ಕಾರ ಹುಣ್ಣಿಮೆಯಂದು ಶ್ರೀ ಮಠದ ಎತ್ತುಗಳ ಮೆರವಣಿಗೆ

Ravi Talawar
ಕಾರ ಹುಣ್ಣಿಮೆಯಂದು ಶ್ರೀ ಮಠದ ಎತ್ತುಗಳ ಮೆರವಣಿಗೆ
WhatsApp Group Join Now
Telegram Group Join Now
ಮುಗಳಖೋಡ 22: ನಾಡು ಸುಖ ಸಮೃದ್ಧಿಯಿಂದ ಕಂಗೋಳಿಸಿ ಶಾಂತಿ ಕರುಣಿಸಲಿ ಎಂದು ದೇವ ಸ್ವರೂಪಿ ಭೂಮಿ ತಾಯಿ ಪೂಜಿಸಿ ಭೂಮಿ ಉಳಿಮೆ ಮಾಡಲು ರೈತ ಸಂದರ್ಭಕ್ಕೆ ತಕ್ಕಂತೆ ಸಾಂಪ್ರದಾಯಿಕ ಪದ್ಧತಿಯಂತೆ ಕಾರ ಹುಣ್ಣಿಮೆ ಮೋದಲ ದಿನ ಭೂಮಿ ತಾಯಿಯ ಪ್ರಥಮ  ಪೂಜೆಯೇ (ಹೊಣ್ಣುಗ್ಗಿ) ಶುಕ್ರವಾರದಂದು ಪಟ್ಟಣದ ಎಲ್ಲ ರೈತರು ಕುಂಬಾರ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು  ಮನೆಯ ಪೂಜಾ ಮಂಟಪದಲ್ಲಿ  ಪ್ರತಿಷ್ಠಾಪಿಸಿ ಪೂಜಿಸಿ ಹೊನ್ನುಗ್ಗಿ ಹಾಗೂ ವಿವಿಧ ತರಹದ ನೈವೇದ್ಯ ಸಲ್ಲಿಸಿ ಹೊನ್ನುಗ್ಗಿ ದಿನ ಆಚರಿಸಿದರು.
ಶನಿವಾರ ಹುಣ್ಣಿಮೆ ದಿನ ಬೆಳಿಗ್ಗೆ ಎಲ್ಲರು ಎತ್ತು ಹಾಗೂ ಸಾಕಿದ ಜಾನುವಾರುಗಳನ್ನು ಬಣ್ಣ ಬಣ್ಣಗಳಿಂದ ಅಲಂಕರಿಸಿ ಪೂಜಿಸಿದರು, ಪುರಾತನ ಆಚರಣೆಯಂತೆ ಮೋದಲು ಶ್ರೀ ಯಲ್ಲಾಲಿಂಗೇಶ್ವರ ಮಠದ ಎತ್ತುಗಳನ್ನು ಶೃಂಗರಿಸಿ ಜಗದೀಶ ಮಹಾರಾಜರು, ಅರ್ಚಕ ಮಹೇಶ ಪೂಜಿಸಿದರು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೃಂದದೊಂದಿಗೆ ಮೆರವಣಿಗೆ ಮಾಡಿದರು ನಂತರ ರೈತರು ತಮ್ಮ ತಮ್ಮ ಎತ್ತುಗಳನ್ನು ಮೆರವಣಿಗೆ ಮಾಡಿ ವಿಜೃಂಭಣೆಯಿಂದ ಕಾರ ಹುಣ್ಣಿಮೆ ಆಚರಿಸಿದರು.
ನಾಗಪ್ಪ ಕಂಟಿಕಾರ, ಸುಭಾಷ ಶೇಗುಣಸಿ, ಲಕ್ಷ್ಮಣ ತುಗದೆಲಿ, ವಿಠ್ಠಲ ಹುನ್ನಾರ, ಯಲ್ಲಪ್ಪ ಪೂಜಾರಿ, ಪರಪ್ಪ ಹೊಸಪೇಟೆ, ಮಹಾದೇವ ನಾಯಿಕ, ಮಾರುತಿ ಹುನ್ನಾರ, ಮಹಾದೇವ ಯಡವಣ್ಣವರ, ಸಿದ್ದಪ್ಪ ಮಂಟೂರ, ಚನ್ನಪ್ಪ ಮುಗಳಿ, ತಿಪ್ಪಣ್ಣ ಕುರಿಮನಿ, ಮಹಾದೇವ ಮೆಕ್ಕಳಕಿ, ಯಲ್ಲಪ್ಪ ಶೇಗುಣಸಿ, ಸಿದ್ದು ಕುರಿಮನಿ, ಯಲ್ಲಪ್ಪ ಗೋಕಾಕ ಇತರರು ಇದ್ದರು.
WhatsApp Group Join Now
Telegram Group Join Now
Share This Article