ರಾಯಭಾಗ: ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಪ್ರತಿವರ್ಷದಂತೆ ಈ ವರ್ಷವು ಜೋಡು ಲಕ್ಷ್ಮಿ ದೇವರ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು. ಬೆಳಗಿನ ಜಾವ ದೇವಿಗೆ ಪಂಚಾಮೃತಅಭಿಷೇಕ ಉಡಿ ತುಂಬುವ ಕಾರ್ಯಕ್ರಮ ಕುಂಭಮೇಳ ಸಾವಿರಾರು ಜನರಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.
ಸಂಜೆ ಸಂಸ್ಕೃತಿಕ ಕಾರ್ಯಕ್ರಮ ಜರಗಿದವು. ಈ ವೇಳೆ ಅಶೋಕ ಕಾಟೆ, ಪೋಪಟ ಕೂಗೆ, ಸುಭಾಷ ಮಂಗಸುಳೆ, ಸುಭಾಷ ಹಂಜೆ, ಆದಗೊಂಡ ಪಾಟೀಲ, ಜಿನ್ನಪ್ಪ ಚಂಪು, ಹೊನಗೌಡ ಪಾಟೀಲ, ಸತ್ಯಪ್ಪ ಚಂಪು, ಸುರೇಶ ಕಾಟೆ, ಕಲಗೌಡ ಪಾಟೀಲ, ಈರಗೌಡ ಪಾಟೀಲ ಅನೇಕ ಭಕ್ತರು ಮಹಿಳೆಯರು ದರ್ಶನ ಪಡೆದು ದೇವಿ ಆಶೀರ್ವಾದ ಪಡೆದರು.