ಬಳ್ಳಾರಿ ಅ 18 : ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢತೆಯನ್ನು ಪಡೆದುಕೊಳ್ಳಬಹುದು ಎಂದು ಪೊಲೀಸ್ ಜಿಮ್ಕಾನ ಖಜಾಂಚಿ ಕಾಂದ್ರ ಸತೀಶ್ ಕುಮಾರ್ ತಿಳಿಸಿದರು.
ಅವರು ಇತ್ತೀಚೆಗೆ ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ನಗರದ ಜಿಮ್ಕಾನದಲ್ಲಿ ನಡೆಸಲಾದ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ನೀಡಿ ಮಾತನಾಡಿದರು.
ಅಕ್ಟೋಬರ್ 10 ರಿಂದ 18ರವರೆಗೆ ನಡೆದ ಅಂಡರ್ 16 ಇಯರ್ಸ್ ಬಾಯ್ಸ್ ಅಂಡ್ ಗರ್ಲ್ಸ್ ಟೆನ್ನಿಸ್ ಪಂದ್ಯಾವಳಿಯಲ್ಲಿ 16 ವರ್ಷದ ಒಳಗಿನ ಪುರುಷರ ಸಿಂಗಲ್ ನಲ್ಲಿ ಶ್ರೇಯಾಂತ್ ಎಂ ವಿಜೇತರಾದರು ರನ್ನರ್ ಆಗಿ ತರುಣ್ ಎಚ್ ಆಯ್ಕೆಯಾದರು.
ಮತ್ತು 16 ವರ್ಷದೊಳಗಿನ ಪುರುಷರ ಡಬಲ್ಸ್ ನಲ್ಲಿ ಭಿನ್ನರಾಗಿ ಶ್ರೇಯಾಂಕ ಕೆಂಪೇಗೌಡ ಮತ್ತು ರನ್ನರಾಗಿ ತರುಣ್ ಎಚ್ ಮತ್ತು ಅರುಣ್ ಆರ್ ಇಸೂರು ಆಯ್ಕೆಯಾದರು. 16 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ನಲ್ಲಿ ವಿನ್ನರ್ ಆಗಿ ಆಯಿಲಿನ್ ಮರಿಯಂ ಸಿ ಆಯ್ಕೆಯಾದರೆ, ರನ್ನರ್ ಆಗಿ ಲೇಖ್ಯ ಶ್ರೀ ಆಯ್ಕೆಯಾದರು. ಮತ್ತು ಬಾಲಕಿಯರ ಡಬಲ್ಸ್ ನಲ್ಲಿ ಸಾನಿಧ್ಯ ಮತ್ತು ಆಯಿ ಲಿನ್ ಎಂ ಸಿ ರನ್ನರಾಗಿ ಪ್ರೀತಿ ಮತ್ತು ಖುಷಿ ಆಯ್ಕೆಯಾದರು ಇವರಿಗೆ ಪ್ರಶಸ್ತಿಗಳನ್ನು ಜಿಮ್ಕಾನ ಖಜಾಂಚಿ ಸತೀಶ್ ಕುಮಾರ್ ವಿತರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಜಿಮ್ಕಾನ ಕಾರ್ಯದರ್ಶಿ ಶಿವ ನಾಯಕ, ಮಾಜಿ ಅಧ್ಯಕ್ಷರಾದ ಜಿತೇಂದ್ರ ಕೆ, ಟೆನ್ನಿಸ್ ಕೋಚ್ಗಳಾದ ಸುರೇಶ್, ಶೇಖರ್ ಉಪಸ್ಥಿತರಿದ್ದರು.