ಏರ್​ ಇಂಡಿಯಾ ವಿಮಾನದ ಟಾಯ್ಲೆಟ್​ನಲ್ಲಿ ಟಿಶ್ಯೂ ಪೇಪರ್​ನಲ್ಲಿ ಬಾಂಬ್​ ಬೆದರಿಕೆ ಸಂದೇಶ

Ravi Talawar
ಏರ್​ ಇಂಡಿಯಾ ವಿಮಾನದ ಟಾಯ್ಲೆಟ್​ನಲ್ಲಿ ಟಿಶ್ಯೂ ಪೇಪರ್​ನಲ್ಲಿ ಬಾಂಬ್​ ಬೆದರಿಕೆ ಸಂದೇಶ
WhatsApp Group Join Now
Telegram Group Join Now

ದೆಹಲಿ,16: ಏರ್​ ಇಂಡಿಯಾ ವಿಮಾನದ ಟಾಯ್ಲೆಟ್​ನಲ್ಲಿದ್ದ ಟಿಶ್ಯೂ ಪೇಪರ್​ನಲ್ಲಿದ್ದ ಬಾಂಬ್​ ಬೆದರಿಕೆ ಸಂದೇಶವು ಕೆಲಕಾಲ ಆತಂಕ ಸೃಷ್ಟಿಸಿತ್ತು. ಈ ವಿಮಾನವು ದೆಹಲಿಯಿಂದ ವಡೋದರಾಗೆ ಹೊರಟಿತ್ತು, ರಾತ್ರಿ 7.30ರ ವೇಳೆಗೆ ವಿಮಾನದ ಟಾಯ್ಲೆಟ್​ಗೆ ಹೋಗಿದ್ದ ಪ್ರಯಾಣಿಕರೊಬ್ಬರಿಗೆ ಈ ಟಿಶ್ಯೂ ಸಿಕ್ಕಿದೆ.

ಬೆದರಿಕೆ ಸಂದೇಶ ನೋಡಿದ ತಕ್ಷಣ ಇಡೀ ವಿಮಾನವನ್ನು ಒಮ್ಮೆ ಸಂಪೂರ್ಣವಾಗಿ ಪರಿಶೀಲಿಸಲಾಯಿತು, ಆದರೆ ಅನುಮಾನಾಸ್ಪದ ವಸ್ತುಗಳು ಯಾವುದೂ ಪತ್ತೆಯಾಗಿಲ್ಲ.

ಸಿಬ್ಬಂದಿ ಟಿಶ್ಯೂ ಪೇಪರ್ ಅನ್ನು ಗುರುತಿಸಿದಾಗ ವಿಮಾನವು ಟೇಕ್-ಆಫ್‌ಗೆ ಸಿದ್ಧವಾಗಿತ್ತು ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ನಂತರ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಪ್ರಯಾಣಿಕರನ್ನು ವಿಮಾನದಿಂದ ಹತ್ತುವಂತೆ ಕೇಳಲಾಯಿತು. ಬಳಿಕ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರು ಬರೋಡಕ್ಕೆ ತೆರಳಿದರು.

ಈ ವಿಮಾನದ ಹಾರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಮತ್ತು ಪ್ರತ್ಯೇಕ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಸಿಐಎಸ್ಎಫ್ ಮತ್ತು ದೆಹಲಿ ಪೊಲೀಸ್ ತಂಡವು ವಿಮಾನದ ಮರು ತನಿಖೆಯನ್ನು ಪ್ರಾರಂಭಿಸಿತು. ಭದ್ರತಾ ತಪಾಸಣೆಯಲ್ಲಿ ಎಲ್ಲವೂ ಸರಿಯಾಗಿದೆ.

ನಿಲ್ದಾಣದ ಭದ್ರತೆಗೆ ಸಂಬಂಧಿಸಿದಂತೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿರುವುದು ಗಮನಾರ್ಹ. ಕಳೆದ ಮೂರು ದಿನಗಳ ಹಿಂದೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ತನಿಖೆಯ ನಂತರ ಅದು ಸುಳ್ಳು ಎಂದು ತಿಳಿದುಬಂದಿದೆ. ಭದ್ರತೆಗೆ ಸಂಬಂಧಿಸಿದ ಯಾವುದೇ ಕರೆಯನ್ನು ನಿರ್ಲಕ್ಷಿಸಲಾಗುವುದಿಲ್ಲ.

WhatsApp Group Join Now
Telegram Group Join Now
Share This Article