ಕೋಟೆ ಪ್ರವೇಶದ್ವಾರ ಬಳಿಯ ಬೊಂಬುಗಳಿಗೆ ಬೆಂಕಿ

A B
By A B
ಕೋಟೆ ಪ್ರವೇಶದ್ವಾರ ಬಳಿಯ ಬೊಂಬುಗಳಿಗೆ ಬೆಂಕಿ
WhatsApp Group Join Now
Telegram Group Join Now
ಬಳ್ಳಾರಿ, ಮಾ.11.: ನಗರದ ಕೋಟೆ ಪ್ರವೇಶದ್ವಾರದ ಬಳಿಯ ಬೊಂಬು ಬಜಾರ್ ಪ್ರದೇಶದಲ್ಲಿ ಅಕಸ್ಮಾತ್ತಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಬೊಂಬುಗಳು ಸುಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಗೋವಿಂದಸ್ವಾಮಿ ಅವರಿಗೆ ಸೇರಿದ ಅಂಗಡಿಗೆ ಬೆಂಕಿ ತಗುಲಿದ್ದು, ಬೆಂಕಿಯ ಶಾಖದಿಂದ ಸುತ್ತಮುತ್ತಲಿನ ನಾಲ್ಕು ಮನೆಗಳಿಗೆ ಸಹ ಹಾನಿಯಾಗಿದೆ. ಬೆಂಕಿ ಹತ್ತಿರೋದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ಮುಗಿಲೆತ್ತರಕ್ಕೆ ಏರಿದ ಪರಿಣಾಮ ಅಂಗಡಿಯಲ್ಲಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಬೊಂಬುಗಳು ಬೆಂಕಿಗೆ ಆಹುತಿಯಾಗಿವೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ
WhatsApp Group Join Now
Telegram Group Join Now
Share This Article