ಫೆಬ್ರವರಿ 17 ಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ

Ravi Talawar
ಫೆಬ್ರವರಿ 17 ಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
WhatsApp Group Join Now
Telegram Group Join Now

ಚಾಮರಾಜನಗರ, ಫೆಬ್ರವರಿ 7: ಹಿಂದುಳಿದ ಜಿಲ್ಲೆ, ಅಭಿವೃದ್ಧಿ ಕಾಣದ ಜಿಲ್ಲೆ ಎಂಬ ಹಣೆ ಪಟ್ಟಿ ಪಡೆದ ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಿಗ್ ಗಿಫ್ಟ್ ಕೊಡಲು ಮುಂದಾಗಿದೆ. 1997 ರಲ್ಲಿ ಅಖಂಡ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟ ಬಳಿಕ ಚಾಮರಾಜನಗರ ಜಿಲ್ಲೆ ಅಬಿವೃದ್ಧಿ ಕುಂಟಿತವಾಯ್ತು. ಶೇಕಡ 48 ಕಾಡನ್ನೆ ಹೊಂದಿರುವ ಈ ಜಿಲ್ಲೆ ಕೇರಳ ಹಾಗೂ ಹಾಗೂ ತಮಿಳುನಾಡಿನ ಗಡಿಯನ್ನು ಹಂಚಿಕೊಂಡಿದೆ. ಟೈಗರ್ ರಿಸರ್ವ್ ಫಾರೆಸ್ಟ್ ಹೊಂದಿರುವ ಬಿಆರ್​​ಟಿ ಹಾಗೂ ಬಂಡೀಪುರ ಇಡೀ ದೇಶದ ಚಿತ್ತವನ್ನು ತನ್ನತ್ತ ಸೆಳೆಯುವುದರ ಜೊತೆಗೆ ಅಪಾರ ಪ್ರಾಣಿ ವನ್ಯ ಮೃಗ ಹಾಗೂ ಸಸ್ಯಕಾಶಿಯನ್ನು ಹೊಂದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದಮೇಲೆ 20ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಈ ಮೌಢ್ಯ ತೊಲಗಿಸುವ ಪ್ರಯತ್ನ ಕೂಡ ಪಟ್ಟಿದ್ದಾರೆ. ಅಷ್ಟೇ ಯಾಕೆ, ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆಸುವ ಮೂಲಕ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಲು ಮುಂದಾಗಿದ್ದಾರೆ. ಈ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗ, ಆಕ್ಸಿಜನ್ ದುರಂತ ಸೇರಿದಂತೆ ಹತ್ತು ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ.

WhatsApp Group Join Now
Telegram Group Join Now
Share This Article