸ್​ಗಳಿವೆ. 4500 ಹೊಸ ಬಸ್ಗಳಿಂದ ಬಿಎಂಟಿಸಿಯಲ್ಲಿ ಒಟ್ಟು 5700 ಎಲೆಕ್ಟ್ರಿಕ್​ಗಳಾಗಲಿವೆ. ಗ್ರಾಸ್ ಕಾಂಟ್ರಾಕ್ಟ್ ಅಡಿಯಲ್ಲಿ ಈ ಬಸ್ಸುಗಳು ನಗರದಲ್ಲಿ ಸಂಚಾರ ಮಾಡಲಿದೆ. ಈ ಬಸ್ಸಿಗೆ ಡ್ರೈವರ್ ಬಸ್ ಕಂಪನಿ ಅವರಾದರೆ, ಕಂಡಕ್ಟರ್ ಬಿಎಂಟಿಸಿಯಿಂದ ಇರುತ್ತಾರೆ.

WhatsApp Group Join Now
Telegram Group Join Now
Share This Article