ಮೂಡಲಗಿ: ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸೋಮವಾರದಂದು ತಾಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಕನಕದಾಸರ ಕುರಿತು ವಿದ್ಯಾರ್ಥಿಗಳಾದ ಶ್ವೇತಾ ಜಾಧವ ಮತ್ತು ಹರೀಶ್.ಎಚ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎನ್.ಎಸ್ ಎಸ್. ಅಧಿಕಾರಿಗಳಾದ ಡಾ. ರಾಘವೇಂದ್ರ ಕೆ.ಎಸ್ , ಸಹಾಯಕ ಪ್ರಾಧ್ಯಪಕರುಗಳಾದ ಡಾ. ಪ್ರತೀಕ್ಷಾ, ಹಣಮಂತರಾವ್ ಜೋಗನ ಸೇರಿದಂತೆ ಭೋದಕ ಸಿಬ್ಬಂದಿ, ಆಡಳಿತ ವರ್ಗ ದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥನೆಗೀತೆ ಹಾಡಿದರು, ಶ್ರೀಧರ ಮಾವಿನಮರದ ನಿರೂಪಿಸಿದರು, ಸಿದ್ದರೂಢ ಬಡಿಗೇರ ಸ್ವಾಗತಿಸಿದರು, ಸವಿತಾ. ಸಿ. ವಂದಿಸಿದರು