ಬಳ್ಳಾರಿಏ.17: 200ವಷ೯ಗಳ ಇತಿಹಾಸ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ತಾಲೂಕಿನ ಭಟ್ರಹಳ್ಳಿ ಗ್ರಾಮದ ಸೀತಾ,ರಾಮ, ಲಕ್ಷ್ಮಣ ಶತೃಘ್ನ ಹಾಗೂ ಆಂಜನೇಯ ಸಮೇತ ಪ್ರತಿಷ್ಠಾಪನೆಗೊಂಡ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಅತ್ಯಂತ ಸಡಗರ, ಸಂಭ್ರಮ, ಭಕ್ತಿಯಿಂದ ಆಚರಿಸಲಾಯಿತು.
ರಾಮನವಮಿ ನಿಮಿತ್ತ ಬೆಳಿಗ್ಗೆ ನೈಮಾ೯ಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಪಂ. ನರಸಪ್ಪಾಚಾಯ೯ ಅವರಿಂದ ಪ್ರಭು ಶ್ರೀರಾಮಚಂದ್ರರ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ವಿವಿಧ ಭಜನಾ ಮಂಡಳಿ ಸದಸ್ಯರಿಂದ ಶ್ರೀರಾಮನಾಮಗಳ ಸಾಮೂಹಿಕ ಸಂಕೀತ೯ನೆ ನಡೆಯಿತು. ಸೀತಾ ಲಕ್ಷ್ಣಣ ಶತೃಘ್ನ ಆಂಜನೇಯ ಸಮೇತರಾಗಿ ಶ್ರೀ ಪಟ್ಟಾಭಿ ರಾಮಚಂದ್ರ ಮೂತಿ೯ ಗಳಿಗೆ ವಿವಿದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ, ಭಕ್ತರಿಗೇ ತೀರ್ಥ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಮುಖ್ಯಸ್ಥರಾದ ಎಸ್.ಎನ್ ಪಾಂಡುರಂಗಾಚಾರ್ ಹಾಗೂ ಅರ್ಚಕ ಅಶೋಕ ಕುಲಕಣಿ೯ ಉಪಸ್ಥಿತರಿದ್ದರು.