ಬೆಳಗಾವಿ.ಹತ್ತಾರು ವರ್ಷಗಳ ಹಿಂದೆ ಸಹೃದಯಿ ಕನ್ನಡಿಗರ ಜೊತೆ ಸೇರಿ ನಾವು ನೆಟ್ಟ ಕನ್ನಡದ ಪುಟ್ಟ ಸಸಿಯೊಂದು ಇಂದು ದೂರದ ಯುರೋಪ ಖಂಡದಲ್ಲಿ, ಜರ್ಮನ್ ರಂತಹ ಭಾಷಾಭಿಮಾನಿಗಳ ನೆಲದಲ್ಲಿ ಹೆಮ್ಮರವಾಗಿ ಬೆಳೆದಿದೆ.
ಅಂತಹ ಸಹೃದಯಿ ಸ್ನೇಹಿತರೆಲ್ಲ ಪ್ರತಿವರ್ಷ ತಪ್ಪದೇ ವಿಜೃಂಭಣೆಯಿಂದ ಆಚರಿಸುತ್ತ ಬರುತ್ತಿರುವ ಕನ್ನಡ ರಾಜ್ಯೋತ್ಸವದಲ್ಲಿ ಪ್ರತಿ ವರ್ಷ ಅಲ್ಲೇ ಹುಟ್ಟಿ, ಓದಿ ಬೆಳೆಯುತ್ತಿರುವ ನಮ್ಮ ಕನ್ನಡದವರ ಮಕ್ಕಳು ಒಂದಿಲ್ಲೊಂದು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ನನ್ನ ಸ್ನೇಹಿತ ಶ್ರೀಮತಿ ಅರುಣಾ ಹಾಗು ಭಾರ್ಗವ ದಂಪತಿಗಳ ಇಬ್ಬರೂ ಮಕ್ಕಳು ಅರ್ಜುನ-ಬಬ್ರುವಾಹನರಾಗಿ ವೇದಿಕೆಯನ್ನು ಅಲಂಕರಿಸಿದ ಪರಿ ಇದು.

ಸಾಗರದಾಚೆ ಬದುಕು ಕಟ್ಟಿಕೊಂಡು ಬಾಳುತ್ತಿರುವ ಪ್ರತಿಯೊಬ್ಬ ಕನ್ನಡಿಗನೂ ತನ್ನ ನೆಲ ಜಲ ಸಂಸ್ಕೃತಿಯ ಬಗ್ಗೆ ಜಾಗೃತನಾಗಿದ್ದುಕೊಂಡು ಅಲ್ಲಿಯೂ ನಮ್ಮ ಹಿರಿಮೆಯನ್ನು ಸಾರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಅವರಿರುವ ದೇಶಗಳಲ್ಲಿ ನೆರೆ ಹೊರೆಯ ಸಾಮಾಜಿಕ ವ್ಯವಸ್ಥೆ, ಭಾಷೆ, ಸಂಸ್ಕೃತಿ ಬೇರೆ ಬೇರೆಯಾಗಿದ್ದರೂ ಆ ಅನಾನುಕೂಲತೆಗಳ ನಡುವೆಯೂ ಕನ್ನಡವನ್ನು ಅರಿತು, ಕಲಿತು ಕಲೆಯಾಗಿ ಪ್ರದರ್ಶಿಸುತ್ತಿರುವ ಮಕ್ಕಳಿಗೂ, ಕನ್ನಡದ ಜೊತೆ ಜೊತೆಗೆ ನಮ್ಮ ದೇಶದ ಹಿರಿಮೆ ಹಾಗು ಕೀರ್ತಿಯನ್ನು ಜಗತ್ತಿನಾದ್ಯಂತ ಬೆಳಗಿಸುತ್ತಿರುವ ಸಕಲ ಕನ್ನಡಿಗ ಭಾರತೀಯರಿಗೂ ಹೃತ್ಪೂರ್ವಕ ನಮನಗಳು.
ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಹರ್ಷ ಬಿರೂರು, ರಾಘವೇಂದ್ರ ನಾಯ್ಕ, ಹೇಮಂತ್ ಮೇಧ, ಜಗದೀಶ ಶೆಟ್ಟಿ, ಶ್ರೀನಿವಾಸ ಮೂರ್ತಿ, ಕೃಷ್ಣ ಕುಮಾರ, ಭಾರ್ಗವ ಕಾಕಲೂರು ಹಾಗು ಶ್ರೀಮತಿ ನಾಜಿಯಾ ಶೇಖ, ಶ್ರೀಮತಿ ಹೇಮಾ ವಸಂತ ತಂಡಕ್ಕೆ ಅಭಿನಂದನೆಗಳು.
ಈ ನಮ್ಮ ತಂಡ ಕಳೆದ ಹತ್ತು ವರ್ಷಗಳಿಂದ ಜರ್ಮನಿಯಲ್ಲಿ ನಡೆಸುತ್ತಿರುವ ಕನ್ನಡ ಶಾಲೆಯೂ ನಮ್ಮ ಸಾಧನೆಯ ಮುಕುಟವಾಗಿ ಕಂಗೊಳಿಸುತ್ತಿದೆ. ಸುಮಾರು 40 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ಸಂಘತಿ ಇವರಿಗೊಂದು ಹ್ಯಾಟ್ಸಪ್ ಹೇಳಿದ್ದಾರೆ ಮಹಾಂತೇಶ ವಕ್ಕುಂದ ಸಂಸ್ಥಾಪಕರು ಹಾಗೂ ಸದಸ್ಯರು ಹ್ಯಾಂಬರ್ಗ ಕನ್ನಡ ಮಿತ್ರರು
ಹ್ಯಾಂಬರ್ಗ- ಜರ್ಮನಿ.


