ಮೂಡಲಗಿ 22: ಕಾಂಗ್ರೇಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ ಪರ ಮತಯಾಚನೆ ಸಲುವಾಗಿ ಏ.23ರಂದು ಅರಭಾವಿ ಮತಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಮಾವೇಶ ನಡೆಯಲಿದೆ.

ಕಾಂಗ್ರೇಸ್ ಮುಖಂಡ ಅನೀಲಕುಮಾರ ದಳವಾಯಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ದುರದುಂಡಿ, ರಾಜಾಪೂರ, ಶಿವಾಪೂರ, ಮುನ್ಯಾಳ, ಧರ್ಮಟ್ಟಿ, ಸುಣಧೋಳಿ ಗ್ರಾಮಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಜರುಗುವುದು. ನಂತರ ಸಂಜೆ ಮೂಡಲಗಿ ಪಟ್ಟಣದಲ್ಲಿ ಬೃಹತ್ ರ‍್ಯಾಲಿ ಮೂಲಕ ಬಸವರಂಗ ಮಂಟಪದವರೆಗೂ ತಲುಪಿ, ಮಂಟಪದ ವೇದಿಕೆಯಲ್ಲಿ ಬೃಹತ್ ಸಮಾವೇಶ ಜರುಗುವುದು ಎಂದು ಅವರು ಹೇಳಿದರು.

ಈಗಾಗಲೇ ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ಪ್ರಾರಂಭಿಸಲಾಗಿದ್ದು, ೨ನೇ ಹಂತದ ಪ್ರಚಾರ ಕಾರ್ಯದಲ್ಲಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಶಾಸಕ ಲಕ್ಷ್ಮಣ ಸವದಿ ಅವರು ಭಾಗವಹಿಸಲಿದ್ದಾರೆ. ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ ಪರ ಮತಯಾಚನೆ ಮಾಡಲಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಕಾಂಗ್ರೇಸ್ ಮುಖಂಡರಾದ ಎಸ್.ಎಸ್. ಸೋನವಾಲ್ಕರ, ವಿ.ಪಿ. ನಾಯಕ್, ಬಿ.ಬಿ. ಹಂದಿಗುಂದ, ರಮೇಶ ಉಟಗಿ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ಜನತೆಗೆ ಕೊಟ್ಟತಂಹ ಮಾತಿನಂತೆ ೫ ಗ್ಯಾರಂಟಿಗಳನ್ನು ಈಡೇರಿಸಿ ಕೊಟ್ಟತಂಹ ಮಾತು ಉಳಿಸಿಕೊಂಡಿದ್ದು, ಕೇಂದ್ರದಲ್ಲಿಯೂ ಸಹ ೨೫ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಆದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಆಗುವುದು ಖಚಿತ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೇಸ ಮುಖಂಡರಾದ ಬಿ ಕೆ ಶಿವಕುಮಾರ, ಸುಭಾಷ ಪೂಜೇರಿ, ಕೆ ಟಿ ಗಾಣಿಗೇರ, ಸಲೀಂ ಇಮ್ಮಾದಾರ, ರವಿ ಮೂಡಲಗಿ, ಸುರೇಶ ಮಗದುಮ್ಮ, ಸಂಗಮೇಶ ಕೌಜಲಗಿ, ಹಾಗೂ ಕಾಂಗ್ರೇಸ ಕಾರ್ಯಕರ್ತರು ಉಪಸ್ಥಿತರಿದ್ದರು.