ಮಂಗಳೂರು, ಮೇ 04: ಬೆಂಗಳೂರಿನ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಕರೆ ಜನಮನದಿಂದ ಮಾಸುವ ಮುನ್ನವೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಬಂದಿದೆ.
ಉಗ್ರರ ಹೆಸರಲ್ಲಿ ಇ-ಮೇಲ್ ಬಂದಿದ್ದು, ” ವಿಮಾನ ನಿಲ್ದಾಣದ ಆವರಣದಲ್ಲಿ ಆವರಣದಲ್ಲಿ ಸ್ಫೋಟಕಗಳನ್ನ ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ.
ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ” ಎಂದು ಏಪ್ರಿಲ್ 29 ರಂದು ಬೆದರಿಕೆ ಕರೆ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.