ಅಥಣಿಃ ಕೆ.ಎಲ್.ಇ. ಸಂಸ್ಥೆಯ ಸಿ.ಬಿ.ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ದಿನ ಪಾಧರ್ ಡೆ ( ತಂದೆ ದಿನಾಚಾರಣೆಯನ್ನು ಆಚರಿಸಿದರು.
ಕಾರ್ಯಕ್ರಮವನ್ನು ಡಾ.ಮಲ್ಲಿಕಾರ್ಜುನ ಹಂಜಿ ಉದ್ಘಾಟಿಸಿ ಮಾತನಾಡುತ್ತ ಪ್ರತಿ ಮಗುವಿನ ಬೆಳವಣಿಗೆ ಪ್ರಗತಿಯಲ್ಲಿ ತಂದೆಯ ಪಾತ್ರ ದೊಡ್ಡದಿರುತ್ತದೆ. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿಯಂತೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತ ಬೆಳೆಸಬೇಕು ಎಂದು ಹೇಳಿದರು.
ತಂದೆ ಯಾವಾಗಲೂ ತನ್ನ ಮಗು ತನಗಿಂತ ಎತ್ತರವಾಗಿ ಸಮಾಜದಲ್ಲಿ ಬೆಳೆಬೇಕು ಎಂಬ ದೊಡ್ಡ ಕನಸು ಕಂಡಿರುತ್ತಾರೆ.ಅವರು ಯಾವಾಗಲೂ ತಮ್ಮ ಸುಖ ಸಂತೋಷಕ್ಕೆ ಮಹತ್ವ ನೀಡದೆ ಮಗುವಿನ ಸಂತೋಷಕ್ಕೆ ಸುಖಕ್ಕೆ ಮಹತ್ವ ನೀಡಿರುತ್ತಾರೆ. ಇದನ್ನು ಪ್ರತಿಯೋಬ್ಬ ಮಕ್ಕಳು ಅರಿತುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಜಗದೀಶ ಹವಾಲ್ದಾರ ವಹಿಸಿ ಮಾತನಾಡುತ್ತ ಉತ್ಸಾಹ ದಿಂದ ಪಾಲಕರು ಆಯೋಜಿಸಿದ ಸ್ಪರ್ಧೆಗಳಲಿ ್ಲ ಭಾಗವಹಿಸಿದ್ದಾರೆ. ಅವರೆಲ್ಲ ತಮ್ಮ ಹೆಸರುಗಳನ್ನು ದಾಖಲಿಸುವಾಗ ತಮ್ಮ ಬಾಲ್ಯದ ನೆನಪುಗಳನ್ನು ಮಾಡಿಕೊಂಡರು. ಬಹಳಷ್ಟು ಸ್ಪರ್ಧೆಗಳಲ್ಲಿ ತಂದೆ ಮಕ್ಕಳು ಜೊತೆಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಷೇಶವಾಗಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿ ಡಾ.ದಶರಥ ಮದಭಾಂವಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ನಿರೂಪನೆಯನ್ನು ರೋಹಿತ ಕಂಬಾರ ಸ್ವಾಗತ ಕ್ರೀಯಾ ರಾಠೋಡ ವಂದನಾರ್ಪನೆ ಅನನ್ಯಾ ಸಂಕ್ರಟ್ಟಿ ಮಾಡಿದರು. ಪಾಲರಿಗೆ ಮತ್ತು ಪಾಲಕರಿಗೆ ಮತ್ತು ಮಕ್ಕಳಿಗೆ ವಿಷೇಶವಾದ ಕ್ರೀಡಾ ಮತ್ತು ಸಂಸ್ಕçತಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.