ಬಳ್ಳಾರಿ,ಅ.10..: ನಗರದಲ್ಲಿ ಆz¬À್ಯತೆ ರಹಿತ, ಅವೈಜ್ಞಾನಿಕ ಕಾಮಗಾ¬ರಿಗಳನ್ನು ವೈಜ್ಞಾನಿಕವಾಗಿ, ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಜನತೆಗೆ ಸೂಕ್ತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿ.ಎನ್.ಎಚ್.ಎಸ್.)ಯಿಂದ ಮಹಾನಗರ ಪಾಲಿಕೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಿ.ಎನ್.ಎಚ್.ಎಸ್.ನ ಜಿಲ್ಲಾ ಸಂಚಾಲಕ ಸೋಮಶೇಖರ್ ಗೌಡ ಮಾತನಾಡಿ, ನಗರದಾದ್ಯಂತ ಹೆಚ್ಚುತ್ತಿರುವ ಕುಣಿ ತುಂಬಿದ ರಸ್ತೆಗಳು, ನಿರ್ವಹಣೆ ಶೂನ್ಯವಾದ ಒಳಚರಂಡಿಗಳು, ಅನೇಕ ಕಡೆ ಪೈಪ್ಲೈನ್ ಹಾಕಲು ತೋಡಿದ, ವರ್ಷಗಟ್ಟಲೆ ಹಾಗೇ ಇರುವ ಗುಂಡಿಗಳು, ವರ್ತುಲ ರಸ್ತೆ ಇಲ್ಲದೆ ಇರುವುದರಿಂದ ನಗರದಲ್ಲಿ ೬೦- ೭೦ ಟನ್ ವಾಹನಗಳ ಓಡಾಟದಿಂದ ಗಣಿಗಳ ರಸ್ತೆಯಂತೆ ತಗ್ಗು ದಿನ್ನೆಗಳಾಗಿರುವ ದೂಳು ತುಂಬಿದ ರಸ್ತೆಗಳು, ನಗರವ್ಯಾಪಿ ಬೀದಿನಾಯಿಗಳು ಹಾಗೂ ಬಿಡಾಡಿ ದನಗಳು. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಜೊತೆಯಲ್ಲಿ ಚರಂಡಿ ನೀರು ಬರುವುದು, ಅವೈಜ್ಞಾನಿಕವಾಗಿ ರಸ್ತೆಗಳನ್ನು ಎತ್ತ¬ರಿಸುತ್ತಾ ಹೋಗಿ ಮನೆಗಳು ತಗ್ಗಿನಲ್ಲಿದ್ದು, ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಭಯ, ಇಂತಹ ಅನೇಕ ಸಮಸ್ಯೆಗಳಿಂದ ನಗರದ ಜನತೆ ತತ್ತರಿಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿನ ಬಳ್ಳಾರಿ ನಗರದ ಬೆಳವಣಿಗೆಗಳನ್ನು ಗಮನಿಸಿದ ಜನಸಾಮಾನ್ಯ¬ರಿಗೆ ಅನೇಕ ಪ್ರಶ್ನೆಗಳು ಎದ್ದಿದ್ದು, ನಗರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಮುಂಚೆ ಯೋಜನೆ ಮಾಡಿ ನಂತರ ಕಾಮಗಾರಿಗಳು ಆರಂಭಿಸುವರೆ..? ಅಥವಾ ಕಾಮಗಾರಿಗಳನ್ನು ಪ್ರಾರಂಭಿಸಿ, ಅವೈಜ್ಞಾನಿಕವಾಗಿ ರಸ್ತೆ ಅಥವಾ ವೃತ್ತಗಳನ್ನು ನಿರ್ಮಿಸುತ್ತಾ, ತಿಂಗಳುಗಟ್ಟಲೇ ಕಾಲಹರಣ ಮಾಡುತ್ತಿರುವರೇ…? ಮಹಾನಗರ ಪಾಲಿಕೆಯಲ್ಲಿ ಈ ಕಾಮಗಾ¬ರಿಗಳನ್ನು ಯೋಜಿಸುವ ಇಂಜಿನಿಯರ್ಗಳು ಇದ್ದಾರೆಯೇ? ಅಥವಾ ಇವರು ಇದ್ದರೂ ಕಾಮಗಾರಿಗಳನ್ನು ಕೈಗೊಳ್ಳುವ ಮುಂಚೆ ಯೋಜಿಸುವ ಯೋಚಿಸುವ ವಿವೇಚಿಸುವ ಗೊಡವೆಗೆ ಹೋಗದೇ ಇದು ನಮ್ಮ ಕೆಲಸವಲ್ಲ, ಗುತ್ತಿಗೆದಾರರ ಜವಾಬ್ದಾರಿ ಎಂದು ಕೈಕಟ್ಟಿ ಕುಳಿತಿರುವರೇ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ ಎಂದರು. ಈಗಾಗಲೇ ಎರಡು ಬಾರಿ ದ್ವಂಸ ಮಾಡಿ, ಹತ್ತಾರು ಕೋಟಿ ಖರ್ಚು ಮಾಡಿ ದಿನನಿತ್ಯ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಾಯಲ್ ಸರ್ಕಲ್, ಇದಕ್ಕೆ ಪ್ರತಿ ಸ್ಪರ್ಧಿಯೆಂಬAತೆ ಹಲವು ಕೋಟಿಗಳನ್ನು ಖರ್ಚು ಮಾಡಿ ನಿರ್ಮಾಣವಾಗುತ್ತಿರುವ ಎಸ್.ಪಿ. ಸರ್ಕಲ್ ಝೇಂಕರಿಸುತ್ತಾ ಹೇಳುತ್ತದೆ ‘ನಿನಗಿಂತ ನಾನು ಪರಿಣಾಮಕಾ¬ರಿಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಬಲ್ಲೆ ಎಂದು’. ದುರದೃಷ್ಟವಷಾತ್ ನಗರದಲ್ಲಿ ಜನತೆಯ ಆಶಯಗಳು ಒಂದಾದರೆ, ನಮ್ಮ ಸ್ಥಳೀಯ ಸಂಸ್ಥೆಗಳ ಆಶಯಗಳು ಬೇರೆಯಾಗಿವೆ ಎನ್ನುವುದು ಸೂರ್ಯನ ಬೆಳಕಿನಂತೆ ಸ್ಪಷ್ಟವಾಗಿದೆ. ಆದ್ದರಿಂದ ಈಗಾಗಲೇ ನಗರಾದ್ಯಂತ ಕೈಗೊಂಡಿರುವ, ಆಮೆಗತಿಯಲ್ಲಿ ಸಾಗುತ್ತಿರುವ ಎಲ್ಲಾ ಕಾಮಗಾರಿಗಳನ್ನು ಕಾಲ ವಿಳಂಬ ಮಾಡದೆ ತುರ್ತಾಗಿ ಮಾಡಿ ಮುಗಿಸಬೇಕು. ರಸ್ತೆಗಳ ಕುಣಿಗಳನ್ನು ಮುಚ್ಚಿ, ನಗರದಲ್ಲಿ ಬಾರಿ ವಾಹನಗಳ ಸಂಚಾರ ತಡೆಯಲು ತುರ್ತಾಗಿ ವರ್ತುಲ ರಸ್ತೆ ನಿರ್ಮಿಸಬೇಕು. ಬೀದಿ ನಾಯಿ ಹಾಗೂ ಬೀಡಾಡಿ ದನಗಳಿಂದ ಆಗುವ ಅಪಾಯ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆಯಲ್ಲಿ ಕೆಲಸಗಳನ್ನು ಕೈಗೊಂಡು ಜನತೆಗೆ ತೊಂದರೆಯಾಗದAತೆ ಕಾಮಗಾರಿಗಳನ್ನು ಬೇಗ ಮುಗಿಸಬೇಕು. ಹಳೇ ಬಸ್ ನಿಲ್ದಾಣದಲ್ಲಿ ಬಸ್ಗಳ ಸಂಚಾರಕ್ಕೆ ಅಡ್ಡಿಯನ್ನು ತೆರವುಗೊಳಿಸಬೇಕು.
ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗದಂತೆ ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕ ಯೋಜನೆರಹಿತ ಕಾಮಗಾ¬ರಿಗಳಿಂದ ಜನತೆಗೆ ಕಿರುಕುಳವಾಗುವುದನ್ನು ತಪ್ಪಿಸಲು ಆದ್ಯತೆ ಮೇರೆಗೆ ಯೋಜನೆ ಬದ್ಧವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಆಗ್ರಹಿಸುತ್ತದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ಕೂಡಲೇ ಎಚ್ಚೆತ್ತುಕೊಂಡು ಜನತೆಯ ಈ ಜ್ವಲಂತ ಸಮಸ್ಯೆಗಳನ್ನು ಬಗೆಹ¬ರಿಸದಿದ್ದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟಕ್ಕೆ ಜನತೆ ಸಜ್ಜಾಗುವುದು ಶತಶಿದ್ಧ” ಎಂದು ಹೇಳಿದರು.
ಬಿ.ಎನ್.ಎಚ್.ಎಸ್.ನ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗರತ್ನ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶ್ಯಾಮಸುಂದರ್, ಗುರುರಾಜ್, ಮಂಜುನಾಥ್, ಗೋಪಾಲ ಕೃಷ್ಣ, ವಿರೇಶ್, ಅಂx¬ೆÆÃನಿ ಮತ್ತಿತರರು ಸೇರಿದಂತೆ ಹಲವಾರು ಬಡವಣೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೋಟೇಶ್ವರ ರಾವ್ ಉಪಸ್ಥಿತರಿದ್ದು, ಜನತೆಯ ಹಲವಾರು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.


