ಸಿರಿ ಡಯಾಗ್ನಸ್ಟಿಕ್ ಲ್ಯಾಬ್ ನ ಉಚಿತ ತಪಾಸಣೆಯಿಂದ 11 ಜನರಲ್ಲಿನ ಕ್ಯಾನ್ಸರ್ ಪತ್ತೆ

Sandeep Malannavar
ಸಿರಿ ಡಯಾಗ್ನಸ್ಟಿಕ್ ಲ್ಯಾಬ್ ನ ಉಚಿತ ತಪಾಸಣೆಯಿಂದ 11 ಜನರಲ್ಲಿನ ಕ್ಯಾನ್ಸರ್ ಪತ್ತೆ
WhatsApp Group Join Now
Telegram Group Join Now
ಬಳ್ಳಾರಿ, ಫೆ.19:..ನಗರದ ಸಿರಿ ಡಯಾಗ್ನಸ್ಟಿಕ್ ಲ್ಯಾಬ್ ನಿಂದ ಕಳೆದ ಒಂದು ವರೆ ತಿಂಗಳಲ್ಲಿ ಬಳ್ಳಾರಿ, ಹೊಸಪೇಟೆ ಮತ್ತು ಗಂಗಾವತಿ ಪ್ರದೇಶಗಳಲ್ಲಿ ನಡೆಸಲಾದ ಉಚಿತ ಗರ್ಭಕೋಶ ಕ್ಯಾನ್ಸರ್ (Cervical Cancer) ತಪಾಸಣಾ ಶಿಬಿರದಲ್ಲಿ 537 ಜನರ ಪರೀಕ್ಷೆ ನಡೆಸಿ ಅವರಲ್ಲಿ 11 ಜನರಿಗೆ ಸೋಂಕು ಇರುವುದನ್ನು ಪತ್ತೆ ಹಚ್ಚಿರುವುದಾಗಿ ಲ್ಯಾಬ್ ನ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ಮಹಿಳೆಯರಲ್ಲಿ ಕಾಣಿಸುವ ಕ್ಯಾನ್ಸರ್ಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಅರಿವಿನ ಕೊರತೆ, ತಪಾಸಣೆ ಸೌಲಭ್ಯಗಳ ಅಭಾವ ಹಾಗೂ ಆರ್ಥಿಕ ಅಡಚಣೆಗಳ ಕಾರಣದಿಂದ ಅನೇಕ ಪ್ರಕರಣಗಳು ಮುಂದುವರೆದು ಕೊನೆ ಹಂತದಲ್ಲಿ ಮಾತ್ರ ಪತ್ತೆಯಾಗುತ್ತಿವೆ.
ಹ್ಯುಮನ್ ಪ್ಯಾಪಿಲೋಮಾ ವೈರಸ್ (HPV) ನ ನಿರಂತರ ಸೋಂಕು ಗರ್ಭಕೋಶ ಕ್ಯಾನ್ಸರ್ನ ಪ್ರಮುಖ ಕಾರಣವಾಗಿದೆ. ಆದರೆ ನಿಯಮಿತ ತಪಾಸಣೆಯ ಮೂಲಕ ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ಹಾಗೂ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ಆಗಿದೆ.
ಇದನ್ನು ಮನಗಂಡು, ಸಿರಿ ಡಯಾಗೋಸ್ಟಿಕ್ ಲ್ಯಾಬ್ ಫೆಬ್ರವರಿ 4,2026 ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ 45 ದಿನಗಳ ಉಚಿತ ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿತು.
ಸಾಮಾನ್ಯವಾಗಿ ಈ ಪರೀಕ್ಷೆಗಳ ವೆಚ್ಚ 1500-22000ರ ನಡುವೆ ಇರುತ್ತದೆ. ವೆಚ್ಚದ ಅಡತಡೆಗಳನ್ನು ನಿವಾರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಜೀವ ರಕ್ಷಕ ತಪಾಸಣೆಯನ್ನು ಪಡೆಯುವಂತೆ ಮಾಡಲಾಯಿತು.
ಸೋಂಕು ಪತ್ತೆಯಾದ ಎಲ್ಲಾ ಮಹಿಳೆಯರು ಯಾವುದೇ ಲಕ್ಷಣಗಳಿಲ್ಲದವರಾಗಿದ್ದರು. ತಪಾಸಣೆ ಇಲ್ಲದಿದ್ದರೆ ಈ ಪ್ರಕರಣಗಳು ಪೂರ್ವಕ್ಯಾನ್ಸರ್ ಅಥವಾ ಕ್ಯಾನ್ಸರ್ ಹಂತಕ್ಕೆ ತಲುಪುವವರೆಗೆ ಪತ್ತೆಯಾಗದೇ ಉಳಿಯಬಹುದಿತ್ತು.
“ಶಿಬಿರದ ವೇಳೆ ಪಾಸಿಟಿವ್ ಎಂದು ಪತ್ತೆಯಾದ ಎಲ್ಲಾ ಮಹಿಳೆಯರಿಗೆ ವೈಯಕ್ತಿಕ ಸಮಾಲೋಚನೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗಿದೆ. ತಜ್ಞರ ಬಳಿ ರೆಫರಲ್, ಹೆಚ್ಚಿನ ತಪಾಸಣೆ, ನಿಯಮಿತ ಫಾಲೋ-ಅಪ್ ಮತ್ತು ತಡೆಗಟ್ಟುವ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ತಪಾಸಣಾ ಶಿಬಿರಗಳು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತಿಳಿಸಿದೆ
WhatsApp Group Join Now
Telegram Group Join Now
Share This Article