ಬೈಲಹೊಂಗಲ: ಶರಣರವಾಣಿಯಂತೆ ದಯಬೇಕು ಸಕಲ ಪ್ರಾಣಿಗಳಲ್ಲಿ ದಯವಿಲ್ಲದ ಧರ್ಮ ಯಾವುದಯ್ಯ ಎನ್ನುವಂತೆ ಪ್ರತಿ ಜೀವಿಯ ರಕ್ಷಣೆ ಹಾಗೂ ಮಾನವರಲ್ಲಿ ಸಾಮರಸ್ಯದಿಂದ ಬದಕುವ ಸದ್ಬುದ್ಧಿ, ಸನ್ಮತಿ ನೀಡುವಂತೆ ಬಯಸಿ ದೇವರಿಗೂ ಸಹಿತ ನೂಲು ಅರ್ಪಿಸುವ ಭಕ್ತಿಯ ಕಾರ್ಯ ಪ್ರತಿವರ್ಷ ನೂಲ ಹುಣ್ಣಿಮೆಯ ದಿನ ಶ್ರೀವೀರಭದ್ರ ದೇವಸ್ಥಾನದಲ್ಲಿ ನಡೆದುಕೊಂಡು ಬಂದಿದೆ ಎಂದು ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ ಹೇಳಿದರು
ಸಮೀಪದ ಹೊಸೂರ ಗ್ರಾಮದ ಭದ್ರಕಾಳಿ ಸಮೇತ ಶ್ರೀವೀರಭದ್ರ ದೇವರಿಗೆ ಶನಿವಾರ ನೂಲು ಅರ್ಪಿಸಿ ಮಾತನಾಡಿ, ಸಮಾಜದಲ್ಲಿ ಸಹೋದರಿಯರು ತಮ್ಮ ರಕ್ಷಣೆಗೆ ಸದಾ ತಮ್ಮ ಸಹೋದರರು ಇರಲೆಂದು ಬಯಸಿ ರಕ್ಷಾ ಬಂಧನ ನಡೆಸಿ ಸಹೊದರತ್ವದ ಬಾಂಧವ್ಯ ನೆನೆಯುವದೆ ನೂಲು ಹುಣ್ಣಿಮೆಯ ವಿಷೇಶವಾಗಿದೆ ಎಂದರು.ಶಿಕ್ಷಕ ಈರಣ್ಣ ಬೆಂಡಿಗೇರಿ ಮಾತನಾಡಿ, ಸಮಾಜದ ರಕ್ಷಣೆ, ದೇವರೆ ನಿನ್ನ ಹೊಣೆ. ನಮ್ಮಲ್ಲಿರುವ ಅಹಂಕಾರ ತೋಲಗಿಸಿ ದುಷ್ಟಗುಣಗಳಿಂದ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥಿಸಿ ದೇವರಿಗೆ ನೂಲು ಸಮರ್ಪಿಸುತ್ತೆವೆ ಎಂದರು.
ನ್ಯಾಯವಾದಿ ಮಹಾಂತೇಶ ಚಿಕ್ಕೊಪ್ಪ ಮಾತನಾಡಿ,ಐತಿಹಾಸಿಕವಾಗಿ ವೀರಭದ್ರೇಶ್ವರನ ಮಾವ ದಕ್ಷಬ್ರಹ್ಮನಲ್ಲಿ ಅಡಗಿದ್ದ ಸೊಕ್ಕನ್ನು ಅಡಗಿಸಲು ಆತನ ರುಂಡವನ್ನೆ ಕತ್ತರಿಸಿ ನಂತರ ಆತನ ಸಹೋದರಿಯ ಅಕ್ರಂದನದಿಂದ ತನ್ನ ಗಂಡನನ್ನ ಬದುಕಿಸಿಕೊಡು ಎಂದಾಗ ಆತನನ್ನು ಮರಳಿ ಒಬ್ಬ ಸಜ್ಜನ ವ್ಯಕ್ತಿಯನ್ನಾಗಿಸಿ ಸಹೋದರಿಯ ಆಸೆಯಂತೆ ನೂಲು ಹುಣ್ಣಿಮೆಯ ದಿನ ಬದುಕಿಸಿದಾ ಎಂದು ಪುರಾಣಗಳಲ್ಲಿ ಕೇಳಿಬರುತ್ತದೆ.
ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ತುಂಡರಿಸಿ ಸರಳತೆಯ ವ್ಯಕ್ತಿತ್ವದ ಬೆಳವಣೆಗಾಗಿ ಹಾಗೂ ಸಹೋದರಿಯರಿಗೆ ಸದಾ ರಕ್ಷಣೆಯ ಕಣ್ಗಾವುಲಾಗಿ ಸಹೋದರರು ಇರುವಹಾಗೆ ಅಸಹಾಯಕ ಜೀವಿಗಳ ರಕ್ಷಣೆಗೆ ದೇವರು ಸದಾ ಇರುವಂತೆ ರಕ್ಷೆಯ ಕವಚದ ಧಾರಣೆಯ ಹಬ್ಬ ರಕ್ಷಾಬಂಧನವೆ ನೂಲು ಹುಣ್ಣಿಮೆಯ ಮಹತ್ವ ಮಲಿಂಗಪ್ಪ ಕೋಟಗಿ ತಮ್ಮ ಕೈ ಚರಕದ ಸಾಹಾಯದಿಂದ ಹತ್ತಿಯಿಂದ ನೂಲು ತಯಾರಿಸಿ ಅರ್ಪಿಸುತ್ತಾ ಬಂದಿರುವದು ಅತ್ಯಂತ ವಿಶೇಷವಾಗಿದೆ.
ವಿಷೇಶ ಅಲಂಕಾರ: ಶ್ರೀವೀರಭದ್ರದೇವರಿಗೆ ರುದ್ರಾಭಿಷೇಕ, ವಿಶೇಷ ಉಡಪುಧಾರಣೆ ನಡೆಸಲಾಯಿತು. ಪುರವಂತರು ಓಡಪು , ಹೇಳುವದರೊಂದಿಗೆ ಅಗ್ನಿ ಕುಂಡ ಪೂಜೆ ಮತ್ತು ನಂದಿಕೋಲು, ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.ಪ್ರತಿ ವರ್ಷ ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಲಾಯಿತು. ಭಕ್ತರು ದೇವರಿಗೆ ಬಾಳೆಹಣ್ಣು, ಕಾಯಿ ವಿವಿಧ ಖಾಧ್ಯಗಳ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ವೇ.ಅಡವಯ್ಯ ಕಲ್ಯಾಣಮಠ, ಮಾಹಾಂತಯ್ಯ ಗಣಾಚಾರಿ ಪೂಜಾ ಕಂಕೈರ್ಯಗಳನ್ನು ನೆರವೆರಿಸಿದರು.
ದೇವಸ್ಥಾನಕ್ಕೆ ಸಹಾಯ ಹಸ್ತ ನೀಡಿದ ನ್ಯಾಯವಾದಿ ಮಹಾಂತೇಶ ಚಿಕ್ಕೊಪ್ಪ, ಮಂಜುನಾಥ ಹೊಸಮನಿ, ಮಲ್ಲಿಕಾರ್ಜುನ ವಕ್ಕುಂದ, ಗ್ರಾಮಪಂಚಾಯತಿಯ ನೂತನ ಅಧ್ಯಕ್ಷೆ ದೀಪಾ ಪಾಟೀಲ, ಉಪಾಧ್ಯಕ್ಷ ಬಸವರಾಜ ಪೇಂಟೆದ, ಹಾಗೂ ನಿವೃತ್ತಿಯಾದ ಭಾರತೀಯ ಸೈನಿಕ ಶಂಕರೆಪ್ಪ ಹುರಕಡ್ಲಿ ಅವರನ್ನು ಸತ್ಕರಿಸಿಲಾಯಿತು. ಗ್ರಾಮದ ಹೆಣ್ಣುಮಕ್ಕಳು ಆರತಿಯಿಂದಿಗೆ ಶ್ರೀವೀರಭದ್ರಶ್ವರ ಬೆಳ್ಳಿಯ ಮೂರ್ತಿಯ ಪಾಲಕಿ ಉತ್ಸವ ಜೋತೆ ಸಾಗಿದರು. ಸಿದ್ದಲಿಂಗಪ್ಪ ವಿವೇಕಿ, ಶಂಕರಗೌಡ ಇಂಗಳಗಿ, ಸೋಮಲಿಂಗಪ್ಪ ಕೋಟಗಿ, ಮಹೇಶ ಚಿಕ್ಕೊಪ್ಪ, ಈರಪ್ಪ ಕೊರಿಕೊಪ್ಪ, ಮಲ್ಲಿಕಾರ್ಜುನ ವಕ್ಕುಂದ, ಗೌಡಪ್ಪ ಹೊಸಮನಿ, ಮಹಾಂತೇಶ ಕೊರಿಕೊಪ್ಪ, ಮುಶೆಪ್ಪ ಜಡಿ,ಪ್ರಶಾಂತ ಮಾಕಿ, ಅಶೋಕ ವಿವೇಕಿ, ಬಸವರಾಜ ತುಕ್ಕಣ್ಣವರ, ಈರಪ್ಪ ಬುಡಶೆಟ್ಟಿ, ಮಲ್ಲಿಕಾರ್ಜುನ ಹುರಕಡ್ಲಿ, ಅಡಿವೆಪ್ಪ ಹೂಗಾರ, ಈರಣ್ಣ ಚಳಕೊಪ್ಪ, ಶಂಕರ ಹುಂಬಿ, ಶಿವಾನಂದ ಯರಗಟ್ಟಿಮಠ, ಮಡಿವಾಳಯ್ಯ ಗಣಾಚಾರಿ, ವಿಜಯ ಕಂಬಾರ, ರೋಹಿತ ಮೆಳ್ಳಿಕೇರಿ, ಮಹಾವೀರ ಕೊಲಾರಿ, ಗುರಸಿದ್ದಪ್ಪ ಗಾಣಿಗೇರ, ಅಜ್ಜಪ್ಪ ಹುರಳಿ, ಸೋಮಶೇಖರ ಆನಿಗೋಳ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು