ಬಳ್ಳಾರಿ18.: ಶ್ರೀ ವಾಸವಿ ವಿದ್ಯಾಲಯದಲ್ಲಿ ಶ್ರೀ ವಾಸವಿ ಎಜುಕೇಶನ್ ಟ್ರಸ್ಟನ ೪೩ನೇ ವಾರ್ಷಿಕೋತ್ಸವ ಮತ್ತು ದೀಪಾವಳಿ ಹಬ್ಬವನ್ನು ಭವ್ಯವಾಗಿ ಆಚರಿಸಲಾಯಿತು
ಕಾರ್ಯಕ್ರಮವು ಮಧುರವಾದ ಪ್ರಾರ್ಥನಾ ಗೀತೆಯಿಂದ ಆರಂಭಗೊAಡಿತು. ಶ್ರೀ ವಾಸವಿ ಮಾತೆಯ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ಮಾತೆಯ ಆಶೀರ್ವಾದವನ್ನು ಕೋರಿದರು.
ಮುಖ್ಯ ಅತಿಥಿ ಕೆ.ಬಿ.ಸಂಜೀವ್ ಪ್ರಸಾದ್ರ ಮಾತನಾಡಿ, ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ನ ಸ್ಥಾಪನೆಯ ಹಿನ್ನೆಲೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆ, ಹಾಗೂ ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂಸ್ಥೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ನಾಲ್ಕು ದಶಕಗಳಿಂದ ಗುಣಮಟ್ಟದ ಶಿಕ್ಷಣ, ಶಿಸ್ತಿನ ಸಂಸ್ಕೃತಿ ಮತ್ತು ಸಾಮಾಜಿಕ ಜವಾಬ್ದಾರಿಯುಳ್ಳ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಜಿತೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿಯಾದ ಕು. ಇಂದ್ರಜಾ “ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ನ ವಾರ್ಷಿಕೋತ್ಸವ ದಿನದ ಮಹತ್ವ” ಕುರಿತು ಮಾತನಾಡಿ, ಟ್ರಸ್ಟ್ನ ಪ್ರಾರಂಭ, ಉದ್ದೇಶ, ಮತ್ತು ಮಾರ್ಗದರ್ಶಕ ತತ್ವಗಳು “ಸೇವೆಯೇ ಧರ್ಮ” ಎಂಬ ಸಂದೇಶವನ್ನು ಮತ್ತು ವಿದ್ಯೆಯ ಬೆಳಕಿನಿಂದ ಸಮಾಜದ ಅಂಧಕಾರವನ್ನು ದೂರಮಾಡುವ ಸಂಸ್ಥೆ ನಮ್ಮದು ಎಂದು ವೇದಿಕೆಗೆ ತಿಳಿಸಿದರು.
೮ನೇ ತರಗತಿಯ ವಿದ್ಯಾರ್ಥಿನಿಯರಾದ ಕು. ಕೀರ್ತಿ ಮತ್ತು ಕು. ಯಶಸ್ವಿನಿ “ದೀಪಾವಳಿ ಹಬ್ಬದ ವೈಜ್ಞಾನಿಕ ಮತ್ತು ಸಾಂಸ್ಕ್ರತಿಕ ಹಿನ್ನೆಲೆ” ಕುರಿತು ವಿಶ್ಲೇಷಣಾತ್ಮಕ ಭಾಷಣ ನೀಡಿ, ದೀಪಾವಳಿ ಕೇವಲ ಹಬ್ಬವಲ್ಲ, ಅದು ಅಂಧಕಾರದ ಮೇಲೆ ಬೆಳಕಿನ ಜಯ, ದೃಷ್ಟತನದ ಮೇಲಿನ ವಿಜಯ ಎಂಬ ನೈತಿಕ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು. ಜೊತೆಗೆ ದೀಪಾವಳಿಯ ಪರಿಸರ ಸ್ನೇಹಿ ಆಚರಣೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮವು ಭಕ್ತಿ, ಸಂಸ್ಕೃತಿ ಮತ್ತು ಶಿಕ್ಷಣದ ಮೌಲ್ಯಗಳನ್ನು ಒಗ್ಗೂಡಿಸಿದ ಸಾರ್ಥಕ ಸಂಭ್ರಮವಾಗಿ, ಎಲ್ಲರ ಮನದಲ್ಲಿ ಸಂತೋಷ ಮತ್ತು ಪ್ರೇರಣೆಯ ಹಬ್ಬವಾಗಿ ಉಳಿಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಟ್ಟ ಕೃಷ್ಣಕುಮಾರ್, ಮಾಜಿ ಅಧ್ಯಕ್ಷರಾದ ಅಗಡಿ ಗವಿಸಿದ್ದೇಶ್ವರ ಪ್ರಸಾದ್, ಅತಿಥಿಗಳಾದ ಕೆ ಬಿ ಸಂಜೀವ್ ಪ್ರಸಾದ್,ಉಪಾಧ್ಯಕ್ಷರಾದ ಜಿತೇಂದಪ್ರಸಾದ್, ಕಾರ್ಯದರ್ಶಿಗಳಾದ ಪಿಎನ್ ಸುರೇಶ್, ಖಜಾಂಚಿಗಳಾದ ಬಿಂಗಿ ಸುರೇಶ್,ವಿಶೇಷ ಆಹ್ವಾನಿತರಾದ ರಾಮದುರ್ಗಂ ಸುರೇಶ, ಮುಖ್ಯ ಗುರುಗಳಾದ ಶ್ರೀ ವೀರೇಶ್ ಯು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಯಶಸ್ವಿಯಾಗಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ನೀಡಲಾಯಿತು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ದೀಪಾವಳಿಯ ಉಡುಗೊರೆಯಾಗಿ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.