ಉತ್ತರಪ್ರದೇಶದಲ್ಲಿ ಪ್ರಶ್ನೆ ಪ್ರತಿಕೆ ಸೂರಿಕೆಯಾದರೆ, ಮತ್ತೆ ಬುಲ್ಡೋಜರ್ ಬಾಬಾ ಸದ್ದು ಮಾಡಲಿದೆ. ಹೌದು ಯೋಗಿ ಆದಿತ್ಯನಾಥ್ ಅವರ ಸರ್ಕಾರ, NEET ಮತ್ತು UGC-NET ನಲ್ಲಿ ನಡೆದ ಅಕ್ರಮದ ನಂತರ ಈ ಕ್ರಮವನ್ನು ತೆಗೆದುಕೊಂಡಿದೆ.
ಯುಪಿ ಸರ್ಕಾರವು ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಾಲ್ವರ್ ಗ್ಯಾಂಗ್ಗಳನ್ನು ನಿಯಂತ್ರಿಸಲು ಹೊಸ ಕಾನೂನನ್ನು ತರಲಿದೆ. ಈ ಹೊಸ ಕಾನೂನಿನ ಪ್ರಕಾರ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಪತ್ರಿಕೆಗಳನ್ನು ಹಂಚುವ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಿದೆ. ಇಂತಹ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಭಾರೀ ದಂಡ, ಬುಲ್ಡೋಜರ್ ಕ್ರಮ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
NEET ಮತ್ತು UGC-NETನಲ್ಲಿ ನಡೆದ ಅಕ್ರಮದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪರೀಕ್ಷೆಯನ್ನು ರದ್ದುಗೊಳಿಸಿದ ಕೆಲವೇ ದಿನಗಳ ಬಳಿಕ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಈ ಆದೇಶವನ್ನು ನೀಡಿದೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ಡಾರ್ಕ್‌ನೆಟ್‌ನಲ್ಲಿ ಸೋರಿಕೆಯಾಗಿರುವುದು ಕಂಡುಬಂದಿದೆ ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇದಲ್ಲದೆ, NEET ಸಹ ಅಕ್ರಮಗಳ ಆರೋಪದ ಅಡಿಯಲ್ಲಿ ಸ್ಕ್ಯಾನರ್ ಆಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಯುಪಿ ಸರ್ಕಾರ ಪರೀಕ್ಷಾ ಪ್ರಕ್ರಿಯೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನನ್ನು ತರುವುದಾಗಿ ಘೋಷಿಸಿದೆ. ಇದರ ಜತೆಗೆ ಪ್ರಶ್ನೆ ಪತ್ರಿಕೆ ಎಣಿಕೆಯನ್ನು ನಿಲ್ಲಿಸಲು ಸರ್ಕಾರ ಹೊಸ ನೀತಿ ತಂದಿದೆ. ಪ್ರತಿ ಪರೀಕ್ಷೆಯ ಶಿಫ್ಟ್ ಕನಿಷ್ಠ ಎರಡು ವಿಭಿನ್ನ ಸೆಟ್ ಪೇಪರ್‌ಗಳನ್ನು ಹೊಂದಿರುತ್ತದೆ. ಪ್ರತ್ಯೇಕ ಏಜೆನ್ಸಿಗಳಿಂದ ಮುದ್ರಿಸಲಾಗುತ್ತದೆ. ಪೇಪರ್ ಕೋಡಿಂಗ್ ಕಾರ್ಯವಿಧಾನಗಳನ್ನು ಹೆಚ್ಚು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತದೆ.