ಬಳ್ಳಾರಿ,ಜು.೨೫: ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಎಚ್‌ಎಸ್) ಯಿಂದ, ನಾಗರಿಕ ಸೌಲಭ್ಯಕ್ಕಾಗಿ ಆಗ್ರಹಿಸಿ ಜು.೨೭ರಂದು ಭಾನುವಾರ ಗಾಂಧಿ ಭವನದಲ್ಲಿ ಜನತೆಯ ಸಮಾವೇಶ ಸಂಘಟಿಸಲಾಗುತ್ತಿದೆ. ಜನತೆಯಿಂದ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನದ ಪೂರಕವಾಗಿ ಶುಕ್ರವಾರದಂದು ಜಿಲ್ಲಾ ಕೋರ್ಟ್ ನಲ್ಲಿ ಸಹಿ ಸಂಗ್ರಹ ಕಾರ್ಯ ಹಾಗೂ ಪ್ರಚಾರ ಜರುಗಿತು. ಹಿರಿಯ ನ್ಯಾಯವಾದಿ ಆರ್ ಪಾಂಡು ಸೇರಿದಂತೆ ಅನೇಕ ವಕೀಲರು ಹೃತ್ಪೂರ್ವಕ ಬೆಂಬಲ ಸೂಚಿಸಿದರು ಎಮದು ಬಿ ಎನ್ ಹೆಚ್ ಎಸ್ ಪರವಾಗಿ ಕಾರ್ಯಕಾರಿ ಸಮಿತಿಯ ಸದಸ್ಯೆ ಶಾಂತ ತಿಳಿಸಿದ್ದಾರೆ.
ಹಲವಾರು ವಕೀಲರು, ಬಳ್ಳಾರಿಯಲ್ಲಿ ಅನೇಕ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಎಲ್ಲರೂ ಮುಂದಾಗಬೇಕೆAದು ಅಭಿಪ್ರಾಯ ಹೇಳಿದರು. ಈ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಬಳ್ಳಾರಿ ನಾಗರಿಕ ಹೊರಟ ಸಮಿತಿಯ ಸಂಚಾಲಕರಾದ ಸೋಮಶೇಖರ್ ಗೌಡ, ಡಾ.ಪ್ರಮೋದ್, ರೋಹನ್, ಬಾಲಯೋಗಿ, ಶರ್ಮಾಸ್ ನಾಗರತ್ನ ರವರು ಭಾಗವಹಿಸಿದ್ದರು.