ಸದೃಢಆರೋಗ್ಯಕ್ಕೆ, ಸಮಾಜಸೇವೆಗೆ ರಕ್ತದಾನ ಅಗತ್ಯ: ಡಾ.ಮಹಾಂತೇಶ ರಾಮಣ್ಣನವರ

Ravi Talawar
ಸದೃಢಆರೋಗ್ಯಕ್ಕೆ, ಸಮಾಜಸೇವೆಗೆ ರಕ್ತದಾನ ಅಗತ್ಯ: ಡಾ.ಮಹಾಂತೇಶ ರಾಮಣ್ಣನವರ
WhatsApp Group Join Now
Telegram Group Join Now

ಬೆಳಗಾವಿ 29 : ಸರ್ವದಾನಗಳಲ್ಲಿ ರಕ್ತದಾನ ಶ್ರೇಷ್ಠವಾದುದು. ಒಬ್ಬರೋಗಿಯಜೀವವನ್ನು ಉಳಿಸುವಲ್ಲಿ ರಕ್ತದಾನದ ಪಾತ್ರ ಹಿರಿದಾಗಿದೆ. ಪ್ರತಿಯೊಬ್ಬ ಸದೃಢವಾದ ವ್ಯಕ್ತಿ ಪ್ರತಿವರ್ಷಎರಡರಿಂದ ಮೂರ ಸಲ ರಕ್ತದಾನವನ್ನು ಮಾಡುವುದುಆರೋಗ್ಯದದೃಷ್ಠಿಯಿಂದ ಮಹತ್ವವೆನಿಸಿದೆ ಎಂದು ಕೆಎಲ್‌ಇ ಶ್ರೀ ಬಿ.ಎಂ.ಕಂಕಣವಾಡಿಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರದ ಮುಖ್ಯಸ್ಥರು ಹಿರಿಯ ಪ್ರಾಧ್ಯಾಪಕರಾದಡಾ.ಮಹಾಂತೇಶರಾಮಣ್ಣನವರ ಹೇಳಿದರು.

ಅವರು ಲಿಂಗರಾಜಕಾಲೇಜಿನ ಎನ್‌ಸಿಸಿ ಘಟಕದಲ್ಲಿರಕ್ತದಾನದೇಹದಾನ ಹಾಗೂ ಅಂಗಾಂಗದಾನಕುರಿತುಉಪನ್ಯಾಸವನ್ನು ನೀಡಿದರು. ರಕ್ತದಾನಕುರಿತು ಸಾಕಷ್ಟು ತಪ್ಪು ಅನಿಸಿಕೆಗಳಿದ್ದರೆ ತಲೆಯಿಂದತೆಗೆದುಹಾಕಿ, ನಮ್ಮದೈಹಿಕಆರೋಗ್ಯಕ್ಕೆರಕ್ತದಾವನ್ನು ಮಾಡಲೇಬೇಕು. ೧೮ ವರ್ಷದಾಟಿದ ಸದೃಢವಾದಯುವಕಯುವತಿಯರುತಪ್ಪದೇರಕ್ತದಾನವನ್ನು ವರ್ಷದಲ್ಲಿ ನಿಯಮಿತವಾಗಿ ಮಾಡಬೇಕು. ಇದರಿಂದಒಬ್ಬ ವ್ಯಕ್ತಿಯನ್ನು ಬದುಕಿಸಿದ ಪುಣ್ಯಪ್ರಾಪ್ತಿಯಾಗುವುದುಅದರೊಂದಿಗೆ ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಾವಿನ ನಂತರದೇಹದಾನ ಹಾಗೂ ಅಂಗಾಂಗದಾನಗಳ ವೈಜ್ಞಾನಿಕವಾದಅರಿವು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಮರಣದ ನಂತರ ನಮ್ಮದೇಹವನ್ನು ಸುಟ್ಟೋಅಥವಾ ಮಣ್ಣಲ್ಲಿ ಹೂತೋ ಹಾಕುತ್ತಾರೆಅದರ ಬದಲಾಗಿದೇಹದಾನ ಮಾಡುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವುದು. ಅಷ್ಟೇ ಅಲ್ಲದೇ ನಮ್ಮ ನೇತ್ರದಾನವನ್ನು ಮಾಡುವುದರಿಂದಇಬ್ಬರಿಂದ ಮೂವರುಅಂಧರ ಬದುಕಿಗೆ ಬೆಳಕಾಗಬಹುದು.

ಮಾತ್ರವಲ್ಲದೆಚರ್ಮ ಹಾಗೂ ಇತರ ಅಂಗಾಂಗ ದಾನವನ್ನು ಮಾಡುವುದರಿಂದಇನ್ನೊಬ್ಬ ಬದುಕಿಗೆಜೀವತುಂಬಿದತೃಪ್ತಿಭಾವ ನಮ್ಮದಾಗುವುದು. ಇಂದು ಸಮಾಜವು ಬದಲಾಗುತ್ತಿದೆ. ಅನೇಕ ದೇಹದಾನಿಗಳು ಸ್ವಯಂ ಮುಂದೆ ಬರುತ್ತಿರುವುದುಅಭಿಮಾನದ ಸಂಗತಿ. ಅದರಜಾಗೃತಿಯನ್ನುಇನ್ನಷ್ಟು ಮೂಡಿಬೇಕಾಗಿದೆಎಂದು ಎನ್‌ಸಿಸಿ ಕೆಡೆಟ್‌ಗಳಿಗೆ ಕರೆನೀಡಿದರು.

ವೇದಿಕೆಯ ಮೇಲಿ ಲಿಂಗರಾಜಕಾಲೇಜಿನ ಎನ್‌ಸಿಸಿ ಅಧಿಕಾರಿಕ್ಯಾಫ್ಟನ್‌ಡಾ.ಮಹೇಶ ಗುರನಗೌಡರ, ಪ್ರಭಾರಿ ಪ್ರಾಚಾರ್ಯಡಾ.ಮಲ್ಲಣ್ಣ ಉಪಸ್ಥಿತರಿದ್ದರು. ಕೆಡೆಟ್ ವೈಷ್ಣವಿ ಮಾಲಿ ವಂದಿಸಿದರು. ಸಿನಿಯರ್ ಅಂಡರ್‌ಆಫೀಸರ್ ಶಿವರಾಜ ಪಾಟೀಲ, ಜ್ಯೂನಿಯರ್‌ಅಂಡರ್‌ಆಫೀಸರ್ ಧೀರಜ್ ಭಾವಿಮನೆ ವಿಶೇಷ ಉಪನ್ಯಾಸವನ್ನು ಸಂಯೋಜಿಸಿದ್ದರು.

WhatsApp Group Join Now
Telegram Group Join Now
Share This Article