ಬೆಂಗಳೂರು, ಅಕ್ಟೋಬರ್ 22: ಮುಂಬೈಯಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನವೂ ಸೇರಿದಂತೆ ಇಂಡಿಗೋ, ವಿಸ್ತಾರ ಏರ್ಲೈನ್ಸ್, ಏರ್ ಇಂಡಿಯಾದ ಸುಮಾರು 30 ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿವೆ. 10 ಇಂಡಿಗೋ, 10 ವಿಸ್ತಾರ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿವೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
6E-63 ದೆಹಲಿ – ಜೆಡ್ಡಾ, 6E-12 ಇಸ್ತಾಂಬುಲ್ – ದೆಹಲಿ, 6E-83 ದೆಹಲಿ – ದಮ್ಮಾಮ್, 6E-65 ಕೋಜಿಕೋಡ್ – ಜೆಡ್ಡಾ, 6E-67 ಹೈದರಾಬಾದ್ – ಜೆಡ್ಡಾ, 6E-77 ಬೆಂಗಳೂರು – ಜೆಡ್ಡಾ, 6E-18 ಇಸ್ತಾಂಬುಲ್ – ಮುಂಬೈ, 6E-164 ಮಂಗಳೂರು – ಮುಂಬೈ, 6E-118 ಲಕ್ನೋ ಅಹಮದಾಬಾದ್ ಸೇರಿದಂತೆ ಸುಮಾರು 30 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.