ನವದೆಹಲಿ, ಮೇ 14: ಎಚ್ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್ಕಾನ್ ಸಂಸ್ಥೆಗಳು ಜಂಟಿಯಾಗಿ ಸ್ಥಾಪಿಸಬೇಕೆಂದಿರುವ ಸೆಮಿಕಂಡಕ್ಟರ್ ಘಟಕಕ್ಕೆ ) ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಈ ವಿಷಯವನ್ನು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಉತ್ತರಪ್ರದೇಶ ಜೇವರ್ನಲ್ಲಿ (Jewar, UP) 3,076 ರೂ ಹೂಡಿಕೆಯಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಾಣವಾಗಲಿದೆ. ಕೇಂದ್ರ ಅನುಮತಿಸಿರುವ ಆರನೇ ಸೆಮಿಕಂಡಕ್ಟರ್ ಘಟಕ ಇದಾಗಿದೆ. ಈ ಹಿಂದೆ ಅನುಮೋದನೆ ನೀಡಿರುವ ಐದು ಘಟಕಗಳು ಅಂತಿಮ ನಿರ್ಮಾಣ ಹಂತದಲ್ಲಿವೆ ಎನ್ನುವ ಮಾಹಿತಿಯನ್ನು ಎ ವೈಷ್ಣವ್ ನೀಡಿದ್ದಾರೆ.
ದೇಶದ 6ನೇ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ

2027ಕ್ಕೆ ಕಾರ್ಯಾರಂಭಿಸುವ ಉದ್ದೇಶ ಇರುವ ಎಚ್ಸಿಎಲ್ ಮತ್ತು ಫಾಕ್ಸ್ಕಾನ್ನ ಈ ಘಟಕದಲ್ಲಿ ಡಿಸ್ಪ್ಲೇ ಇರುವಂತಹ ಮೊಬೈಲ್ ಫೋನ್, ಲ್ಯಾಪ್ಟಾಪ್, ಆಟೊಮೊಬೈಲ್, ಕಂಪ್ಯೂಟರ್ ಹಾಗೂ ಇತರ ಸಾಧನಗಳಿಗೆ ಡಿಸ್ಪ್ಲೇ ಡ್ರೈವರ್ ಚಿಪ್ಗಳನ್ನು ತಯಾರಿಸಲಾಗುತ್ತದೆ. ಒಂದು ತಿಂಗಳಲ್ಲಿ 20,000 ವೇಫರ್ಗಳು ಹಾಗೂ 3.6 ಕೋಟಿ ಚಿಪ್ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕೆ ಇರಲಿದೆ. ಉತ್ತರಪ್ರದೇಶದ ಜೇವರ್ ವಿಮಾನ ನಿಲ್ದಾಣ ಸಮೀಪವೇ ಇರುವ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಈ ಘಟಕದಲ್ಲಿ 2,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.