ಪ್ರಜ್ವಲ್ ರೇವಣ್ಣ, ರೇವಣ್ಣ ದೇವೇಗೌಡರನ್ನು ಲೈಂಗಿಕ ದೌರ್ಜನ್ಯ ಅಪರಾಧ ಕಾಯ್ದೆ ಅಡಿಯಲ್ಲಿ ಕೂಡಲೇ ಬಂಧಿಸಲು ಬಿಎಸ್‌ಪಿ ಆಗ್ರಹ

Ravi Talawar
ಪ್ರಜ್ವಲ್ ರೇವಣ್ಣ, ರೇವಣ್ಣ ದೇವೇಗೌಡರನ್ನು ಲೈಂಗಿಕ ದೌರ್ಜನ್ಯ ಅಪರಾಧ ಕಾಯ್ದೆ ಅಡಿಯಲ್ಲಿ ಕೂಡಲೇ ಬಂಧಿಸಲು ಬಿಎಸ್‌ಪಿ  ಆಗ್ರಹ
WhatsApp Group Join Now
Telegram Group Join Now

ಗದಗ 04: ಗದಗ-ಬೆಟಗೇರಿ ರೈಲ್ವೆ ನಿಲ್ದಾಣದಲ್ಲಿ ಲಕ್ಕುಂಡಿ ಗ್ರಾಮಕ್ಕೆ ತೆರಳಲು ಬಂದ ಹಾವೇರಿ-ಗದಗ ಲೋಕಸಭಾ ಸಂಯೋಜಕರಾದ ಬಿಎಸ್‌ಪಿ ಘಟಕದವರು ಶ್ರೀ ಬಸವರಾಜ ಯಲ್ಲಪ್ಪ ನವಲಗುಂದರವರು ಮಾತನಾಡುತ್ತಾ ಲೈಂಗಿಕ ದೌರ್ಜನ್ಯ ಪೆನ್‌ಡ್ರೈವ್ ಅಪರಾಧದಲ್ಲಿ ಸಿಲುಕಿದ ಅಪ್ಪ ಮಗನಾದ ರೇವಣ್ಣ ದೇವೇಗೌಡ, ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸಬೇಕು. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಲೈಂಗಿಕ ದೌರ್ಜನ್ಯ ಅಪರಾಧಿಗಳನ್ನು ರಕ್ಷಣೆ ಮಾಡಿದೆ ಬಂಧಿಸಬೇಕು. ಎಸ್‌ಐಟಿಗೆ ವಹಿಸಿರುವುದನ್ನು ಸ್ವಾಗತಿಸುತ್ತೇವೆ. ದೇಶದಲ್ಲಿ ಎನ್‌ಡಿಎ ನೇತಾರ ಪ್ರಧಾನ ಮಂತ್ರಿ ಲೈಂಗಿಕ ಅಪರಾಧ ಎಸಗಿದ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಮೌನ ವಹಿಸಿದ್ದೇಕೆ ತಿಳಿಸಬೇಕು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ  ಹದಗೆಟ್ಟು ಹೋಗಿದೆ.

ದಲಿತನ ಸಂಪತ್ತಿನ ಮೇಲೆ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಓಸಿ, ಇಸ್ಪೀಟ್ ದರೋಡೆ, ಡ್ರಗ್ಸ್ ಅಂತ ಮಾರಾಟ ಪ್ರಕರಣಗಳು ಹೆಚ್ಚುತ್ತಿವೆ ಅವುಗಳನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ಅವುಗಳನ್ನು ತಡೆಯಲು ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್‌ಪಿಗೆ ಮತ ನೀಡಿ ಬಾಗಲಕೋಟೆ ಲೋಕಸಭಾ  ಮತಕ್ಷೇತ್ರಕ್ಕೆ ಹುರಿಯಾಳಾಗಿ ನಿಂತಿರುವ ಶ್ರೀ ಎಂ. ಬಿ. ಸಿದ್ದಗೊಣಿರವರಿಗೆ ಮತ ನೀಡಬೇಕು ಎಂದು ನರಗುಂದ ಮತಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ  ಒ.ಏ. ತಳಗಡೆ, ಹನುಮಂತ ಮಾದರ, ಶಶಿಕುಮಾರ್ ಬಾವಿಮನಿ, ಮಂಜುನಾಥ ಹುಬ್ಬಳ್ಳಿ, ರಮೇಶ ರಾಮೇನಳ್ಳಿ, ಮಂಜುನಾಥ ಮುಸ್ತಫಾನವರ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article