ಬಳ್ಳಾರಿ, ಮೇ. 21:ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಪ್ರತೀ ವರ್ಷ ನೀಡುವ `ಉದ್ಯಮಿ ರತ್ನ-2024’ರ ಪ್ರಶಸ್ತಿಯು ಬಳ್ಳಾರಿಯ ಹ್ಯಾಲೀಸ್ ಬ್ಲ್ಯೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ವಿಶ್ವಮೂರ್ತಿ ಅವರಿಗೆ ಸಂದಿದೆ.
ಹುಬ್ಬಳ್ಳಿಯಲ್ಲಿ ನಡೆದ ಉತ್ತರ ಕರ್ನಾಟಕ ಇಂಡಸ್ಟ್ರಿಯಲ್ ಮತ್ತು ಮ್ಯಾನ್ಯುóಫ್ಚರಿಂಗ್ ಎಕ್ಸಿಬಿಷನ್ನಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಎಸ್. ಶೆಟ್ಟರ್, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ್ ನಲ್ವಡಿ, ಗೌರವ ಕಾರ್ಯದರ್ಶಿ ಶಂಕರ್ ಹಿರೇಮಠ್ ಮತ್ತು ಪದಾಧಿಕಾರಿಗಳು ಕೆ.ಎಂ. ವಿಶ್ವಮೂರ್ತಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ನೀಡಿರುವ `ಉದ್ಯಮಿ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿರುವ ಬಳ್ಳಾರಿಯ ಹ್ಯಾಲೀಸ್ ಬ್ಲ್ಯೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ವಿಶ್ವಮೂರ್ತಿ ಅವರಿಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಳ್ಳಿ ರಮೇಶ್, ಟಿ. ಶ್ರೀನಿವಾಸರಾವ್, ವಿಶೇಷ ಆಹ್ವಾನಿತರಾದ ಕೆ.ಎಂ. ಭೋಗೇಶ್, ಬಳ್ಳಾರಿ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ. ರಾಮಚಂದ್ರ, ಕಾರ್ಯದರ್ಶಿ ವಾಸುದೇವ ಆಚಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಿರ್ಮಾ ಪೇಂಟ್ಸ್ ನಾಗರಾಜ್, ಮಾಜಿ ಅಧ್ಯಕ್ಷರಾದ ಕೆ.ಎಂ. ಶಿವಮೂರ್ತಿ, ಎ. ಸುಧಾಕರ್ ಮತ್ತು ಪದಾಧಿಕಾರಿಗಳು ಹಾಗೂ ಆಜೀವ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.