ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸುವುದು ನಮ್ಮೆಲ್ಲರ ಹೆಮ್ಮೆ : ಕಿರಣ ಸತ್ತಿಗೇರಿ

Sandeep Malannavar
ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸುವುದು ನಮ್ಮೆಲ್ಲರ ಹೆಮ್ಮೆ : ಕಿರಣ ಸತ್ತಿಗೇರಿ
filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:null; module: photo;hw-remosaic: false;touch: (0.5440476, 0.66958356);sceneMode: 12582912;cct_value: 0;AI_Scene: (-1, -1);aec_lux: 108.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36;
WhatsApp Group Join Now
Telegram Group Join Now

ಮಹಾಲಿಂಗಪುರ : ಭೀಮಾ ಕೋರೆಗಾಂವ್ ಸಂಗ್ರಾಮದ ೨೦೮ ನೇ ವಿಜಯೋತ್ಸವನ್ನು ಆಚರಿಸುವುದು ನಮ್ಮೆಲ್ಲರ ಹೆಮ್ಮೆಯ ಸ್ವಾಭಿಮಾನದ ಪ್ರತೀಕವಾಗಿದೆ. ಎಂದು ನಗರ ಠಾಣೆಯ ಪಿ.ಎಸ್.ಐ ಕಿರಣ ಸತ್ತಿಗೇರಿ ಹೇಳಿದರು.
ಅವರು ನಗರದ ವಿವಿಧ ದಲಿತ್ ಸಂಘನೆಗಳು ಸೇರಿ ಅಂಬೇಡ್ಕರ್ ಸರ್ಕಲನಲ್ಲಿ ಆಯೋಜಿಸಿದ ೨೦೮ ನೇ ಕೊರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅಂಬೇಡ್ಕರರವರ ವಿರಾಜ್ಯಮಾನ ಪ್ರತಿಮೆಗೆ ಪು?ರ್ಚನೆ ಮಾಡಿ ಮಾತನಾಡಿ ಬ್ರಿಟಿ? ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಜನವರಿ ೧, ೧೮೧೮ ರಲ್ಲಿ ಐತಿಹಾಸಿಕ ಯುದ್ದ ನಡೆಯಿತು. ಈ ವೇಳೆ ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನ ಅದು ಎಂದರು.
ನಂತರ ಸಮಾಜದ ಮುಖಂಡರಾದ ಭೀಮಶಿ ಕಾಳ್ಯಾಗೋಳ,ಸಿದ್ದೇಶ್ವರ ಸೋನಾರ, ರವಿ ಹಲಸಪ್ಪಗೋಳ ಮಾತನಾಡಿ ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ಧಕ್ಕೆ ಇಳಿದ ಬ್ರಿಟಿ?ರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಈ ಯುದ್ಧವೇ ಪೇಶ್ವೆಗಳ ಆಡಳಿತದ ಅಂತ್ಯಕ್ಕೆ ಕಾರಣವಾಯಿತು. ಮಹಾರಾ?ದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ನೆರವಾದ ಸಂದರ್ಭ. ಈ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ (ವಿಜಯ ಸ್ಥಂಭ) ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. ಇಪ್ಪತ್ತೆರಡು ಮಹರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರ ಕಥೆಗೆ ಸಾಕ್ಷಿಯಂತೆ ಇದೆ ಎಂದರು.
ಈ ಸಂದರ್ಭದಲ್ಲಿ ಮುಕನಾಯಕ ಪತ್ರಿಕೆಯ ಶತಮಾನೋತ್ಸವ ಅಂಗವಾಗಿ ಸ್ಥಳೀಯ ಪತ್ರಕರ್ತರನ್ನು ಮತ್ತು ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಿದರು.
ಮುಖ್ಯಾಧಿಕಾರಿ ನಾಮದೇವ ಲಮಾಣಿ, ಮುಖಂಡರಾದ ಶೇಖರ ಅಂಗಡಿ,ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ರಮೇಶ ಕೆಸರಗೋಪ್ಪ, ಭೀಮಶಿ ಗೌಂಡಿ,ಬಂದು ಪಕಾಲಿ, ಶಿವಬಸು ಗೌಂಡಿ, ಅರ್ಜುನ ದೊಡಮನಿ, ಸುರೇಶ ಉತ್ತೂರ, ಲಕ್ಷ್ಮಣ ಮಾಂಗ,ಪರಶುರಾಮ ಮೇತ್ರಿ, ಆನಂದ ಮಾದರ, ಪ್ರಶಾಂತ ಮುಖ್ಯನ್ನವರ, ಸಿದ್ದೇಶ್ವರ ಸೋನಾರ, ಬಸವರಾಜ ಮಾವಿನಹಿಂಡಿ, ದಾನೇಶ ಮೇತ್ರಿ, ಪುಂಡಲೀಕ ಮಿಲ್ಟ್ರೀ,ಸಾಗರ ಹಲಸಪ್ಪಗೋಳ, ಶ್ರೀನಿವಾಸ, ಕಿರಣ, ವಿಶಾಲ,ಕಾರ್ತಿಕ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಬೈಕ್ ರಾಲಿ : ವಿಜಯ ದಿವಸದ ಅಂಗವಾಗಿ ನೂರಾರು ಯುವಕರು ನಗರದ ಪ್ರಮುಖ ಬಿದಿಗಳಲ್ಲಿ ಬೈಕ್ ರಾಲಿ ಮಾಡಿ ವಿಜಯ್ ದುಂದು ಮೊಳಗಿಸಿದರು.ಸಾಯಂಕಾಲ ಸಕಲ ವಾದ್ಯಳೊಂದಿಗೆ ನಗರದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿದರು.

WhatsApp Group Join Now
Telegram Group Join Now
Share This Article