ಹರ್ಷ ಶುಗರ್ಸ್ ನಲ್ಲಿ ಬಾಯ್ಲರ್ ಪ್ರದೀಪನ

Ravi Talawar
ಹರ್ಷ ಶುಗರ್ಸ್ ನಲ್ಲಿ ಬಾಯ್ಲರ್ ಪ್ರದೀಪನ
WhatsApp Group Join Now
Telegram Group Join Now
ಬೆಳಗಾವಿ: ಸವದತ್ತಿಯ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ಬಾಯ್ಲರ್ ಪ್ರದೀಪನ ಕಾರ್ಯಕ್ರಮ ನಡೆಯಿತು. ಹೂಲಿ ಸಾಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಅಜ್ಜನವರ ದಿವ್ಯ ಸಾನಿಧ್ಯದಲ್ಲಿ, ವಿಧಾನ ಪರಿಷತ್ ಸದಸ್ಯರೂ ಆಗಿರುವ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಉಪಸ್ಥಿತಿಯಲ್ಲಿ ಕಾರ್ಖಾನೆಯ ಸಹ ವಿದ್ಯುತ್ ಘಟಕ ಹಾಗೂ ಡಿಸ್ಟಿಲರಿ ಬಾಯ್ಲರ್ ಪ್ರದೀಪನೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಸದಾಶಿವ್ ತೋರಾಥ್, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಎನ್ ಎಮ್ ಪಾಟೀಲ, ಎಥೆನಾಲ್ ಘಟಕದ ವ್ಯವಸ್ಥಾಪಕರಾದ ಸಾಂಬ್ರೇಕರ್, ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಚೌಕಿಮಠ್, ಕಾರ್ಖಾನೆಯ ಎಲ್ಲ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article