ಬಳ್ಳಾರಿ: 31..ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಈಗಾಗಲೇ ಒಂದು ಕೋಟಿಗೂ ಅಧಿಕ ಜನರಿಂದ ಜನ ಅಭಿಪ್ರಾಯ ಸಂಗ್ರಹಿಸಲಾಗಿದೆ.  ನವಂಬರ್ ಒಂದರಿಂದ ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳ ಶಾಸಕರು ವಿಧಾನ ಪರಿಷತ್ ಸದಸ್ಯರು ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಇವರೆಲ್ಲರ ಅಭಿಪ್ರಾಯವನ್ನು ಮತ್ತು ಸಹಿ ಸಂಗ್ರಹಣೆಯನ್ನು ಮಾಡಲಾಗುತ್ತದೆ  ಎಂದು
ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸ್ಥಾಪಕ ನಾಗೇಶ ಗೋಲಶೆಟ್ಟಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಅಭಿಯಾನವನ್ನು ನವಂಬರ್ ಒಂದರಂದು ಪ್ರಾರಂಭಿಸಲಾಗುವುದು ಇಲ್ಲಿಯವರೆಗೆ ಈ ಹೋರಾಟಕ್ಕೆ ಸಹಿಯನ್ನು ನೀಡಿ ಬೆಂಬಲಿಸಿರುವ ಉತ್ತರ ಕರ್ನಾಟಕ ಭಾಗದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು ತಿಳಿಸುತ್ತಿದ್ದೇವೆ. ಉತ್ತರ ಕರ್ನಾಟಕವು ಕರ್ನಾಟಕ ಏಕೀಕರಣ ಆದಾಗಿನಿಂದಲೂ ಇಲ್ಲಿಯವರೆಗೆ ಕೃಷಿ, ನೀರಾವರಿ, ಶಿಕ್ಷಣ, ಸಾಹಿತ್ಯ, ಸಂಗೀತ,  ಕಲೆ, ರಸ್ತೆ, ರೈಲು, ಆರೋಗ್ಯ, ಆಧ್ಯಾತ್ಮ, ರಾಜಕಾರಣ,  ಮಾಧ್ಯಮ ಪತ್ರಿಕೋದ್ಯಮ,  ಚಲನಚಿತ್ರ ಉದ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಾರತಮ್ಯ ಅನ್ಯಾಯ ಮಲತಾಯಿ ಧೋರಣೆಯನ್ನು ಅನುಭವಿಸುತ್ತಾ ಬಂದಿದೆ. ಉತ್ತರ ಕರ್ನಾಟಕವು ಎಲ್ಲಾ ಸಂಪನ್ಮೂಲಗಳನ್ನು ಹೊಂದಿರುವ ಸಂಪತ್ತರಿತ ನಾಡಾಗಿದ.  ಅದರ ಅವುಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲು ಅವಕಾಶಗಳು ಇಲ್ಲ ಮತ್ತು ರಾಜಕೀಯ ಹಿತಾಸಕ್ತಿ ಇಲ್ಲದಾಗಿದೆ ಇದು ರಾಜ್ಯವನ್ನು ಪ್ರತ್ಯೇಕಗೊಳಿಸುವ ನಾಡನ್ನು ಒಡೆಯುವ ನಾಡ ದ್ರೋಹದ ಕೆಲಸ ಅಲ್ಲ ಅಪಾರ್ಥ ಮಾಡಿಕೊಳ್ಳದೆ . ಮತ್ತೊಂದು ಕನ್ನಡ ನಾಡನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕಾಗಿದೆ ಎಂದರು.
ನಮ್ಮ ಭಾಗದ ಯುವಕರು, ವಿದ್ಯಾರ್ಥಿಗಳು ನಿರುದ್ಯೋಗಿಗಳು, ರೈತರು, ಮಹಿಳೆಯರು, ಕಾರ್ಮಿಕರು, ಎಲ್ಲ ವರ್ಗದ ಜನರು ಸುಖ ಸಮೃದ್ಧಿ ನೆಮ್ಮದಿಯಿಂದ ಬದುಕಬೇಕಾದರೆ. ಉತ್ತರ ಕರ್ನಾಟಕವು ಪ್ರತ್ಯೇಕಗೊಂಡು ಹೊಸ ನಾಡು ನಿರ್ಮಾಣವಾಗಬೇಕಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ 15 ಜಿಲ್ಲೆಗಳಾದ 1) ಬೀದರ್,2) ಕಲಬುರ್ಗಿ 3)
ಯಾದಗಿರ್ 4) ವಿಜಯಪುರ 5) ಬಳ್ಳಾರಿ 6) ಬೆಳಗಾವಿ 7) ಬಾಗಲಕೋಟೆ 8) ಕೊಪ್ಪಳ 9) ಗದಗ 10)ಧಾರವಾಡ
11) ಹಾವೇರಿ 12) ಉತ್ತರಕನ್ನಡ 13) ದಾವಣಗೆರೆ 14) ವಿಜಯನಗರ 15) ರಾಯಚೂರು ಹೀಗೆ 15 ಜಿಲ್ಲೆಗಳ ಪ್ರತ್ಯೇಕ ರಾಜ್ಯ ರಚನೆ ಆಗಬೇಕಾಗಿದೆ.  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬುದು ಈ ಭಾಗದ ಸಾಹಿತಿಗಳು ಸಾಮಾಜಿಕ ಚಿಂತಕರು ಹೋರಾಟಗಾರರು ಎಲ್ಲ ವರ್ಗದ ಜನರ ಅಭಿಪ್ರಾಯವಾಗಿದೆ ಆದರೆ ಇದಕ್ಕೆ ರಾಜಕೀಯ ಇತಿಹಾಸಕ್ತಿಯು ಬೇಕಾಗಿದ್ದು ಈ ಭಾಗದ ಎಲ್ಲಾ ವರ್ಗದ ರಾಜಕಾರಣಿಗಳು ಜನಪ್ರತಿನಿಧಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ನಿಶ್ಚಿತ ಅಭಿಪ್ರಾಯವನ್ನು ನೀಡಿ ಸಹಿ ಸಂಗ್ರಹಣೆಗೆ ಸಹಕಾರ ನೀಡಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.
ವಿಧಾನಸಭೆಯಲ್ಲಿ ವಿಧಾನಪರಿಷತ್ತಿನಲ್ಲಿ ಮತ್ತು ಸಂಸತ್ತಿನಲ್ಲಿ ಈ ಧ್ವನಿಯನ್ನು ಮೊಳಗಿಸಿ ಹೊಸ ಕನ್ನಡ ನಾಡನ್ನು ನಿರ್ಮಾಣ ಮಾಡಿ ಈ ಭಾಗದ ಜನರ ನೆಮ್ಮದಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ  ಅಖಿಲ ಭಾರತ ಜನಗಣ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ನಗರಸಭಾ ಸದಸ್ಯ ಗಂಗಿರೆಡ್ಡಿ ಎನ್,  ವಿಜಯಕುಮಾರ ಗಂಜಿ ಇದ್ದರು.

 
		 
		 
		
