ಬೈಲಹೊಂಗಲ ಪುರಸಭೆ ಅಧ್ಯಕ್ಷರಾಗಿ ವಿಜಯ ಬೋಳನ್ನವರ, ಉಪಾಧ್ಯಕ್ಷರಾಗಿ ಬುಡ್ಡೆಸಾಬ ಶಿರಸಂಗಿ ಅವಿರೋಧ ಆಯ್ಕೆ

Ravi Talawar
ಬೈಲಹೊಂಗಲ ಪುರಸಭೆ ಅಧ್ಯಕ್ಷರಾಗಿ ವಿಜಯ ಬೋಳನ್ನವರ, ಉಪಾಧ್ಯಕ್ಷರಾಗಿ ಬುಡ್ಡೆಸಾಬ ಶಿರಸಂಗಿ ಅವಿರೋಧ ಆಯ್ಕೆ
WhatsApp Group Join Now
Telegram Group Join Now
ಬೈಲಹೊಂಗಲ. ಇಂದು ಬೈಲಹೊಂಗಲ ಪುರಸಭೆ ಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ  ಅಧ್ಯಕ್ಷರಾಗಿ ವಿಜಯ ಬೋಳನ್ನವರ, ಉಪಾಧ್ಯಕ್ಷರಾಗಿ ಬುಡ್ದೆಸಾಬ ಶಿರಸಂಗಿ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಮತ್ತು ಸಮ್ಮುಖದಲ್ಲಿ  ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ನೂತನ ಅಧ್ಯಕ್ಷ ವಿಜಯ ಬೋಳನ್ನವರ ಬೈಲಹೊಂಗಲ ಸಮಸ್ತ ಅಭಿವೃದ್ಧಿಗೆ, ಪುರಸಭೆ  ಬೆಳವಣಿಗೆಗೆ ಶಾಸಕರಾದ ಮಹಾಂತೇಶ ಕೌಜಲಗಿ ಹಾಗೂ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗುವದು ಎಂದರು .ದ್ವಿತೀಯ ಸ್ಥಾನದಲ್ಲಿ ಇರುವ ಪುರಸಭೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೋಯಲು ಶ್ರಮಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಭಿ, ಪುರಸಭಾ ಸದಸ್ಯರು, ಪಟ್ಟಣದ ಮುಖಂಡರು ನೂತನ ಅಧ್ಯಕ್ಷ -ಉಪಾಧ್ಯಕ್ಷರನ್ನು ಸತ್ಕಾರಿಸಿದರು.
WhatsApp Group Join Now
Telegram Group Join Now
Share This Article