28 ಕ್ಷೇತ್ರಗಳಲ್ಲೂ ಗೆಲ್ಲುವ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ: ಬಿ‌.ಎಸ್.ಯಡಿಯೂರಪ್ಪ ವಿಶ್ವಾಸ

Ravi Talawar
28 ಕ್ಷೇತ್ರಗಳಲ್ಲೂ ಗೆಲ್ಲುವ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ: ಬಿ‌.ಎಸ್.ಯಡಿಯೂರಪ್ಪ ವಿಶ್ವಾಸ
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್ 17:  ”ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ವಾತಾವರಣ ಅನುಕೂಲಕರವಾಗಿದೆ‌‌. ನಾನು ಈ ಹಿಂದೆ ಹೇಳಿದಂತೆ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ” ಎಂದು ಮಾಜಿ ಮುಖ್ಯಮಂತ್ರಿ ಬಿ‌. ಎಸ್. ಯಡಿಯೂರಪ್ಪ ಹೇಳಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಗೆ ಬಂದಿದ್ದೇವೆ‌. ಮಾಜಿ ಸಚಿವ ಭೈರತಿ ಬಸವರಾಜ್ ಹಾಗೂ ಲೇಹರ್ ಸಿಂಗ್ ಜೊತೆಗೆ ಬಂದಿದ್ದಾರೆ. ಈಗ ಮೆರವಣಿಗೆ ಆರಂಭವಾಗಿದ್ದು, ಅವರ ಜೊತೆ ಸೇರಿ ನಾಮಪತ್ರ ಸಲ್ಲಿಸುತ್ತೇ‌ನೆ. ಇದಾದ ಬಳಿಕ ಕೊಪ್ಪಳಕ್ಕೆ ಹೋಗುತ್ತೇನೆ” ಎಂದರು.

ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ”ಆ ವಿಷಯ ಗೊತ್ತಾಗಿದೆ. ಅವರು ಇಷ್ಟಪಟ್ಟು ಹೋಗುತ್ತಿದ್ದಾರೆ. ಇವತ್ತು ಹೋಗಿ ಅವರನ್ನು ಭೇಟಿಯಾಗಿ ಮಾತನಾಡಬೇಕು ಎಂದುಕೊಂಡಿದ್ದೆ. ಇಂತಹ ಘಟನೆಗಳು ಸ್ವಾಭಾವಿಕ” ಎಂದರು.

ಬೆಳಗಾವಿಯಲ್ಲಿ ಜಾತಿ ಆಧಾರದ ಮೇಲೆ ಪಾಲಿಟಿಕ್ಸ್ ನಡೆಯುತ್ತಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ”ಅವರು ಏನಾದ್ರೂ ಮಾಡಿಕೊಳ್ಳಲಿ, ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧ-ಭಾವ ಇಲ್ಲದೇ ಎಲ್ಲರ ಬೆಂಬಲದೊಂದಿಗೆ ಗೆಲ್ಲುತ್ತೇವೆ” ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article