ಉಗಾರ ಪುರಸಭೆ ವಾರ್ಡ್ ನಂ-15 ಕ್ಕೆ ಉಪ ಚುನಾವಣೆ ದಿನಾಂಕ ನಿಗದಿ:ತಹಶಿಲ್ದಾರ ರವೀಂದ್ರ ಹಾದಿಮನಿ

Pratibha Boi
ಉಗಾರ ಪುರಸಭೆ ವಾರ್ಡ್ ನಂ-15 ಕ್ಕೆ ಉಪ ಚುನಾವಣೆ ದಿನಾಂಕ ನಿಗದಿ:ತಹಶಿಲ್ದಾರ ರವೀಂದ್ರ ಹಾದಿಮನಿ
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:null; bokeh:0; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (0, 0);aec_lux: 290.37924;aec_lux_index: 0;albedo: ;confidence: ;motionLevel: 0;weatherinfo: null;temperature: 39;zeissColor: bright;
WhatsApp Group Join Now
Telegram Group Join Now
ಕಾಗವಾಡ:ತಾಲ್ಲೂಕಿನ ಉಗಾರ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ -15 ರಲ್ಲಿ ವಾರ್ಡ್ ಸದಸ್ಯರಾಗಿದ್ದ ಸುಜಯ್ ರಾಜಾರಾಮ್ ಫರಾಕಟ್ಟೆ ಅವರು ದಿನಾಂಕ 16-11-2024 ರಂದು ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣಾ ದಿನಾಂಕ ನಿಗದಿಯಾಗಿದೆ.
ಉಗಾರ ಪುರಸಭೆ ವಾರ್ಡ್ ನಂ-15 ಕ್ಕೆ ನಾಮಪತ್ರ ಸಲ್ಲಿಸಲು ದಿನಾಂಕ 29-07-2025 ಮಂಗಳವಾರ,ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 05-08-2025 ಮಂಗಳವಾರ, ನಾಮಪತ್ರ ಪರಿಶೀಲಿಸುವ ದಿನಾಂಕ 06-08-2025 ಬುಧವಾರ,ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ 08-08-2025 ಶುಕ್ರವಾರ, ಮತದಾನ ಅವಶ್ಯಕವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ 17-08-2025 ಭಾನುವಾರ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ ಹಾಗೂ ಮರು ಮತದಾನ ಅವಶ್ಯವಿದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ 19-08-2025 ಮಂಗಳವಾರ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಯವರೆಗೆ ,ಮತಗಳ ಎಣಿಕೆಯ ದಿನಾಂಕ ಮತ್ತು ದಿನ 20-08-2025 ಬುಧವಾರ (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ) ನಡೆಸಲಾಗುತ್ತದೆ.
ಈ ಉಪ ಚುನಾವಣೆಗೆ ಸದಾಚಾರ ಸಂಹಿತೆಯು ದಿನಾಂಕ 29/07/2025 ರಿಂದ ದಿನಾಂಕ 20/08/2025 ರವರೆಗೆ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಮತ್ತು ಉಪಚುನಾವಣೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕ ಮಾಡಲಾಗಿದೆ.
ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ನೀತಿ ಸಂಹಿತೆ ಬಗ್ಗೆ ಚರ್ಚಿಸಲಾಯಿತು ಎಂದು ತಹಶಿಲ್ದಾರ ರವೀಂದ್ರ ಹಾದಿಮನಿ ತಿಳಿಸಿದರು.
WhatsApp Group Join Now
Telegram Group Join Now
Share This Article